ಮರಮಂಚಿ, ಮಳಸಾಪುರ ತಾಂಡಾಗಳಲ್ಲಿ ಬಂಜಾರಾ ಜಾನಪದ ದೀಪಾವಳಿ

0
93

ಕಲಬುರಗಿ: ಬಂಜಾರ ಸಮುದಾಯದ ಜನರು ವೀರ, ಧೀರ, ಶೂರ, ಕಾಯಕ ಜೀವಿಗಳು, ಸಂಸ್ಕøತಿಯ ರಕ್ಷಕರು. ತಮ್ಮದೇ ಆದ ವೇಷ-ಭೂಷಣ, ಕಲೆ, ಭಾಷೆ, ಸಂಸ್ಕøತಿ, ಪರಂಪರೆಯನ್ನು ಇಂದಿಗೂ ಕೂಡಾ ಸಂರಕ್ಷಿಸಿಕೊಂಡು ಬಂದವರು. ಯಾವುದೇ ಹಬ್ಬ, ಉತ್ಸವ, ಆಚರಣೆಗಳನ್ನು ಅತ್ಯಂತ ಭಕ್ತಿ, ಶೃದ್ಧೆಯಿಂದ ಮಾಡುವ ಮೂಲಕ ದೇಶದ ಮೂಲ ಸಂಸ್ಕøತಿಯಾದ ಜಾನಪದವನ್ನು ಶ್ರೀಮಂತಗೊಳಿಸುವಲ್ಲಿ ಅಪಾರವಾದ ಕೊಡುಗೆಯನ್ನು ನೀಡುತ್ತಿದ್ದಾರೆ ಎಂದು ಕಜಾಪ ಜಿಲ್ಲಾ ಅಧ್ಯಕ್ಷ ಎಂ.ಬಿ.ನಿಂಗಪ್ಪ ಅಭಿಪ್ರಾಯಪಟ್ಟರು.

ಕಮಲಾಪುರ ತಾಲೂಕಿನ ಮರಮಂಚಿ ತಾಂಡಾದಲ್ಲಿ ‘ಬಂಜಾರಾ ಜಾನಪದ ದೀಪಾವಳಿ’ ಕಾರ್ಯಕ್ರಮದಲ್ಲಿ ‘ಕನ್ನಡ ಜಾನಪದ ಪರಿಷತ್’ನ ಜಿಲ್ಲಾ ಘಟಕ ಮತ್ತು ‘ಬಸವೇಶ್ವರ ಸಮಾಜ ಸೇವಾ ಬಳಗ’ ಇವುಗಳ ವತಿಯಿಂದ ಮಂಗಳವಾರ ಜರುಗಿದ ಬಂಜಾರಾ ಕಲಾವಿದರಿಗೆ ಸತ್ಕಾರ, ಬಾಲಕಿಯರು, ಮಹಿಳೆಯರಿಂದ ಜರುಗಿದ ಗಾಯನ, ನೃತ್ಯ, ಪೂರ್ಣ ಕಳಸದ ಮೆರವಣಿಗೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಜಿಲ್ಲಾ ಬಂಜಾರಾ ಸರ್ಕಾರಿ, ಅರೆ-ಸರ್ಕಾರಿ ನೌಕರರ ಸಂಘದ ಜಂಟಿ ಕಾರ್ಯದರ್ಶಿ ಪ್ರಭು ಜಾಧವ, ಕಾರ್ಯಕಾರಿಣಿ ಸದಸ್ಯ ಬಿಕ್ಕುಸಿಂಗ ರಾಠೋಡ ಮಾತನಾಡಿ, ಲಂಬಾಣಿ ಸಮುದಾಯದ ಜನರು ದೀಪಾವಳಿಯನ್ನು ‘ದವಾಳಿ’ ಎಂದು ಮೂರು ದಿವಸಗಳ ಕಾಲ ಅರ್ಥಪೂರ್ಣವಾಗಿ ಆಚರಿಸುತ್ತಾರೆ. ದೇವರಿಗೆ ಹರಕೆ ತೀರಿಸುವ ‘ಕಾಳಿಮಾಸ್’, ಲಕ್ಷ್ಮೀ ಪೂಜೆ, ಹಿರಿಯರಿಗೆ ಗೌರವ ಸಲ್ಲಿಸಲಾಗುತ್ತದೆ. ಹೆಣ್ಣುಮಕ್ಕಳು ದೀಪ ಹಚ್ಚಿಕೊಂಡು ಪ್ರತಿ ಮನೆಗೆ ತೆರಳಿ ಬೆಳಗುವ ‘ಮೇರಾ’, ಹೊಲಕ್ಕೆÉ ಹೋಗಿ ಬಗೆ-ಬಗೆಯ ಹೂಗಳನ್ನು ತಂದು ಸಗಣಿಯ ಮೇಲ್ಬಾಗದಲ್ಲಿ ಇಡಲಾಗುತ್ತದೆ. ಆಗಮಿಸಿದ ಅತಿಥಿಗಳಿಗೆ ಸತ್ಕರಿಸುವುದು, ಲಂಬಾಣಿ ಗೀತಗಾಯನ, ನೃತ್ಯ ಮಾಡುವುದು, ಕಳಸದ ಮೆರವಣಿಗೆ ಮಾಡಲಾಗುತ್ತದೆ ಎಂದು ಮೂರು ದಿನಗಳ ಕಾಲ ಆಚರಿಸುವ ವಿವಿಧ ಪದ್ಧತಿಗಳ ಬಗ್ಗೆ ವಿವರಿಸಿದರು.

