ಕಿತ್ತೂರು ರಾಣಿ ಚನ್ನಮ್ಮಸಮಾಧಿಗೆ ರಾಷ್ಟ್ರೀಯ ಸ್ಮಾರಕವಾಗಿ ಅಭಿವೃದ್ಧಿಪಡಿಸಲು ಕೊಡಲಹಂಗರಗಾ ಆಗ್ರಹ

0
25

ಕಲಬುರಗಿ; ಜಿಲ್ಲಾ ವೀರಶೈವ ಸಮಾಜದ ವತಿಯಿಂದ, ವೀರಶೈವ ಕಲ್ಯಾಣ ಮಂಟಪದಲ್ಲಿ ಕಿತ್ತೂರ ರಾಣಿ ಚನ್ನಮ್ಮರ 246ನೆಯ ಜಯಂತೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗತ್ತು.

ಕಾರ್ಯಕ್ರಮವು ಸೂರ್ಯಕಾಂತ ಡುಮ್ಮಾ ಅವರ ವಚನ ಸಂಗೀತದೊಂದಿಗೆ ಪ್ರಾರಂಭಗೊಂಡಿತು. ವಿ ಜಿ ಮಹಿಳಾ ಮಹಾವಿದ್ಯಾಲಯದ ಇತಿಹಾಸ ಪ್ರಾಧ್ಯಾಪಕಿ ಡಾ ಶೀವಲೀಲಾ ದೋತ್ರೆ ಅವರು ರಾಣಿ ಚನ್ನಮ್ಮರು ಈ ದೇಶದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಹೋರಾಟಗಾರ್ತಿಯ ಜೀವನ ಚರಿತ್ರೆ, ಸಾಹಸ ಹಾಗೂ ನಾಡಿನ ದೇಶಪ್ರೇಮದ ಕುರಿತು ಮಾತನಾಡಿದರು.

Contact Your\'s Advertisement; 9902492681

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಅರುಣಕುಮಾರ ಪಾಟೀಲ ಕೊಡಲಹಂಗರಗಾ ಅವರು ಮಾತನಾಡಿ ರಾಣಿ ಚನ್ನಮ್ಮ ಅವರು ಲಿಂಗಾಯತ ಸಮಾಜದ ಈ ಕನ್ನಡ ನಾಡಿನ ರಾಷ್ಟ್ರ ಪ್ರೇಮಿ ದಿಟ್ಟ ದಿಟ್ಟ ಹೋರಟಗಾರ್ತಿ, ಮತ್ತು ಸುಸಂಸ್ಕøತ ಮಹಿಳೆ ಅವರು ಇಂದಿನ ಮಹಿಳೆಯರಿಗೆ ಸ್ಪೂರ್ತಿ ಆಗಿದ್ದಾರೆ. ಅವರು ರಾಷ್ಟ್ರಪ್ರೇಮದ ಪ್ರತೀಕವಾಗಿದ್ದಾರೆ ಹಾಗಾಗಿ ಬೈಲಹೊಂಗಲದಲ್ಲಿ ಕಿತ್ತೂರು ರಾಣಿ ಚನ್ನಮ್ಮಸಮಾದಿ ಪ್ರದೇಶವನ್ನು ರಾಷ್ಟ್ರೀಯ ಸ್ಮಾರಕವಾಗಿ ಅಭಿವೃದ್ಧಿಪಡಿಸಲು ಸರಕಾರಕ್ಕೆ ಆಗ್ರಹಿಸಿದರು.

ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿದ್ದ ಗದ್ದುಗೆ ಮಠದ ಶ್ರೀ ಮ ನಿ ಪ್ರ ಚರಲಿಂಗ ಮಹಾಸ್ವಾಮಿಗಳು ಆಶಿರ್ವಚನ ನೀಡಿ ರಾಣಿ ಚನ್ನಮ್ಮರ ಆದರ್ಶ ಜೀವನವನ್ನು ಸಮಾಜ ಬಾಂಧವವರು ಜೀವನದಲ್ಲಿ ಪಾಲಿಸಲು ಕರೆನೀಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪೂಜ್ಯ ಉಪ ಮಹಾಪೌರರಾದ ಶಿವಾನಂದ ಪಿಸ್ತಿ, ಹೈದರಾಬಾದ ಕರ್ನಾಟಕ ಚೆಂಬರ ಆಪ್ ಕಾಮರ್ಸಿನ ಅಧ್ಯಕ್ಷ ಶಶಿಕಾಂತ ಪಾಟೀಲ, ಕಲ್ಯಾಣಪ್ಪ ಪಾಟೀಲ ಮಳಖೇಡ, ಸುಭಾಸ ಬಿಜಾಪುರೆ ಮಾತನಾಡಿದರು.

ಇದೇ ಸಂದರ್ಭದಲ್ಲಿ ಮಹಿಳಾ ಸಾದಕೀಯರಾದ ಡಾ.ಅಮೃತಾ ಕಟಕೆ ಪ್ರಾಧ್ಯಾಪಕರು ಮತ್ತು ಪ್ರಾಂಶುಪಾಲರು ಸರಕಾರಿ ಪದವಿ ಮಹಾವಿದ್ಯಾಲಯ ಹಾಗೂ ಸಾಮಾನ್ಯ ಕೆಲಗಾರ್ತಿಯಾಗಿ ಇಂದು ನೂರಾರು ಮಹಿಳೆಯರಿಗೆ ಉದ್ಯೋಗ ನೀಡುತ್ತಿರುವ ಸುರೇಖಾ ಮಲ್ಲಿಕಾರ್ಜುನ ಪಾಟೀಲ ಅವರನ್ನು ಗೌರವ ಪುರಸ್ಕಾರ ನೀಡಲಾಯಿತು.

ಈ ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರಾದ ಸಂಗಮೇಶ ನಾಗನಳ್ಳಿ, ರಮೇಶ ಪಾಟೀಲ, ರಮೇಶ ತಿಪನೂರ, ಚಂದ್ರಶೇಖರ ತಳ್ಳಳ್ಳಿ, ಡಾ. ಶ್ರೀಶೈಲ ಘೂಳಿ ಮಹಾನಗರ ಪಾಲಿಕೆ ಸದಸ್ಯರಾರ ವೀರಣ್ಣ ಹುನಳ್ಳಿ, ಜಗದೀಶ ಗತ್ತೇದಾರ, ಚನ್ನು ಲಿಂಗನವಾಡಿ, ಸುನೀಲ ಮಚ್ಚಟ್ಟಿ, ದಿಗಂಬರ ಮಾಗಣಗೇರಿ, ಮಲ್ಲು ಉದನೂರ, ರವಿ ಹಾಗರಗಿ, ಮಂಜು ಕಳಸಕರ, ಸಚಿನ್ ಕಡಗಂಚಿ ಹಾಗೂ ರಾಜಕುಮಾರ ಕೋಟಿ, ಜಗನ್ನಾಥ ಪಟ್ಟಣಶೆಟ್ಟಿ, ಶರಣು ಖಾನಾಪೂರ, ಶಾಲಾ ಮುಖ್ಯೋಪಾಧ್ಯಾಯಿನಿ ಮಾತಾಜಿ, ಮಹಿಳಾ ಪ್ರತಿನಿಧಿಗಳಾದ ಶೀಲಾ ಮುತ್ತಿನ, ಶ್ರೀದೇವಿ ಸಗಸನಗೇರಿ ಸೆರಿದಂತೆ ನೂರಾರು ಮಹಿಳೆಯರು ಭಾಗವಹಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here