ಕಲಬುರಗಿ: ನಗರದ ಕಲಾ ಮಂಡಳದಲ್ಲಿ ಕಲ್ಯಾಣ ನಾಡು ವಿಕಾಸ ವೇದಿಕೆಯ ವತಿಯಿಂದ 68 ನೇಯ ಕರ್ನಾಟಕ ರಾಜ್ಯೋತ್ಸವವನ್ನು ಮಹಾನಗರ ಪಾಲಿಕೆಯ ಪೂಜ್ಯ ಮಹಾಪೌರರಾದ ವಿಶಾಲ ಧರ್ಗಿ ಅವರು ಉದ್ಘಾಟನೆಯನ್ನು ಮತ್ತು ಮಹಾನಗರ ಪಾಲಿಕೆಯ ಸದಸ್ಯರಾದ ಶ್ರೀ ಪ್ರಕಾಶ ಕಪನೂರ್ ಅವರು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಲ್ಯಾಣ ನಾಡು ವಿಕಾಸ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಮುತ್ತಣ ಎಸ ನಡಗೇರಿ ಅವರು ಪ್ರಾಸ್ತವಿಕವಾಗಿ ಮಾತಾನಾಡಿ ವೇದಿಕೆ ವತಿಯಿಂದ ನಾಡಿನ ಸಮಸ್ತ ಜನತೆಗೆ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳನ್ನು ತಿಳಿಸಿದರು.ಜೋತೆಗೆ ಅಖಂಡ ಕರ್ನಾಟಕ ಉಳಿಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರಾದೇಶಿಕ ಅಸಮಾತೋಲನವನ್ನು ನಿವಾರಣೆ ಮಾಡಿ ಆ ಮೂಲಕ ಕಲ್ಯಾಣ ಕರ್ನಾಟಕ ಭಾಗದ ನಿರೂದ್ಯೋಗ ಸಮಸ್ಯೆ ನಿವಾರಣೆ ಮಾಡಿ, ವಲಸೆಯನ್ನು ನಿಯಂತ್ರಿಸುವ ಮೂಲಕ ಬಡತನವನ್ನು ನಿರ್ಮೂಲನೆ ಮಾಡಬೇಕೆಂದು ಹೇಳಿದರು.
ರಾಜ್ಯದಲ್ಲಿ ಪ್ರಾದೇಶಿಕ ಅಸಮತೋಲನ ಹೆಚ್ಚಾಗಿ ಪ್ರತ್ಯೆಕ ರಾಜ್ಯದ ಕೂಗು ಕೇಳಿಬರುತಿದ್ದು ಅದನ್ನು ರಾಜ್ಯ ಸರ್ಕಾರವು ಗಂಭೀರವಾಗಿ ಪರಿಗಣಿಸಿ ಪ್ರಾದೇಶಿಕ ಸಮತೋಲನ ಅಭಿವೃದ್ದಿಯನ್ನು ಮಾಡಿ,ಹಿಂದುಳಿದ ಭಾಗಗಳ ಸಮಸ್ಯೆಯನ್ನು ಅರಿಯುವ ಕೆಲಸ ಮಾಡಬೇಕು, ಆ ಮೂಲಕ ಆಖಂಡಾ ಕರ್ನಾಟಕವನ್ನು ಉಳಿಸು ಕೆಲಸ ಮಾಡಬೇಕೆಂದು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿದ ಹಿರಿಯ ಹೋರಾಟಗಾರರಾದ ಲಕ್ಷ್ಮಣ ದಸ್ತಿ ಅವರು ಮಾತಾನಾಡಿ ಕಲ್ಯಾಣಿ ಚಾಲುಕ್ಯೆರು, ರಾಷ್ಟ್ರಕೂಟರು ಮತ್ತು ವಿಜಯನಗರದ ಅರಸರು ಆಳಿದ ಶ್ರೀಮಂತ ಪ್ರದೇಶವಾಗಿದೆ ಎಂದರು.
ಭಾಷೆಯ ಆಧಾರದ ಮೇಲೆ ಮೈಸೂರು ರಾಜ್ಯ ರಚನೆಯಾಗಿದೆ. ನಂಜುಂಡಪ್ಪ ವರಿದಿಯ ಪ್ರಕಾರ ಹಿಂದುಳಿದ ಭಾಗಗಳ ಸಮತೋಲನ ಅಭಿವೃದ್ದಿಯನ್ನು ಮಾಡಬೇಕೆಂದು ಹೇಳಿದರು ಮತ್ತು 371 ಜೆ ಕಲಂ ಅನ್ನು ಸಮರ್ಪಕವಾಗಿ ಜಾರಿಗೆ ತರಬೇಕೆಂದು ಹೇಳಿದರು.
ಮಹಾಪೌರರು ಮತ್ತು ಮಹಾನಗರ ಪಾಲಿಕೆಯ ಸದಸ್ಯರಿಗೆ ಕಲಬುರ್ಗಿ ಮಹಾನಗರದಲ್ಲಿ ರಾಷ್ಟ್ರಕೂಟರ ಚಕ್ರವರ್ತಿ ಶ್ರೀ ಅಮೋಘವರ್ಷ ನೃಪತುಂಗರ ವೃತ ಮತ್ತು ಪುತ್ತಳಿಯನ್ನು ನಿರ್ಮಾಣ ಮಾಡಬೇಕೆಂದು ವೇದಿಕೆಯ ಮೂಲಕ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಜಿಲ್ಲಾ ಅಧ್ಯಕ್ಷ ಬಾಬು ಮದನಕರ್, ಉಪಾದ್ಯಕ್ಷ ಜೈ ಭೀಮ್ ಮಾಳಗೆ ಹಾಜರಿದ್ದರು. ಕಾರ್ಯಕ್ರಮದಲ್ಲಿ ಸಂಘಟಕರಾದ ಅವಿನಾಶ ಕಪನೂರ್, ಮೋಹನ್ ಸಾಗರ, ಸೂರ್ಯಪ್ರಕಾಶ ಚಾಳಿ, ದೇವು ದೊರೆ,ದತ್ತು ಜಮಾದಾರ, ರಾಣೇಶ್ ಸವಳಗಿ ಹಾಗೂ ಇತರರು ಭಾಗಿಯಾಗಿದರು.
ಕಾರ್ಯಕ್ರಮವನ್ನು ವಿಜಯಕುಮಾರ್ ಕಂಬಾರ ಅವರು ಸ್ವಾಗತ, ನಿರುಪಣೆಯನ್ನು ನಾಗು ಡೊಂಗರಗಾಂವ ಮತ್ತು ವಂದಾನಾರ್ಪಣೆಯನ್ನು ಪ್ರವೀಣ್ ಖೇಮನ್ ಅವರು ಮಾಡಿದರು.