ಕಜಾಪ ಜಿಲ್ಲಾ ಕಾರ್ಯದರ್ಶಿ ಮತ್ತು ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ, ಬಂಜಾರ ಕಲೆ, ಸಂಸ್ಕøತಿ, ಪರಂಪರೆ ಅಪರೂಪವಾಗಿದೆ. ಆಧುನಿಕತೆಯ ಪರಿಣಾಮವಾಗಿ ಇದು ಸಮುದಾಯದ ಹಿರಿಯರಿಂದ ಮುಂದಿನ ತಲೆಮಾರಿನವರಿಗೆ ವರ್ಗಾವಣೆಯಾಗಲು ತೊಡಕಾಗುತ್ತಿದೆ. ಇದನ್ನು ಮನಗಂಡ ನಮ್ಮ ಪರಿಷತ್ ಮತ್ತು ಬಳಗ ಪ್ರತಿವರ್ಷ ದೀಪಾವಳಿ ಸೇರಿದಂತೆ ಬಂಜಾರ ಸಮುದಾಯದ ಹಬ್ಬ, ಉತ್ಸವಗಳಲ್ಲಿ ಬೇರೆ-ಬೇರೆ ತಾಂಡಾಗಳಿಗೆ ತೆರಳಿ ಬಂಜಾರ ಸಮುದಾಯದ ಸಂಸ್ಕøತಿ, ಪರಂಪರೆ ಬಗ್ಗೆ ಎಲ್ಲೆಡೆ ಜನ ಜಾಗೃತಿ ಕಾರ್ಯ ಮಾಡಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ತಾಂಡಾದ ನಾಯಕ ರಾಮಚಂದ್ರ ರಾಠೋಡ, ಕಾರಬಾರಿ ಸುಭಾಷ ರಾಠೋಡ, ಗ್ರಾ.ಪಂ.ಅಧ್ಯಕ್ಷ ಚಂದ್ರಕಾಂತ ಜಾಧವ, ಸದಸ್ಯೆಯರಾದ ಶಾಂತಾಬಾಯಿ, ಕವಿತಾಬಾಯಿ, ಪ್ರಮುಖರಾದ ಸುನಿತಾ ಪಿ.ಜಾಧವ, ಓಂಕಾರ ಪೂಜಾರಿ, ದೀಪಲಾ ರಾಠೋಡ, ಡಾಕು, ಭೀಮರಾಯ ಜಾಧವ, ಪ್ರದೀಪ ಪಿ.ಜಾಧವ, ಸತೀಸ್, ಪ್ರಭು, ದೇವಿದಾಸ ಸೇರಿದಂತೆ ನೂರಾರು ಜನರು, ಮಕ್ಕಳು, ಮಹಿಳೆಯರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here