ಸುರಪುರ: ರಾಜ್ಯದಲ್ಲಿ ರೈತರು ಬರಗಾಲ ದಿಂದ ತೀವ್ರ ಸಂಕಷ್ಟದಲ್ಲಿದ್ದಾರೆ,ಆದ್ದರಿಂದ ಇದೇ ನವಂಬರ್ 23 ರಂದು ಇರುವ ನನ್ನ ಜನ್ಮ ದಿನಾಚರಣೆ ಬದಲು ನನ್ನ ಎಲ್ಲ ಅಭಿಮಾನಿಗಳು ಮತ್ತು ಕಾರ್ಯಕರ್ತರು ರೈತರಿಗಾಗಿ ಪ್ರಾರ್ಥನೆ ಸಲ್ಲಿಸುವಂತೆ ಶಾಸಕ ರಾಜಾ ವೆಂಕಟಪ್ಪ ನಾಯಕ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಶಾಸಕರು,ರಾಜ್ಯ ಸೇರಿ ನಮ್ಮ ಕ್ಷೇತ್ರದಲ್ಲೂ ವ್ಯಾಪಕರ ಬರಗಾಲ ಇರುವುದರಿಂದ ರೈತರು ಸಂಕಷ್ಟ ಹೆದರಿಸುವಂತಾಗಿದೆ,ಇಂತಹ ಸಂದರ್ಭದಲ್ಲಿ ನನ್ನ ಜನ್ಮ ದಿನವನ್ನು ಆಚರಿಸಿಕೊಳ್ಳಬಾರದು ಎಂದು ನಿರ್ಧರಿಸಿದ್ದು,ನನ್ನ ಯಾವುದೇ ಅಭಿಮಾನಿಗಳು ಮತ್ತು ಕಾರ್ಯಕರ್ತರು ಅದ್ಧೂರಿ ಜನ್ಮ ದಿನಾಚರಣೆ ಮಾಡಬೇಡಿ,ಬದಲಾಗಿ ನಮ್ಮ ಎಲ್ಲಾ ರೈತರಿಗೆ ಒಳ್ಳೆಯದಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸುವಂತೆ ತಿಳಿಸಿದ್ದಾರೆ.