ಕಲಬುರಗಿ: ಜಯನಗರ ಶಿವಮಂದಿರದಲ್ಲಿ ದೀಪಾವಳಿ ಹಬ್ಬದ ಹಾಗೂ 50ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ವತಿಯಿಂದ 500 ಕ್ಕೂ ಹೆಚ್ಚು ದೀಪಗಳನ್ನು ಹಚ್ಚುವ ಮೂಲಕ ದೀಪೋತ್ಸವ ಕಾರ್ಯಕ್ರಮ ಮಂಗಳವಾರ ಜರುಗಿತು.
ಕಾರ್ಯಕ್ರಮದಲ್ಲಿ ಟ್ರಸ್ಟ್ ಅಧ್ಯಕ್ಷ ಲಿಂಗರಾಜ ಸಿರಗಾಪೂರ ಮಾತನಾಡಿ ದೀಪಾವಳಿ ಹಬ್ಬವು ಹಿಂದೂ ಧರ್ಮದ ದೊಡ್ಡ ಹಬ್ಬವಾಗಿದೆ.ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುವ ದೀಪಾವಳಿಯು ಜನರ ಜೀವನದಲ್ಲಿ ಹೊಸ ಕಿರಣ ಮೂಡಲಿ.ಅದೇ ರೀತಿ ಅಜ್ಞಾನ ಅಳಿದು ಜ್ಞಾನ ಹೆಚ್ಚಿಸಲಿ.ಕನ್ನಡ ನಾಡಿನ ಜನತೆಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು ತಿಳಿಸಲು ಈ ಬಾರಿ ಶಿವಮಂದಿರದಲ್ಲಿ ಮೊದಲ ಬಾರಿಗೆ ಹಣತೆ ಮೂಲಕ ಐವತ್ತು ಅಕ್ಷರ ರೂಪ ಕೊಟ್ಟಿದ್ದು ವಿಶೇಷವಾಗಿದೆ ಎಂದರು.
ಟ್ರಸ್ಟ್ ಹಿರಿಯ ಸದಸ್ಯರಾದ ಬಸವರಾಜ ಅನ್ವರಕರ, ನಾಗರಾಜ ಖೂಬಾ, ಕೋಶಾಧ್ಯಕ್ಷ ಬಸವರಾಜ ಮಾಗಿ ಮಹಿಳಾ ಘಟಕದ ಅಧ್ಯಕ್ಷೆ ಶೈಲಜಾ ವಾಲಿ,ಸಹ ಕಾರ್ಯದರ್ಶಿ ಲತಾ ತುಪ್ಪದ ಮಾತನಾಡಿದರು.ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ ಕೆ.ಬಿ ಸ್ವಾಗತಿಸಿದರು.
ಸಂಘಟನಾ ಕಾರ್ಯದರ್ಶಿ ಬಂಡಪ್ಪ ಕೇಸೂರ, ಸಹ ಕಾರ್ಯದರ್ಶಿ ಸಿದ್ಧಲಿಂಗ ಗುಬ್ಬಿ,ಹಿರಿಯ ಸದಸ್ಯರಾದ ಎಸ್.ಡಿ.ಸೇಡಂಕರ, ಬಸವರಾಜ ಪುರ್ಮಾ, ಗುರುಪಾದಪ್ಪ ಕಾಂತಾ, ಮಲ್ಲಯ್ಯ ಸ್ವಾಮಿ ಗಂಗಾಧರಮಠ, ಶಿವಕುಮಾರ ಪಾಟೀಲ, ಮಲ್ಲಯ್ಯ ಸ್ವಾಮಿ ಬೀದಿಮನಿ ಮಹಿಳಾ ಘಟಕದ ಪದಾಧಿಕಾರಿಗಳಾದ ಅನಿತಾ ನವಣಿ, ಸುಷ್ಮಾ ಮಾಗಿ, ಸುರೇಖಾ ಬಾಲಕೊಂದೆ, ಅಂಬಕ್ಕಾ ಪಾಟೀಲ್,ಅ
ಪಾರ್ವತಿ ರಠಕಲ ಸೇರಿದಂತೆ ಅನೇಕರು ಭಾಗವಹಿಸಿದ್ದರು.