ಸುರಪುರ: ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮ

0
30

ಸುರಪುರ: ನಗರದ ಜಿಲ್ಲಾ ಕೇಂದ್ರ ಗ್ರಂಥಾಲಯದ ಶಾಖೆಯಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮ ನಡೆಸಲಾಯಿತು.ಕಾರ್ಯಕ್ರಮದ ಆರಂಭದಲ್ಲಿ ಸರಸ್ವತಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಂಥಾಲಯದ ಸಹಾಯಕ ವನಕೇರಪ್ಪ ಹಾದಿಮನಿ ಮಾತನಾಡಿ, ಮಾನವ ಜೀವನದಲ್ಲಿ ಪುಸ್ತಕಗಳು ಪ್ರಮುಖ ಪಾತ್ರ ವಹಿಸುತ್ತವೆ ಜ್ಞಾನಾಭಿವೃದ್ಧಿಗೆ ಹಾಗೂ ಅಮೂಲ್ಯವಾದ ಸಮಯ ಸದುಪಯೋಗಕ್ಕೆ ಗ್ರಂಥಾಲಯ ಗಳು ಬಹಳ ಮುಖ್ಯ ಪುಸ್ತಕ ಮನುಷ್ಯನ ಮಿತ್ರ, ಜ್ಞಾನವನ್ನು ನೀಡುವ ಕಾಮಧೇನು, ನಮ್ಮ ಬದುಕಿಗೆ ಮಾರ್ಗದರ್ಶಕ ಹೀಗಾಗಿ ಗ್ರಂಥಾಲಯಗಳು ಬಹಳ ಮುಖ್ಯ ಪಾತ್ರ ವಹಿಸುತ್ತವೆ ಎಂದರು.

Contact Your\'s Advertisement; 9902492681

ಸಾಹಿತಿ ರಾಘವೇಂದ್ರ ಭಕ್ರಿ ಮಾತನಾಡಿ, ದೇಹಕ್ಕೆ ಅನ್ನ,ನೀರು,ಗಾಳಿ ಎಷ್ಟು ಮುಖ್ಯವೋ ಹಾಗೆಯೇ ಮಾನವನ ವಿಕಾಸಕ್ಕೆ ಪುಸ್ತಕಗಳು ಬಹಳ ಮುಖ್ಯ ಪುಸ್ತಕಗಳು ಸದಾ ಒಳ್ಳೆಯ ಆಲೋಚನೆಗೆ ದಾರಿ ಮಾಡಿಕೊಡುತ್ತವೆ ಎಂದು ಹೇಳಿದ ಅವರು, ಪುಸ್ತಕಗಳ ಸಂಗ್ರಹಿಸುವ ಸ್ಥಳವೇ ಗ್ರಂಥಾಲಯ ಸಾಹಿತ್ಯ,ಕಲೆ,ವಿಜ್ಞಾನ,ಕಾದಂಬರಿ,ಕವನ,ಕಥೆ,ಧಾರ್ಮಿಕ,ರಾಜಕೀಯ,ಶೈಕ್ಷಣಿಕ,ಸಾಮಾಜಿಕ ಮೊದಲಾದ ಪ್ರಕಾರಗಳಿಗೆ ಸಂಬಂಧಿಸಿದ ಪುಸ್ತಕಗಳು ಗ್ರಂಥಾಲಯದಲ್ಲಿರುತ್ತವೆ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸು ಗಳಿಸಲು ನಿರಂತರ ಓದುವಿಕೆಯಿಂದ ಜ್ಞಾನವನ್ನು ಗಳಿಸುವುದು ತುಂಬಾ ಅವಶ್ಯ ಈ ದಿಸೆಯಲ್ಲಿ ಗ್ರಂಥಾಲಯಗಳು ಜ್ಞಾನದ ಕಣಜ ಆಗಿದ್ದು ಹೀಗಾಗಿ ಸಾರ್ವಜನಿಕರು ಹಾಗೂ ವಿಶೇಷವಾಗಿ ಯುವಕರು ಮತ್ತು ವಿದ್ಯಾರ್ಥಿಗಳು ಗ್ರಂಥಾಲಯದ ಸದುಪಯೋಗ ಪಡೆದುಕೊಳ್ಳಬೇಕು ನಮ್ಮ ಬದುಕಿಗೆ ಮಾರ್ಗದರ್ಶಕವಾಗಿರುವ ಪುಸ್ತಕಗಳನ್ನು ಓದುವ ಮೂಲಕ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಿಕ್ಷಕ ಮಲ್ಲಿಕಾರ್ಜುನ ಹುದ್ದಾರ, ಭೀಮಶಪ್ಪ, ಗೋವಿಂದರಾಜ, ರಮೇಶ, ಸಿದ್ದು ಕಮತಗಿ, ಆನಂದ, ಯಲ್ಲಪ್ಪ, ಹಾಗೂ ಅನೇಕ ಓದುಗರು ಪಾಲ್ಗೊಂಡಿದ್ದರು, ಗ್ರಂಥಾಲಯ ಸಿಬ್ಬಂದಿ ದತ್ತಾತ್ರೇಯ ಕುಲಕರ್ಣಿ ನಿರೂಪಿಸಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here