ಹೋಬಳಿ ಮಟ್ಟದಲ್ಲಿ ಬೆಳೆ ಸಮೀಕ್ಷೆ ನಡೆಸಿ ಪರಿಹಾರಕ್ಕೆ ಪ್ರಾಂತ ರೈತ ಸಂಘ ಸರಕಾರಕ್ಕೆ ಒತ್ತಾಯ

0
50

ಚಿಂಚೋಳಿ: ತಾಲ್ಲೂಕಿನಲ್ಲಿ ರೈತರು ಬಿತ್ತನ ನಡೆಸಿದ್ದು ಕೆಲವು ಹೋಬಳಿ ಮಟ್ಟದಲ್ಲ ಮಳೆ ಬಂದಿರದ ಕಾರಣ ಸಂಪೂರ್ಣ ಬೆಳೆ ನಾಶವಾಗಿದ್ದು ರೈತರು ಬೆಳೆ ಸಂರಕ್ಷಿಸಲು ಸಾಲ ಮಾಡಿ ಪ್ರಯತ್ನ ಪಟ್ಟಿದರು ಯಾವುದೇ ರೀತಿಯ ಪ್ರಯೋಜನವಾಗಿರುವುದಿಲ್ಲ ಆದರಿಂದ ಹುಬಳ್ಳಿ ವ್ಯಾಪ್ತಿಯಲ್ಲಿ ಬೆಳೆ ಸಮೀಕ್ಷೆ ನಡೆಸಿ ಬೆಳೆ ವಿಮೆ ಮಂಜೂರು ಮಾಡಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಶರಣಬಸಪ್ಪ ಮಮಶೇಟಿ ಒತ್ತಾಯಿಸಿದರು.

ಇಂದು ತಾಲ್ಲೂಕಿನ ಬಸ್ ನಿಲ್ದಾಣದಲ್ಲಿ ಹತ್ತಿರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿದ ಅವರು ರಾಜ್ಯದಲ್ಲಿ ಸಾಲ ಬಾಧೆಗೆ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತಿದ್ದು, ಈ ವರ್ಷ ಮಳೆ ಕೆಲಕಡೆಗಳಲ್ಲಿ ಮಳೆ ಇಲ್ಲದ ಕಾರಣ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

Contact Your\'s Advertisement; 9902492681

ರಾಜ್ಯ ಸರಕಾರ ಸಚಿವ ಸಂಪುಟಕ್ಕಾಗಿ ರಾತ್ರೋರಾತ್ರಿ ದೆಹಲಿ ತೆರಳಿವ ಸರಕಾರ ರಾಜ್ಯದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಮುಖ್ಯಮಂತ್ರಿಗಳು ತನ್ನ ಮಂತ್ರಿಮಂಡಲದ ನಿಯೋಗವನ್ನು ದೆಹಲಿಗೆ ಕರೆದುಕೊಂಡು ಹೋಗಿ ರೈತರ ಸಮಸ್ಯೆಗೆ ಪರಿಹಾರ ಒದಗಿಸಬೇಕೆಂದು ಅವರು ಈ ಸಂದರ್ಭದಲ್ಲಿ ಒತ್ತಾಯಿಸಿದರು.

ತಾಲ್ಲೂಕಿನಲ್ಲಿ ಕೆಲವು ಹೋಬಳಿ ಮಟ್ಟದಲ್ಲಿ ಹೆಸರು ಬೆಳೆ ಕಟಾವು ಮಾಡಿ ರಾಸಿ ಪ್ರಾರಂಭವಾಗಿದ್ದು, ತಕ್ಷಣ ಹೋಬಳಿ ಮಟ್ಟದಲ್ಲಿ ಹೆಸರು ಖರೀದಿ ಕೇಂದ್ರಗಳು ಪ್ರಾರಂಭಿಸಬೇಕೆಂದು ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿ ಒತ್ತಾಯಸಿದರು.

ಈ ಸಂದರ್ಭದಲ್ಲಿ ಸಂಘದ ಮುಖಂಡರು ಮತ್ತು ರೈತ ಬಂಧುಗಳು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು. ಅ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here