ಸದ್ದಿಲ್ಲದೆ ಶರಣರ ವಿಚಾರಗಳು ಪ್ರಚಾರ ಗೈಯುತ್ತಿರುವ ಬಬಲಾದ ಮಠ

0
129

ಕಲಬುರಗಿ; ಶರಣರ ವಿಚಾರವೆಂಬ ಬೀಜ ಸಮಾಜದಲ್ಲಿ ನಿರಂತರವಾಗಿ ಬಿತ್ತಿ ