ಅತಿಸಾರ ನಿಯಂತ್ರಣಕ್ಕೆ ಡಾ. ಅಪರ್ಣಾ ಭದ್ರ ಶೆಟ್ಟಿ ಕರೆ

0
59

ಅಫಜಲಪುರ; ಅಫಜಲಪುರ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರ ಗೊಬ್ಬುರ್ ಬಿ ದಲ್ಲಿ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮ ಪೋಸ್ಟರ್ ಮತ್ತು ಬ್ಯಾನರ್. ಬಿತ್ತಿ ಪತ್ರಗಳನ್ನು ಪ್ರದರ್ಶಿಸುವ ಮುಖಾಂತರ ಸಾಂಕೇತಿಕ ಚಾಲನೆಯನ್ನು ನೂತನ ಆಡಳಿತ ವೈದ್ಯಾಧಿಕಾರಿ ಡಾ. ಅಪರ್ಣಾ ಭ್ರದಶೆಟ್ಡಿ ನೀಡಿದರು.

ತರುವಾಯ ಅತಿಸಾರ ಬೇದಿಯಿಂದ ಮಕ್ಕಳ ಮರಣವನ್ನು ನಿಯಂತ್ರಿಸಲು ಓ ಅರ್ ಎಸ್. ಮತ್ತು ಜಿಂಕ್ ಮಹತ್ವದ್ದಾಗಿದೆ. ಜಿಂಕ್ ಮಾತ್ರೆಯನ್ನು 14 ದಿನಗಳವರೆಗೆ ನೀಡಲಾಗುವುದು. ಆಶಾ ಕಾರ್ಯಕರ್ತರು ಇದರ ಬಗ್ಗೆ ಮನೆ ಮನೆ ಭೇಟಿ ನೀಡಿದಾಗ ತಾಯಂದಿರಲ್ಲಿ ಶಾಲಾ, ಅಂಗನವಾಡಿಗಳಲ್ಲಿ , ಜಾಗೃತಿ ಮೂಡಿಸಲು ಕರೆ ನೀಡಿದರು.

Contact Your\'s Advertisement; 9902492681

ಪ್ರಾಥಮಿಕ ಆರೋಗ್ಯ ಕೇಂದ್ರದ ಕ್ಷೇತ್ರ ಆರೋಗ್ಯಶಿಕ್ಷಣಾಧಿಕಾರಿ ಶಶಿಧರ್ ಬಳೆ ಕಾರ್ಯಕ್ರಮದ ಉದ್ದೇಶ ಕುರಿತು ಮಾತನಾಡಿ ಈ ವರ್ಷದ ಮುಖ್ಯ ಧ್ಯೇಯ ವಾಕ್ಯ ತೀವ್ರತರ ಅತಿಸಾರ ಭೇದಿಯಿಂದ ಮಕ್ಕಳ ಮರಣವನ್ನು ಶೂನ್ಯಕ್ಕೆ ತರುವುದಾಗಿದೆ. ಅದಕ್ಕಾಗಿ ಓ ಆರ್ ಎಸ್ ಮತ್ತು ಜಿಂಕ್ ಮಾತ್ರೆಯ ಮಹತ್ವವನ್ನು ಸಾರ್ವಜನಿಕರಲ್ಲಿ ಮಾಹಿತಿ ನೀಡುವುದು ಇದರ ಉದ್ದೇಶ ಅದಕ್ಕಾಗಿ ಓ ಆರ್ ಎಸ್ ದ್ರಾವಣವನ್ನು ಮನೆಯಲ್ಲಿಯೇ ತಯಾರಿಸುವುದನ್ನು ಪ್ರತ್ಯೇಕ್ಷಿಕತೆ ಮೂಲಕ ತೋರಿಸಿಕೊಟ್ಟರು. ಹಾಗೆಯೇ ಸ್ವಚ್ಛವಾದ ಕೈಗಳನ್ನು ಆರು ವಿಧಾನಗಳ ಮೂಲಕ ತೊಳೆಯುವುದರಿಂದ ಅನೇಕ ರೋಗಗಳನ್ನು ಹಾಗೂ ನಿರ್ಜಲೀಕರಣವನ್ನು ತಡೆಗಟ್ಟಬಹುದು. ಅದನ್ನು ದೊಡ್ಡವರು ಮಕ್ಕಳು ಅಳವಡಿಸಿಕೊಳ್ಳಬೇಕಾಗಿದೆ. ಅಲ್ಲದೆ ನವಜಾತ ಶಿಶುಗಳ ಆರೈಕೆ ಮಾಡುವುದು ಹಾಗೂ ಕ್ಷಯ ಮುಕ್ತ ಮಾಡಲು ದಿನಾಂಕ 18ರಿಂದ ಡಿಸೆಂಬರ್ 2ರವರೆಗೆ ತೀವ್ರ ಕ್ಷಯರೋಗ ಪತ್ತೆ ಅಂದೋಲನ ನಡೆಯಲಿದೆ.ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಆಯುಷ್ಯ ವೈದ್ಯಧಿಕಾರಿ ಡಾ. ದೇವರಾಜ್ ಎಸ್ ಪ್ರಸಾದ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಸೈಯದ್ ಅಸರ ಆಸ್ಮಿ, ರೋಜ್ಲಿನ್, ಉಷಾ, ಅಂಜುಮ್, ಸುಧಾಕರ್, ಶಹಬಾಜ, ರಾಜು , ಮಲ್ಲಮ್ಮ, ಜೈ ಭೀಮ್, ಆಶಾ ಕಾರ್ಯಕರ್ತರಾದ ಮರಿಯಮ್ಮ , ಭಾಗ್ಯಶ್ರೀ, ಪಾರ್ವತಿ, ಮಹಾಲಕ್ಷ್ಮಿ, ಅಂಬುಬಾಯಿ, ಚಾಂದಿಬಾಯಿ, ಜಿಲೇ ಕಾ ಬೇಗಂ, ಸಾರ್ವಜನಿಕರು, ತಾಯಂದಿರು, ಗರ್ಭಿಣಿಯರು, ಮಕ್ಕಳು, ಹದಿಹರಿಯದವರು ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here