ಸುರಪುರ: ತಾಲೂಕಿನ ವಿವಿಧ ಕಡೆಗಳಲ್ಲಿ ನಡೆದ ರೈತರ ಪಂಪಸೆಟ್ ಮೋಟರ್‍ಗಳ ಕಳ್ಳತನ ಪ್ರಕರಣ ಭೇದಿಸಿರುವ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಮಂಗಳವಾರ ಸಂಜೆ ನಗರದ ಹೊರವಲಯದ ರುಕ್ಮಾಪುರ ಕ್ರಾಸ್ ಬಳಿಯಲ್ಲಿ ಇಬ್ಬರು ವ್ಯಕ್ತಿಗಳು ಬೈಕ್‍ಗಳ ಮೇಲೆ ಪಂಪಸೆಟ್ ಮೋಟರ್ ತೆಗೆದುಕೊಂಡು ಹೋಗುತ್ತಿದ್ದಾಗ,ಹೈವೆ ಪೆಟ್ರೋಲಿಂಗ್‍ಲ್ಲಿದ್ದ ಪೊಲೀಸರು ಅವರನ್ನು ಠಾಣೆಗೆ ಕರೆತಂದು ವಿಚಾರಿಸಿದಾಗ ವಿವಿಧ ಕಡೆಗಳಲ್ಲಿ ಮೋಟಾರುಗಳ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದು,ಬಂಧಿತರಿಂದ ಅಂದಾಜು 90 ಸಾವಿರ ಮೌಲ್ಯದ 7 ಪಂಪಸೆಟ್ ಮೋಟಾರ್‍ಗಳನ್ನು ಜಪ್ತಿ ಮಾಡಿ ಕೊಂಡಿದ್ದು,ಬಂಧಿತ ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಡಿವೈಎಸ್ಪಿ ಜಾವಿದ್ ಇನಾಂದಾರ್ ಮಾರ್ಗದರ್ಶನದಲ್ಲಿ ಪಿ.ಐ ಆನಂದ ವಾಘಮೊಡೆ,ಪಿ.ಎಸ್.ಐಗಳಾದ ಹಣಮಂತ್ರಾಯ ಮತ್ತು ಕೃಷ್ಣಾ ಸುಬೇದಾರ ಹಾಗೂ ಪೊಲೀಸ್ ಪೇದೆಗಳಾದ ಸಣ್ಣಕೆಪ್ಪ,ನಾಗರಾಜ,ಬಸವರಾಜ,ಹುಸೇನಿ,ಸಿದ್ರಾಮರಡ್ಡಿ,ಚಂದ್ರಶೇಖರ ಇವರ ತಂಡದ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಜಿ.ಸಂಗೀತಾ ಅವರು ಪ್ರಶಂಸೆ ವ್ಯಕ್ತಪಡಿಸಿ ಪ್ರಕರಣ ಭೇದಿಸಿದ ತಂಡಕ್ಕೆ ಬಹುಮಾನ ಘೋಷಿಸಿದ್ದಾರೆ.