ಒನಕೆ ಓಬವ್ವ ಜಯಂತಿ ಎಲ್ಲರು ಕಡ್ಡಾಯವಾಗಿ ಆಚರಿಸಿ-ಕೆ.ವಿಜಯಕುಮಾರ್

0
21

ಸುರಪುರ: ಸರಕಾರದ ಆದೇಶದಂತೆ ಇದೇ ತಿಂಗಳು 11ನೇ ತಾರಿಖು ಒನಕೆ ಓಬವ್ವನವರ ಜಯಂತಿಯನ್ನು ಆಚರಿಸಲು ಆದೇಶವಿದ್ದು ತಾಲೂಕಿನಾದ್ಯಂತ ಇರುವ ಎಲ್ಲಾ ಶಾಲಾ ಕಾಲೇಜು ಸರಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಆಚರಿಸುವಂತೆ ತಹಸೀಲ್ದಾರ್ ಕೆ.ವಿಜಯಕುಮಾರ ತಿಳಿಸಿದರು.

ನಗರದ ತಹಸೀಲ್ದಾರ್ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ,ಒನಕೆ ಓಬವ್ವನವರ ಜಯಂತಿ ಅಂಗವಾಗಿ ನವೆಂಬರ್ 11 ರಂದು ಬೆಳಿಗ್ಗೆ 8 ಗಂಟೆಗೆ ಎಲ್ಲಾ ಕಚೇರಿಗಳಲ್ಲಿ ಆಚರಣೆ ಮಾಡಿ,ನಂತರ 9 ಗಂಟೆಗೆ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ,ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ತಿಳಿಸಿದರು.

Contact Your\'s Advertisement; 9902492681

ಸಭೆಯಲ್ಲಿ ಭಾಗವಹಿಸಿದ್ದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಹಣಮಂತ ಕಟ್ಟಿಮನಿ ಬೊಮ್ಮನಹಳ್ಳಿ ಮಾತನಾಡಿ,ತಾಲೂಕು ಆಡಳಿತ ದಿಂದ ನಡೆಯುತ್ತಿರುವ ಜಯಂತಿ ಕಾರ್ಯಕ್ರಮಗಳ ಬಗ್ಗೆ ಪೂರ್ವಭಾವಿ ಸಭೆಯ ಬಗ್ಗೆ ಸಂಘಟಕರಿಗೆ ಸರಿಯಾಗಿ ಮಾಹಿತಿ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿ ಎಲ್ಲಾ ಸಂಘಟನೆಗಳ ಮುಖಂಡರಿಗೆ ಕಡ್ಡಾಯವಾಗಿ ಮಾಹಿತಿ ನೀಡುವಂತೆ ಮನವಿ ಮಾಡಿದರು,ಅಲ್ಲದೆ ಇಂದಿನ ಸಭೆಗೆ ಅನೇಕ ಇಲಾಖೆಗಳ ಅಧಿಕಾರಿಗಳು ಸಭೆಗೆ ಆಗಮಿಸಿಲ್ಲ ಇದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ತಕ್ಷಣಕ್ಕೆ ಸ್ಪಂಧಿಸಿದ ತಹಸೀಲ್ದಾರರು ಮುಂಬರು ಕಾರ್ಯಕ್ರಮಗಳಲ್ಲಿ ಹೀಗಾಗದಂತೆ ನಿಗಾವಹಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ:ಆರ್.ವಿ ನಾಯಕ,ನಗರಸಭೆಯ ನೈರ್ಮಲ್ಯ ನಿರೀಕ್ಷಕ ಶಿವಪುತ್ರ,ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖೆಯ ಭೀಮರಾಯ ನಾಯಕ,ಸಮಾಜ ಕಲ್ಯಾಣ ಇಲಾಖೆಯ ಸುನಿಲ ಪಂಚಾಂಗಮಠ,ತಾಲೂಕು ಪಂಚಾಯತಿಯ ವಿಜಯಕುಮಾರ ಜೋಷಿ,ಶಿಕ್ಷಣ ಇಲಾಖೆಯ ಮಲ್ಲಣ್ಣ ದೊಡ್ಮನಿ, ಹೋರಾಟಗಾರ ಚಂದ್ರಶೇಖರ ನಾಯಕ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಉಪ ಲೋಕಾಯುಕ್ತರ ಭೇಟಿ ಸಾಧ್ಯತೆ ಅಧಿಕಾರಿಗಳು ಎಚ್ಚರ ವಹಿಸಿ; ತಹಸೀಲ್ದಾರ್ ಕೆ.ವಿ

ಇದೇ ತಿಂಗಳು 18,19 ಮತ್ತು 20ನೇ ತಾರಿಖು ಉಪ ಲೋಕಾಯುಕ್ತರು ಯಾದಗಿರಿ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದು ಯಾವುದೇ ತಾಲೂಕಿನ ಯಾವ ಇಲಾಖೆಯ ಕಚೇರಿಗಾದರೂ ಭೇಟಿ ನೀಡುವ ಸಾಧ್ಯತೆ ಇದೆ,ಆದ್ದರಿಂದ ತಾಲೂಕಿನ ಎಲ್ಲಾ ಇಲಾಖೆಗಳ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಗಳಲ್ಲಿನ ಎಲ್ಲಾ ಕಡತಗಳನ್ನು ಸರಿಯಾಗಿ ಇಟ್ಟುಕೊಳ್ಳಬೇಕು ಮತ್ತು ವಿದ್ಯಾರ್ಥಿಗಳ ವಸತಿ ನಿಲಯಗಳಲ್ಲಿ ಮತ್ತು ಆಸ್ಪತ್ರೆಗಳಲ್ಲಿ ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು.ಒಂದು ವೇಳೆ ಲೋಕಾಯುಕ್ತರು ಯಾವುದೇ ಕಚೇರಿಗೆ ಭೇಟಿ ನೀಡಿದಲ್ಲಿ ಅಗತ್ಯವಾದ ವಿವರ ನೀಡದಿದ್ದಲ್ಲಿ ಅದಕ್ಕೆ ನೇರವಾಗಿ ಇಲಾಖೆಯ ಅಧಿಕಾರಿಗಳೆ ಹೊಣೆಯಾಗಲಿದ್ದೀರಿ ಎಂದು ತಹಸೀಲ್ದಾರ್ ಕೆ.ವಿಜಯಕುಮಾರ ಅವರು ಅಧಿಕಾರಿಗಳ ಪ್ರತ್ಯೇಕ ಸಭೆ ನಡೆಸಿ ಖಡಕ್ ಸೂಚನೆ ನೀಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here