ವಿದ್ಯಾರ್ಥಿಗಳಿಗೆ ಗ್ರಾಮೀಣ ಕೃಷಿ ತರಬೇತಿ

0
64

ಕಲಬುರಗಿ: ರಾಯಚೂರ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ವ್ಯಾಪ್ತಿಯ ಕೃಷಿ ಮಹಾವಿದ್ಯಾಲಯ ಕಲಬುರಗಿಯ ಅಂತಿ ಕೃಷಿ ಪದವಿ ವಿದ್ಯಾರ್ಥಿಗಳು ಆಳಂದ ತಾಲೂಕಿನ ಕಡಗಂಚಿ ಗ್ರಾಮದ ಸುತ್ತಲಿನ ಹೊಲಗಳಿಗೆ ಭೇಟಿ ನೀಡಿ ಕೃಷಿ ಸಮಸ್ಯೆ ಬೆಳೆಗಳಲ್ಲಿ, ಕೀಟ, ರೋಗ, ಹತೋಟಿ ಕ್ರಮಗಳ ಕುರಿತು ಕಲಬುರಗಿ ಕೃಷಿ ವಿಜ್ಞಾನ ಕೇಂದ್ರದ ಸಸ್ಯರೋಗ ತಜ್ಞರಾದ ಡಾ. ಜಹೀರ್ ಅಹೆಮದ್, ಕೃಷಿ ಮಹಾವಿದ್ಯಾಲಯದ ತೋಟಗಾರಿಕೆ ಉಪನ್ಯಾಸಕರಾದ ಡಾ. ಮಹಾಂತೇಶ ಜೋಗಿ ಉಪಸ್ಥಿತರಿದ್ದರು.  ಸೂರ್ಯಕಾಂತಿ, ಹತ್ತಿ, ಮೆಣಸಿನಕಾಯಿ, ಬದನೆ, ಟಮೋಟೋ, ದ್ರಾಕ್ಷಿ ಬೆಳೆಯಲ್ಲಿ ಕಂಡು ಬಂದ ರೋಗಗಳ ನಿರ್ವಹಣೆ ಮಾಹಿತಿ ನೀಡಿದರು.

ತೊಗರಿ ಹೂ ಕಟ್ಟುವಿಕೆ ಸಂದಿಗ್ದತೆಯಲ್ಲಿ ಭೂಮಿಯಲ್ಲಿ ಹಸಿ ಅಂಶ ಕಡಿಮೆಯಿದ್ದು. ರೈತರು ಚಂಡಮಾರುತ ಪ್ರಭಾವದಿಂದ ಮಳೆಯಾಗುವ ನೀರಿಕ್ಷಯಲ್ಲಿ ಕಾಯುತ್ತಿದ್ದಾರೆ.  ಆದರೆ ಬಂಗಾಳಕೊಲ್ಲಿ, ಅರಬ್ಬಿಸಮುದ್ರದಲ್ಲಿ ಸೃಷ್ಟಿಯಾದ ವಾಯುಭಾರ ಕುಸಿತ, ಮಳೆ ಉತ್ತರ ಕರ್ನಾಟಕ ಭಾಗಕ್ಕೆ ಮಳೆಯ ಪರಿಣಾಮ ಬೀರುವುದಿಲ್ಲ ಎಂದು ಕೃಷಿ ವಿಜ್ಞಾನಿಗಳು ತಿಳಿಸಿದ್ದಾರೆ.

Contact Your\'s Advertisement; 9902492681

ಜಿಲ್ಲೆಯು ಬಹುತೇಕ ಮಳೆಯಾಶ್ರಿತ ಪ್ರದೇಶದಲ್ಲಿ ತೊಗರಿ 30% ಹೂ ಹಂತ ಹೊಂದಿದ್ದು, ತೇವಾಂಶ ಕೊರತೆಯಿಂದ ಎಲೆಗಳು ಹಳದಿಯಾಗಿ ನಂತರ ಒಣಗಿ ಉದುರುತ್ತಿವೆ ಹಾಗೂ ಭೂಮಿಯ ಮೇಲ್ಪದರು ಅಲ್ಲಲ್ಲಿ ಬಿರುಕು ಬಿಡುತ್ತಿದೆ.  ರೈತರಿಗೆ ಹವಾಮಾನ ವೈಪರೀತ್ಯ ಮತ್ತು ಕೃಷಿ ಸಲಹೆಗಳ ಮಾಹಿತಿ ನೀಡಲಾಯಿತು.

ಎಲೆ ಸುರಳಿ ಪುಚಿ ಮತ್ತು ಸಣ್ಣ ಕೀಡೆಗಳು ಕಂಡು ಬಂದರೆ ತತ್ತಿನಾಶಕ ಪ್ರಪೋನಾಫಾಸ್ 2 ಮಿ.ಲೀ. ಪ್ರತಿ ಲೀಟರ್ ನೀರಿಗಗೆ ಬೆರೆಸಿ ಸಿಂಪಡಿಸುವಂತೆ ತಿಳಿಸಿದರು. ತೊಗರಿ ಸಾಲುಗಳ ನಡುವೆ ಎಡೆ-ಕುಂಟೆ ಮಾಡುವುದರಿಂದ ಬೆಳೆ ನಿರ್ವಹಣೆ ಮಾಡುವುದು ಸೂಕ್ತ. ಗ್ರಾಮೀಣ ಕೃಷಿ ತರಬೇತಿ ಕಾರ್ಯಕ್ರಮ 2 ತಿಂಗಳುಗಳ ಕಾಲ ನಡೆಯಲಿದೆ. ಸೂರ್ಯಕಾಂತಿ, ಕಲ್ಲಂಗಡಿ, ನೆಕ್ರಾಸಿಸ್ ನಂಜಾಣುರೋಗ, ಬದನೆ ಪೈಟೋಪ್ಲಾಸ್ಮ ಸಣ್ಣ ಎಲೆ, ಟಮಾಟೋ ಅಂಗಮಾರಿ ರೋಗ, ಉಳಾಗಡ್ಡಿ, ನೇರಳೆ ಮಚ್ಚೆರೋಗ ಹಾಗೂ ವಕ್ರಕಾಂಡ ನ್ಯೂನತೆ ನಿರ್ವಹಣಾ ಕ್ರಮಗಳನ್ನು ಕೃಷಿ ವಿದ್ಯಾರ್ಥಿಗಳಿಗೆ ಹಾಗೂ ರೈತರಿಗೆ ವಿವರಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here