ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ ಕಾರ್ಯಕ್ರಮ ಅ.೭ರಿಂದ ಐದು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ.
ಅ.೧೧ರಂದು ಮುಕ್ತಾಯಗೊಳ್ಳಲಿದೆ.
ಪ್ರತಿದಿನ ಬೆಳಿಗ್ಗೆ ೧೧.೩೦ ರಿಂದ ಪುರಾಣ ಪ್ರಾರಂಭವಾಗಲಿದೆ.ಡಾ.ಪಂ. ಪುಟ್ಟರಾಜ ಗವಾಯಿಗಳ ಶಿಷ್ಯರಾದ ವಡಗೇರಾದ ಮಲ್ಲಯ್ಯಸ್ವಾಮಿ ಹಿರೇಮಠ ಪುರಾಣ ಪ್ರವಚನ ಮಾಡಲಿದ್ದಾರೆ. ರಾಜಶೇಖರ ಗೆಜ್ಜಿ, ಕಿರಣಕುಮಾರ ಸಿಂಪಿ ತಬಲಾ, ಚಂದ್ರಹಾಸ ಲಕ್ಷ್ಮೀಪುರ, ರತ್ನಾಕರ ಬಣಗಾರ ಹಾರ್ಮೋನಿಯಂ ಸಾಥ ನೀಡಲಿದ್ದಾರೆ.
ಕಾರ್ಯಕ್ರಮದ ಸಾನಿಧ್ಯವನ್ನು ರುಕ್ಮಾಪುರ ಗ್ರಾಮದ ಸಂಸ್ಥಾನ ಹಿರೇಮಠದ ಶ್ರೀ ಗುರುಶಾಂತಮೂರ್ತಿ ಶಿವಾಚಾರ್ಯರು, ಕಲಬುರಗಿಯ ಮಹಾಂತೇಶ ಮಮ್ಮಸಪೇಟ ಸಾನಿಧ್ಯ ವಹಿಸುವರು. ಅಧ್ಯಕ್ಷತೆಯನ್ನು ಕೊಟ್ರಯ್ಯಸ್ವಾಮಿ ಬಳುಂಡಗಿಮಠ ವಹಿಸುವರು.
ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಬಣಗಾರ ಬಂಧುಗಳು ಮನವಿ ಮಾಡಿದ್ದಾರೆ.