ಸುರಪುರ: ನಗರದರ ರಂಗಂಪೇಟೆಯ ದೊಡ್ಡ ಬಜಾರದಲ್ಲಿ ಕನ್ನಡ ಧ್ವಜಾಸ್ತಂಬ ಹಾಕಲು ಅವಕಾಶ ಮಾಡಿಕೊಡುವಂತೆ ಆಗ್ರಹಿಸಿ ನಗರಸಭೆ ಪೌರಾಯುಕ್ತ ಪ್ರೇಮ್ ಚಾಲ್ರ್ಸ್ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.
ಇದಕ್ಕೂ ಮುನ್ನ ಕಳೆದ ಕೆಲ ದಿನಗಳ ಹಿಂದೆ ನವೆಂಬರ್ 1 ರಂದು ರಾಜ್ಯೋತ್ಸವ ದಿನದಂದು ಹಾಕಲಾಗಿದ್ದ ಧ್ವಜಾಸ್ತಂಬ ತೆರವುಗೊಳಿಸಿರುವುದರ ಕುರಿತು ನಡೆದ ಪ್ರತಿಭಟನೆಯ ಅಂಗವಾಗಿ ಪೌರಾಯುಕ್ತ ಪ್ರೇಮ್ ಚಾಲ್ರ್ಸ್ ಕನ್ನಡಪರ ಹೋರಾಟಗಾರರ ಸಭೆ ನಡೆಸಿದರು,ಈ ಸಂದರ್ಭದಲ್ಲಿ ಭಾಗವಹಿಸಿದ್ದ ಅನೇಕ ಜನ ಹೋರಾಟಗಾರರು ರಾಜ್ಯೋತ್ಸವ ದಿನದಂದು ಧ್ವಜಾಸ್ತಂಬ ತೆರವುಗೊಳಿಸಿದ್ದರ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿ,ಧ್ವಜಾಸ್ತಂಬ ತೆರವಿಗೆ ಯಾರು ಮನವಿ ಸಲ್ಲಿಸಿದ್ದಾರೆ ಹೆಸರು ಬಹಿರಂಗಗೊಳಿಸುವಂತೆ ಪಟ್ಟು ಹಿಡಿದರು,ಅಲ್ಲದೆ ಈಗ ಮತ್ತೆ ಧ್ವಜಾಸ್ತಂಬ ಹಾಕಲು ಅವಕಾಶ ನೀಡಬೇಕು ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಎಲ್ಲ ಸಂಘಟನೆಗಳಿಂದ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ನಂತರ ಕನ್ನಡಪರ ಸಾಮೂಹಿಕ ಸಂಘಟನೆಗಳ ಒಕ್ಕೂಟ ದಿಂದ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಪಿ.ಐ ಆನಂದ ವಾಘಮೊಡೆ,ನಗರಸಭೆ ವ್ಯವಸ್ಥಾಪಕ ಯಲ್ಲಪ್ಪ ನಾಯಕ, ವಿವಿಧ ಸಂಘಟನೆಗಳ ತಾಲೂಕು ಅಧ್ಯಕ್ಷರಾದ ವೆಂಕಟೇಶ ನಾಯಕ ಬೈರಿಮಡ್ಡಿ,ನಿಂಗಣ್ಣ ನಾಯಕ ಬಿಜಾಸಪುರ,ಮಲ್ಲಪ್ಪ ನಾಯಕ ಕಬಾಡಗೇರ,ಮಲ್ಲು ಹೊಸ್ಮನಿ,ಚಂದ್ರಶೇಖರ ನಾಯಕ,ಮಲ್ಲು ವಿಷ್ಣು ಸೇನಾ,ಯಲ್ಲಪ್ಪ ನಾಯಕ ಕಬಾಡಗೇರ,ಸಂಜೀವ ದರಬಾರಿ,ಭೀಮು ನಾಯಕ ಮಲ್ಲಿಬಾವಿ,ಮಹೇಶ ಯಾದವ್,ನಿಂಗಣ್ಣ ಯಾದವ್,ಮರೆಪ್ಪ ಹವಲ್ದಾರ್,ವೆಂಕಟೇಶ ಪ್ಯಾಪ್ಲಿ,ರವಿ ಕುಮಾರ ನಾಯಕ ಬೈರಿಮಡ್ಡಿ,ರಾಮಕೃಷ್ಣ ನಾಯಕ, ಶಿವರಾಜ ವಗ್ಗರ,ರಮೇಶ ಯಾದವ್,ಸಚಿನಕುಮಾರ ನಾಯಕ, ದೇವು ಪಾಟೀಲ್,ಶರಣಪ್ಪ ಬೈರಿಮಡ್ಡಿ,ವಿರೇಶ ರುಮಾಲ,ಭಾಗನಾಥ ಗುತ್ತೇದಾರ,ಮಹ್ಮದ್ ಹಸನ್ ಪಟೇಲ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.