ಕಲಬುರಗಿ: ಸ್ಮಾರಕಗಳ ಸ್ವಚ್ಛತಾ ಅಭಿಯಾನ

0
41

ಕಲಬುರಗಿ: ವಿಶ್ವ ಪರಂಪರೆ ಸಪ್ತಾಹ-2023ರ ಅಂಗವಾಗಿ ಕಲಬುರಗಿ ಕೋಟೆಯಲ್ಲಿ ಭಾರತೀಯ ಪುರಾತತ್ವ ಇಲಾಖೆ ಹಾಗೂ ಇನ್‍ಟ್ಯಾಕ್ ಅಧ್ಯಾಯ ಇವುಗಳ ಸಂಯುಕ್ತ ಆಶ್ರಯದಲ್ಲಿ ‘ಸ್ಮಾರಕಗಳ ಸ್ವಚ್ಛತಾ ಅಭಿಯಾನ’ ಪಾರಂಪರಿಕ ನಡಿಗೆ ಹಾಗೂ ವಿಶೇಷ ಉಪನ್ಯಾಸವನ್ನು ಹಮ್ಮಿಕೊಳ್ಳಲಾಯಿತು.

ಕಲ್ಯಾಣ ಕರ್ನಾಟಕ ಪ್ರದೇಶದ ಭಾರತೀಯ ಪುರಾತತ್ವ ಇಲಾಖೆ, ಹಂಪಿ ವಿಭಾಗದ ಮುಖ್ಯಸ್ಥರಾದ ಶ್ರೀ ನಿಖಿಲದಾಸ ಅವರು ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ, ಮುಂದಿನ ದಿನಗಳಲ್ಲಿ ನಗರ ಶಾಲೆ ಕಾಲೇಜುಗಳಲ್ಲಿ ಪರಂಪರೆ ಕೂಟಗಳನ್ನು ಸ್ಥಾಪಿಸಲಾಗುವುದು. ಅವುಗಳ ಮೂಲಕ ವಿದ್ಯಾರ್ಥಿಗಳಿಗೆ ತಿಂಗಳಿನಲ್ಲಿ ಒಂದು ದಿನ ಪರಂಪರೆ ಸ್ಥಳಗಳಿಗೆ ಭೇಟಿ ನೀಡುವುದು ಹಾಗೂ ಉಪನ್ಯಾಸಕರುಗಳನ್ನು ಏರ್ಪಡಿಸುವುದರ ಮೂಲಕ ಸ್ಮಾರಕಗಳ ಮಾಹಿತಿ ನೀಡಲಾಗುವುದು ಎಂದು ಹೇಳಿದರು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ಡಾ. ಶಂಭುಲಿಂಗ ಎಸ್. ವಾಣಿ ಇತಿಹಾಸಕಾರರು, ಜಿಲ್ಲೆಯ ಇತಿಹಾಸ ಮತ್ತು ಪರಂಪರೆ ಹಾಗೂ ಕಲಬುರಗಿ ಕೋಟೆಯ ಪ್ರಾಮುಖ್ಯತೆಯನ್ನು ಕುರಿತು ಉಪನ್ಯಾಸ ನೀಡಿದರು. ಕೋಟೆಯು ಚಿಕ್ಕದಾಗಿದ್ದರೂ ಇಲ್ಲಿ ರಕ್ಷಣೆಗೆ ಸಂಬಂಧಿಸಿದ ಎಲ್ಲಾ ಅಂಶಗಳನ್ನು ಅಳವಡಿಸಲಾಗಿದೆ. ವಿಶೇಷವಾಗಿ ಗುಪ್ತದ್ವಾರಗಳು, ಕಾವಲು ಗೋಪುರಗಳು, ಮದ್ದಿನ ಸಂಗ್ರಹದ ಸ್ಥಳ, ಅಡುಗು ತಾಣಗಳು, ತೋಪುಗಳು, ಸೈನಿಕರ ವಿಶ್ರಾಂತಿ ತಾಣಗಳು ಹೀಗೆ ಹಲವು ಅಂಶಗಳನ್ನು ನಾವು ಕಲಬುರಗಿ ಕೋಟೆಯಲ್ಲಿ ಕಾಣಬಹುದಾಗಿದೆ ಎಂದು ಡಾ. ವಾಣಿಯವರು ತಮ್ಮ ಉಪನ್ಯಾಸದಲ್ಲಿ ಹೇಳಿದರು. ಶ್ರೀ ರಿಜವಾನ-ಉರ್-ರಹಮಾನ ಸಿದ್ದೀಕಿ, ಇನ್‍ಟ್ಯಾಕ್ ಕಾರ್ಯದರ್ಶಿಗಳು ಕೋಟೆಯ ಜಾಮಿ ಮಸೀದಿ ಕುರಿತು ಹೇಳಿದರು.

ಕಾರ್ಯಕ್ರಮದಲ್ಲಿ ಭಾರತಿಯ ಪುರಾತತ್ವ ಇಲಾಖೆಯ ಅಧಿಕಾರಿಗಳಾದ ಅನಿರುದ್ ದೇಸಾಯಿ, ಡಾ. ಟಿ.ವಿ. ಅಡಿವೇಶ, ಡಾ. ಜಗನ್ನಾಥ, ಡಾ. ಮಹಾದೇವಿ ಹಾಗೂ ಇಲಾಖೆಯ ಸಿಬ್ಬಂದಿಗಳಾದ ಸಂಗಪ್ಪ, ಸಂಜುಕುಮಾರ, ನಂದಕುಮಾರ, ಶಫಿ ಹಾಗೂ ಇನ್‍ಟ್ಯಾಕನ ಪದಾಧಿಕಾರಿಗಳು ಹಾಗೂ ಸರಕಾರಿ ಕಾಲೇಜು (ಸ್ವಾಯತ್ತ) ಕಲಬುರಗಿಯ ಇತಿಹಾಸ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here