ಕಲಬುರಗಿ: ಖಾಜಾ ಬಂದಾನವಾಜ್ ವಿಶ್ವ ವಿದ್ಯಾಲಯದಲ್ಲಿ ಕಲಾ, ಭಾಷಾ, ಮಾನವೀಕತೆ, ಸಮಾಜ ವಿಜ್ಞಾನ, ವಿಜ್ಞಾನ ಮತ್ತು ಶಿಕ್ಷಣ ನಿಕಯಗಳ ವತಿಯಿಂದ ಶುಕ್ರವಾರ ಶಿಕ್ಷಕರ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ನಿಕಾಯದ ಡೀನ್ ಪ್ರೊ ನಿಶಾತ್ ಆರೀಫ್ ಹುಸ್ಸೇನಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಮುಸ್ಲಿಂ ವೃತ್ತಿಪರರ ಸಂಘದ ಕರ್ನಾಟಕ ರಾಜ್ಯ ಕಾರ್ಯದರ್ಶಿ ವಸಿಂ ಇಸಹಾಕ ಅತಿಥಿಯಾಗಿದ್ದರು. ರಾಯಲ್ ಸೊಸೈಟಿ ಫಾರ್ ಕೆಮಿಸ್ಟ್ರಿ, ಇಂಡಿಯಾ ಫೌಂಡೇಶನ್, ಬೆಂಗಳೂರು, ಶಿಕ್ಷಕ ಅಭಿವರ್ಧಕರಾದ ಕರೀಮಾ ಅಂಜುಮ ಮತ್ತು ಇಂದಿರಾ ನೈರ್ ಇವರಿಂದ ಎರಡು ಸೆಸ್ಸನ್ಸ್ಗಳು ನಡೆಯಲಿವೆ.
ಈ ತರಬೇತಿ ಕಾರ್ಯಕ್ರಮದಲ್ಲಿ 150 ಕ್ಕೂ ಹೆಚ್ಚು ಅಭ್ಯರ್ಥಿಗಳು ನೋಂದಾಯಿಸಿದ್ದಾರೆ.
ಬಿ ಎಡ್ ವಿದ್ಯಾರ್ಥಿನಿ ಜೋಹ್ರ ನಾಜ ಪ್ರಾರ್ಥಿಸಿದರೆ, ಜೀವಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಪಕ್ ಡಾ ಸಯ್ಯದ್ ಅಬ್ರಾರ ಅತಿಥಿ ಭಾಷಣಕರರನ್ನು ಪರಿಚಯಿಸಿದರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಸಹಾಯಕ ಪ್ರಧ್ಯಪಕ ಡಾ ಜಾವೆದ್ ಅಕ್ತರ್ ಪ್ರಾಸ್ತಾವಿಕವಾಗಿ ಮಾತನಾಡಿ, ನಿರೂಪಿಸಿದರು.
ಡಾ ಅತಿಯಾ, ಡಾ ಜಹಾಂನಾರ,ಡಾ ಅಬ್ರಾರ್, ಡಾ ಜಾವೆದ್, ಡಾ ಸಮೀನಾ, ಡಾ ಮಿಲನ್, ಡಾ ಆಫಷನ್, ಡಾ ಅಥರ್, ಡಾ ಅಬ್ರಾರ್, ಡಾ ಅತಿವುಲ್ಲ, ಡಾ ಸುನಿಲ್, ಡಾ ವಿನೋದ್, ಡಾ ಬದರಿನಾಥ್, ಮೆಹಬುಬ್ ಮುಲ್ಲಾರಿ, ರಿಯಾಜ್ ಪಠಣ್, ಕುಡ್ಸಿಯ ಪರ್ವೀನ್, ಡಾ. ಫೆಮಿದ, ಡಾ ಜೈನಬ, ಡಾ ಸಫಿ ಡಾ ನಮ್ರತಾ ಮುಂತಾದವರಿದ್ದರು.