2018-19 ನೇ ಸಾಲಿನ ವಿದ್ಯಾರ್ಥಿ ವೇತನ ಬಿಡುಗಡೆಗೆ “ಸಿಎಫ್ಐ” ಮೈನಾರಿಟಿ ಭವನ ಚಲೋ ಆಂದೋಲನ

0
92

ಮಂಗಳೂರು: ಸರಕಾರದಿಂದ ಪ್ರತಿ ವರ್ಷ ನೀಡುವ ಪೋಸ್ಟ ಮೆಟ್ರಿಕ್, ಪ್ರೀ ಮ್ಯಾಟ್ರಿಕ್, ಮ್ಯಾರಿಟ್ ಕಮ್ ಹಾಗೂ ವಿದ್ಯಾಶ್ರೀ ಸೇರಿದಂತೆ ಅಲ್ಪಸಂಖ್ಯಾತರ ಮಕ್ಕಳಿಗೆ ಮಂಜೂರಾಗು ವಿದ್ಯಾರ್ಥಿ ವೇತನ 2018-19ನೇ ಸಾಲಿನ ವಿದ್ಯಾರ್ಥಿ ವೇತನ ಮಂಜೂರ ಮಾಡದಿರುವುದನ್ನು ಖಂಡಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಹಾಗೂ ನೂರಾರು ವಿದ್ಯಾರ್ಥಿಗಳು “ಮೈನಾರಿಟಿ ಭವನ್ ಚಲೋ” ಆಂದೋಲನ ನಡೆಸಿದರು.

ನಗರದ ಪಾಂಡೇಶ್ವರ ಮೌಲಾನಾ ಆಝಾದ್ ಭವನದ ಮುಂದೆ ಈ ಆಂದೋಲನಕ್ಕೆ ಪೊಲೀಸರು ಅನುಮತಿ ನೀಡಿದ ಕಾರಣ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು, ಆಕ್ರೋಶಗೊಂಡ ಕೆಲ ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳು ಭವನ ಕಂಪೌಂಡ್ ಹಾರಿ ಒಳನುಗ್ಗಿ ಮೈನಾರಿಟಿ ಭವನ ಮುತಿಗೆ ಹಾಕಲು ಯತ್ನಿಸಿದರು. ಸ್ಥಳೀಯ ಪೊಲೀಸರು ಒಳನುಗ್ಗಿದ ಕಾರ್ಯಕರ್ತರನ್ನು ಹೊರಹಾಕಿ, ಭವನದ ಮುಂದೆ ಶಾಂತಿಯುತ ಪ್ರತಿಭಟನೆ ಅನುಮತಿ ನೀಡಿದರು ಎನ್ನಲಾಗಿದೆ.

Contact Your\'s Advertisement; 9902492681

ನಂತರ ಕಾರ್ಯಕರ್ತರು ಸರಕಾರದ ವಿರುದ್ಧ ಘೋಷಣೆ ಆಕ್ರೋಶ ವ್ಯಕ್ತಪಡಿಸ ವಿದ್ಯಾರ್ಥಿ ವೇತನ ಬೀಡುಗಡೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

ಮೈನಾರಿಟಿ ಭವನ ಚಲೋ ಕಾರ್ಯಕ್ರಮದಲ್ಲಿ ಸಿಎಫ್ಐ ರಾಜ್ಯಧ್ಯಕ್ಷ ಫಯಾಜ್ ದೊಡ್ಡಮನೆ, ಜಿಲ್ಲಾಧ್ಯಕ್ಷ ಮುಹಮ್ಮದ್ ಸಾದಿಕ್, ಮಾಧ್ಯಮ ಸಂಯೋಜಕ ತಾಜುದ್ದೀನ್, ಹಸನ್ ಸಿರಾಜ್ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಕಾರ್ಯಕರ್ತರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here