ಕಲಬುರಗಿ: ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಹಾಗೂ ಬಜೆಟ್ ಘೋಷಣೆಯಂತೆ ಅಕ್ಟೋಬರ್ 20ರಂದು ಸರ್ಕಾರವು ಅಧಿಕೃತ ಆದೇಶ ಹೊರಡಿಸಲಾಗಿದೆ ಉಚಿತ ವಿದ್ಯುತ್ ಒದಗಿಸಿದ್ದರಿಂದ ರಾಜ್ಯದ 45,000 ಸಣ್ಣ ನೇಕಾರ ಕುಟುಂಬಗಳಿಗೆ ನೇರವಾಗಿದೆ ಎಂದು AKDDHNSS ರಾಜ್ಯ ಅಧ್ಯಕ್ಷ ಚಂದ್ರಶೇಖರ್ ಸುಲ್ತಾನ್ ಪುರ್ ಹರ್ಷ ವ್ಯಕ್ತಪಡಿಸಿದ್ದಾರೆ.
20 ಎಚ್ಪಿ ವರೆಗೆ ಕೈಮಗ್ಗ ಹಾಗೂ ಮಾಸಿಕ 500 ಯೂನಿಟ್ ವರೆಗೆ ದರದಲ್ಲಿ ದೊಡ್ಡ ನೇಕಾರರಿಗೂ ಕೂಡ ಅನುಕೂಲವಾಗಿದೆ, ಇದಲ್ಲದೆ ಶೇಕಡ 80% ನೇಕಾರರು 10 ಹೆಚ್ ಪಿ ವರೆಗೆ ವಿದ್ಯುತ್ ಹೊಂದಿದ್ದರೂ ಕೂಡ ಹೆಚ್ಚಿನ ಅನುಕೂಲವಾಗಿದೆ ಎಂದು ತಿಳಿಸಿದ್ದಾರೆ.
ಸಪ್ತ ನೇಕಾರ ಪರವಾಗಿ ಅಖಿಲ ಕರ್ನಾಟಕ ಹಟಗಾರ ನೇಕಾರ ಸಮಾಜದ ಪರವಾಗಿ ಕೃತಜ್ಞತೆಯನ್ನು ಸಲ್ಲಿಸುತ್ತೇವೆ ಇದೆ ರೀತಿ ನಮ್ಮ ಯುವಕರಿಗೆ ಉದ್ಯೋಗಾವಕಾಶ ಒದಗಿಸಿ ಕೊಡಬೇಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.