ವೈಜ್ಞಾನಿಕ ಯುಗದಲ್ಲಿ ಮೂಢ ನಂಬಿಕೆಗಳನ್ನು ನಂಬುವ ಮೂರ್ಖತನ ಬೇಡ; ವಿಶ್ವರಾಧ್ಯ

0
29

ಸುರಪುರ: ನಗರದ ಸತ್ಯಂಪೇಟೆಯಲ್ಲಿನ ಶರಣ ಮಾರ್ಗ ಪ್ರತಿಷ್ಠಾನದ ಅರಿವಿನ ಮನೆ ಆವರಣದಲ್ಲಿ ಬಸವ ತತ್ವ ಚಿಂತನೆ ಕಾರ್ಯಕ್ರಮ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪತ್ರಕರ್ತ ವಿಶ್ವರಾಧ್ಯ ಸತ್ಯಂಪೇಟೆ ಮಾತನಾಡಿ,ಬಸವ ತತ್ವ ಎನ್ನುವುದು ಮನುಷ್ಯನಿಗೆ ತುಂಬಾ ಅವಶ್ಯಕವಾಗಿದೆ,ಅದರಲ್ಲಿ ಲಿಂಗಾಯತರಿಗೆ ಬಸವಾದಿ ಶರಣರ ಬದುಕೆ ಆದರ್ಶವಾಗಿರಬೇಕು,ಹಿಂದೆ ವೇದಗಳ ಮೇಲ್ಪಂಕ್ತಿಯಲ್ಲಿದ್ದ ಕಾಲದಲ್ಲಿ ಆಚರಣೆಗಳ ಹೆಸರಲ್ಲಿ ಮೂಢ ನಂಬಿಕೆಗಳನ್ನು ಎಲ್ಲರು ಆಚರಿಸುವಂತೆ ಮಾಡಿದ್ದಾರೆ,ಅಂದಿನ ದಿನದಲ್ಲಿಯ ಮೂಢಾಚರಣೆಗಳನ್ನು ಇಂದಿಗೂ ಕೆಲವರು ಎಲ್ಲರು ಆಚರಿಸುವಂತೆ ಪ್ರೇರೇಪಿಸುತ್ತಾರೆ,ಆದರೆ ಬಸವಾದಿ ಶರಣರು ಕೊಟ್ಟ ವಚನಗಳು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡಲ್ಲಿ ಯಾವ ಮೂಢ ನಂಬಿಕೆಗಳು ನಮ್ಮತ್ತ ಸುಳಿಯಲಾರವು,ಈ ಅರಿವು ಎಲ್ಲ ಲಿಂಗಾಯತರಿಗೆ ಅಗತ್ಯವಾಗಿದೆ.ನನ್ನ ಅಜ್ಜ ಗುರಪ್ಪ ಯಜಮಾನ ಲಿಂಗೈಕ್ಯಾರಾದ ದಿನದಂದೆ ನಮ್ಮ ಕಲ್ಯಾಣೋತ್ಸವ ನಡೆಯಿತು,ಇಂದಿಗೂ ಯಾವುದೇ ರೀತಿಯ ತೊಂದರೆ ಇಲ್ಲದೆ ನಮ್ಮ ಕುಟುಂಬ ಇದೆ,ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ ಎಂದರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ಉಪನ್ಯಾಸಕಿ ಅಕ್ಕಮಹಾದೇವಿ ಮಲ್ಲಿಕಾರ್ಜುನ ಸತ್ಯಂಪೇಟೆ ಮಾತನಾಡಿ,ಬಸವ ತತ್ವ ಎಂದರೆ ಬೇರೆನು ಅಲ್ಲ ಎಲ್ಲರು ಬದುಕಿನಲ್ಲಿ ಸರಳತೆಯನ್ನು ಕಲಿಸುತ್ತದೆ ಮತ್ತು ವೈಚಾರಿಕತೆಯಲ್ಲು ವೈಜ್ಞಾಕತೆಯ ಕುರಿತು ಅರಿವು ಹೊಂದುವುದಾಗಿದೆ,ಅಂತಹ ಅರಿವನ್ನು ನಾವೆಲ್ಲರು ಹೊಂದಿ ಬದುಕಿನಲ್ಲಿ ವಚನ ಸಾಹಿತ್ಯ ಬೆರೆಸಿಕೊಳ್ಳೋಣ ಎಂದರು.

