ಆರ್.ಪಿ.ಐ ಪಕ್ಷದಲ್ಲಿ ಕುಟುಂಬ ರಾಜಕಾರಣ ಇಲ್ಲ: ಡಾ. ಎಂ ವೆಂಕಟಸ್ವಾಮಿ

0
20

ಕಲಬುರಗಿ; ನಗರದ ಕನ್ನಡ ಭವನದಲ್ಲಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ(ಅಠವಲೆ) ಪಕ್ಷದ ಜಿಲ್ಲಾ ಪದಾಧಿಕಾರಿಗಳ ಆಯ್ಕೆ ಸಭೆಯನ್ನು ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷ ಡಾ ಎಂ ವೆಂಕಟಸ್ವಾಮಿ ಉದ್ಘಾಟಿಸಿದರು.

ನಂತರ ಮಾತನಾಡಿ ಒಬ್ಬ ಬಿ ಜೆ ಪಿ ಅಧ್ಯಕ್ಷನ ಮಗ ಅಧ್ಯಕ್ಷನಾಗುತ್ತಾನೆ .ಜೆ ಡಿ ಸ್ ಅಧ್ಯಕ್ಷನ ಮಗ ಅಧ್ಯಕ್ಷ ಆಗತ್ತನೆ .ಅಂದರೆ ಕುಟುಂಬ ರಾಜಕಾರಣ ನಡೆಯುತ್ತಿದೆ .ಆದರೆ ಆರ್ ಪಿ ಐ ಪಕ್ಷದಲ್ಲಿ ಕುಟುಂಬ ರಾಜಕಾರಣ ಇಲ್ಲ .ಸಾಮಾಜಿಕ ನ್ಯಾಯದ ಹೆಸರಿನಲ್ಲಿರುವ ಕಾಂಗ್ರೆಸ್ ಮಲ್ಲಿಕಾರ್ಜುನ್ ಖರ್ಗೆಯವರನ್ನು ಮುಖ್ಯಮಂತ್ರಿ ಮಾಡಲಿಲ್ಲ ,ಇನ್ನೂ ಪ್ರಧಾನ ಮಂತ್ರಿ ಮಾಡ್ತಾರಾ?ಎಂದು ಪ್ರಶ್ನೆ ಮಾಡಿದರು .ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದರು .

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ಜಿಲ್ಲಾ ಘಟಕ್ಕೆ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು .ಹುಸೇನ್ ಬಾಬಾ (ಅಧ್ಯಕ್ಷ ),ವಿಠಲ್ ವಾಲೀಕಾರ್ (ಕಾರ್ಯಾಧ್ಯಕ್ಷ ),ರಘುರಾಮ್ ಕಡೆಕಾರ್,ಮಹದೇವ್ ಅನವರ್ಕರ್ ,ಶಂಕರ್ ಕೊರವಿ (ಉಪಾಧ್ಯಕ್ಪ),ಮಿಲಿಂದ್ ಕಣಮುಸ್ (ಪ್ರಧಾನ ಕಾರ್ಯದರ್ಶಿ),ಮಹಾಂತೇಶ್ ಹೂವಿನಹಳ್ಳಿ (ಸಂಘಟನಾ ಕಾರ್ಯದರ್ಶಿ),ಬಾಬು ಎಸ್ ಕೆ (ಖಜಾಂಚಿ).ರಾಜ್ ಕುಮಾರ್ ನಡಗೇರಿ (ಯುವಘಟಕ),ಶಿವಕುಮಾರ್ ಮುಡ್ಡಿ (ಕಾರ್ಮಿಕ ಘಟಕ),ಮಸ್ತಾನ್ ದಂಡೆ (ಕಾನೂನು ಘಟಕ),ಮಿಸ್ತಿನ್ (ವಿದ್ಯಾರ್ಥಿ ಘಟಕ),ಗುಂಡಮ್ಮ ದೊಡ್ಡಮನಿ(ಮಹಿಳಾ ಘಟಕ) ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಜಿ ಸಿ ವೆಂಕಟರಮಣಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯಅಧ್ಯಕ್ಷ ಸತೀಶ್ ಇವರು ಹುದ್ದೆಗಳನ್ನು ಘೋಷಿಸಿದರು.

ನ್ಯಾಯವಾದಿ ಶ್ರೀಮಂತ್ ಶಿಲ್ಡ್ ಇವರು ಚುನಾಣಾಧಿಕಾರಿಗಳಾಗಿ ಭಾಗವಹಿಸಿದ್ದರು .ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಎ ಬಿ ಹೊಸಮನಿ ಸಭೆಯ ಅಧ್ಯಕ್ಷ ಸ್ಥಾನ ವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here