ಕಲಬುರಗಿ : ತೋಟದ ಮನೆಗಳಿಗೆ ಸಿಂಗಲ್, ಪೇಸ್ ವಿದ್ಯುತ ಮತ್ತು ರೈತರಿಗೆ ಬೆಳೆ, ಪರಿಹಾರ ಕೋಡುವುದ ಕುರಿತು, ಮತ್ತು ಮಹಾರಾಷ್ಟ್ರದ ಉಜ್ಜನಿ ಡ್ಯಾಮನಿಂದ ಭೀಮಾ ನದಿಗೆ ನೀರು ಬಿಡಬೇಕು ಜೆಡಿಎಸ್ ಮುಖಂಡರು, ಕಾರ್ಯಕರ್ತರು ಉರುಳು ಸೇವೆ ಮಾಡುವು ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ನವೆಂಬರ್ 6.ರಂದು ಸಲ್ಲಿಸುವುದು ಎಂದು ಜಾತ್ಯಾತೀತ ಜನತಾ ದಳದ ಜಿಲ್ಲಾ ಕಾರ್ಯದರ್ಶಿ ರಾಜಕುಮಾರ ಅ ಬಡದಾಳ ಅವರು ತಿಳಿಸಿದ್ದಾರೆ.
ಹಲವಾರು ವರ್ಷಗಳಿಂದ ಕೂಡಿದ ಮನೆಗಳಗೆ ಸಿಂಗಲ ಪೇಪ ವಿದ್ಯುತ ಕೊಡಬೇಕೆಂದು ಹೊರಾಟಗಳು ನಡೆದಿದ್ದವು ಆಗಿನ ಸರಕಾರ ರೈತರಿಗೆ ಮರಳು ಮಾಡು ಸರ್ವೆ ಕಾರ್ಯ ಮಾಡಿದ ಮೇಲೆ ವಿದ್ಯುತ್ ಕೊಡುತ್ತೇವೆ ಎಂದು ಹೇಳಿ ರೈತರಿಗೆ ವಂಚನೆ ಮಾಡಿದ್ದಾರೆ. ನಾವು ಪದೇ-ಪದೇ ಸರಕಾರಕ್ಕೆ ಒತ್ತಾಯ ಮಾಡುವುದೆನೆಂದರೆ ತೋಟದ ಮನೆಗಳಲ್ಲಿ ವಾಸಿಸುವ ಮಕ್ಕಳಿಗೆ ವಿದ್ಯಾಭ್ಯಾಸ ತೊಂದರೆಯಾಗುತ್ತಿದ್ದು, ಮತ್ತು ರೈತರ ಎಣ್ಣೆ ಸಿಂಪಡನೆ ಮಾಡುವ ಯಂತ್ರ (ಮಷಿನ್) ಜಾಜಿರ್ಂಗ್ ಬ್ಯಾಟರಿಗಳಿಗೆ ಪಾರ್ಚೆ ಮಾಡಲು ಅವಶ್ಯಕತೆ ಇರುವುದರಿಂದ ಹಾಗೂ ವಿಷ ಜಂತುಗಳು ಹಾವಳಗಳು ಹೆಚ್ಚಾಗಿ ರಾತ್ರಿ ಹೊತ್ತು ಹೊರಗಡೆ ಬರುತ್ತವೆ. ಈಗಾಗಲೆ ಎಷ್ಟು ಜನ ಹಾವು ಕಡಿಸಿಕೊಂಡು ಮರಣ ಹೊಂದಿದ್ದಾರೆ.
ಎಷ್ಟು ರೈತ ಕುಟುಂಬಗಳು ಬಿದಿಪಾಲಾಗಿದ್ದಾರೆ. ಅದಕ್ಕಾಗಿ ಪದೇ ಪದೇ ಸರಕಾರಕ್ಕೆ ಒತ್ತಾಯ ಮಾಡುತ್ತಿದ್ದೇವೆ. ಶಿಕ್ಷಣ ರೈತರ ತೋಟದ ಮನೆಗಳಿಗೆ ಸಿಂಗಲ ಪೇಸ್ ವಿದ್ಯುತ್ ಒದಗಿಸಬೇಕಾಗಿ ಎಚ್ಚರಿಕೆ ನೀಡುತ್ತಿದ್ದೆವೆ. ಮಹಾರಾಷ್ಟ್ರದ ಉಜ್ಜನಿ ಡ್ಯಾಮನಿಂದ ಬೇಸಿಗೆ ಕಾಲದಲ್ಲಿ 5 ಟಿ.ಎಮ.ಸಿ. ನೀರು ಭೀಮಾ ನದಿಗೆ ಹರಿಸಬೇಕು, ಅಫಜಲಪೂರ ತಾಲೂಕನ್ನು ಬರಗಾಲು ಎಂದು ಘೋಷಣೆ ಮಾಡಿರುವದಕ್ಕೆ ಹರ್ಷ ವ್ಯಕ್ತ ಪಡಿಸುತ್ತಾ ಈಗಾಗಲೇ ಹಿಂದಿನ ಸರಕಾರಗಳು, ತಾಲೂಕನ್ನು ಬರಗಾಲ ಎಂದು ಘೋಷಣೆ ಮಾಡಿ ರೈತರಿಗೆ ಒಂದು ಅಡಿಗಾಸು ಪರಿಹಾರ ಕೊಡಲಿಲ್ಲಾ, ತಾಲೂಕಿನ ರೈತರ ಸೂಲ-ಸಾಲ ಮಾಡಿಕೊಂಡು ಅತ್ತನೆ ಕಾರ್ಯ ಮುಗಿಸಿದ್ದಾರೆ, ಮಳೆ ಬಾರದೆ ಇರುವದರಿಂದ ಬೆಳೆ ಒಣಗಿ ಹೋಗುತ್ತಿದೆ. ಅದಕ್ಕೆ ಸರಕಾರ ತಕ್ಷಣ ರೈತರ ಖಾತೆಗಳಿಗೆ ಪ್ರತಿ ಎಕರೆಗೆ 30,000/- ಪರಿಹಾರ ಕೊಡಬೇಕು ಎಂದು ಒತ್ತಾಯಿಸುತ್ತಿದ್ದವೆ.
ಕಲಬುರಗಿ ಹೈಕೋರ್ಟನಿಂದ ಅಫಜಲಪೂರಗೆ ಬರುವ ರಾಷ್ಟ್ರೀಯ ಹೆದ್ದಾರಿಯು ಸಂಪೂರ್ಣವಾಗಿ ಹಾಳಾಗಿದ್ದು, ಈಗಾಗಲೇ ಸಾವಿರಾರು ಅಪಘಾತಗಳು ಸಂಭವಿಸಿ ಕುಟುಂಬಗಳು ನದಿಗೆ ಬಿದ್ದಿವೆ ಇದರಿಂದ ತಕ್ಷಣ ರಾಜ್ಯ ಹೆದ್ದಾರಿಯನ್ನು ತಕ್ಷಣ ದುರಸ್ತಿ ಮಾಡಬೇಕು.
ನವೆಂಬರ್ 06 ರಂದು ಸೋಮವಾರ ಬೆಳಗ್ಗೆ – 11:00 ಕ್ಕೆ ನಗರದ ತಿಮ್ಮಪೂರ ವೃತ್ತದಿಂದ ಜಿಲ್ಲಾಧಿಕಾರಿಗಳ ಕಛೇರಿ ವರೆಗೆ ಉರುಳು ಸೇವೆ ಮಾಡುವ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಸಲಾಗುವುದು. ಎಂದು ರಾಜಕುಮಾರ ಅ ಬಡದಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.