ಸಾಹಿತಿ ಶಿವಣ್ಣ ಇಜೇರಿ ಮಾತನಾಡಿ,ವಚನ ಸಾಹಿತ್ಯವನ್ನು ಓದಿ ಅದನ್ನು ಅರ್ಥೈಸಿಕೊಂಡು ನಡೆಯುವವರ ಬಳಿಯಲ್ಲಿ ಯಾವುದೇ ಮೂಢ ನಂಬಿಕೆಗಳು ಸುಳಿಯಲಾರವು,ಅಣ್ಣ ಲಿಂಗಣ್ಣ ಸತ್ಯಂಪೇಟೆಯವರು ಇಂತಹ ಶರಣರ ಅರಿವನ್ನು ಮೂಢಿಸುವ ಕಾರ್ಯ ನಿರಂತರ ಮಾಡಿರುವುದು ಇಂದು ನಾವೆಲ್ಲರು ಅದನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಾಗಿದೆ ಎಂದರು.

ಕಾರ್ಯಕ್ರಮದ ಆರಂಭದಲ್ಲಿ ವಿಶ್ವಗುರು ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು,ಇದೇ ಸಂದರ್ಭದಲ್ಲಿ ಉಪನ್ಯಾಸಕಿ ಅಕ್ಕಮಹಾದೇವಿ ಹಾಗೂ ಮಲ್ಲಿಕಾರ್ಜುನ ನರಬೋಳಿಯವರು ಹಾರ ಬದಲಾಯಿಸಿಕೊಳ್ಳುವ ಮೂಲಕ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ನಾಗರತ್ನ ಪಾಟೀಲ್ ಯಕ್ಷಿಂತಿ ಮಾತನಾಡಿದರು.ವೇದಿಕೆ ಮೇಲೆ sಸಿದ್ದಮ್ಮ ನರಬೋಳಿ,ಶಾಂತಮ್ಮ ಲಿಂಗಣ್ಣ ಸತ್ಯಂಪೇಟೆ,ಡಾ:ಗಂಗಮ್ಮ ಸತ್ಯಂಪೇಟೆ,ನೀಲಾಂಬಿಕ ವಿಶ್ವರಾಧ್ಯ ಸತ್ಯಂಪೇಟೆ,ಶರಣಪ್ಪ ಅಂಗಡಿ ಇದ್ದರು.ಚನ್ನಮಲ್ಲಿಕಾರ್ಜುನ ಗುಂಡಾನೂರ ವಚನ ಪ್ರಾರ್ಥನೆ ಮಾಡಿದರು,ಪತ್ರಕರ್ತ ರಾಜು ಕುಂಬಾರ ನಿರೂಪಿಸಿದರು,ಶಿವರುದ್ರ ಉಳ್ಳಿ ಸ್ವಾಗತಿಸಿದರು,ವಕೀಲ ಸಂಗಣ್ಣ ಗುಳಗಿ ವಂದಿಸಿದರು.

ಮಲ್ಲಿಕಾರ್ಜುನ ಸತ್ಯಂಪೇಟೆ,ಶಿವರಂಜನ ಸತ್ಯಂಪೇಟೆ,ಮಲ್ಲಣ್ಣ ಗುಳಗಿ,ಬಸನಗೌಡ ಮುನಮುಟಗಿ,ಹಣಮಂತ್ರಾಯ ಕೊಂಗಂಡಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here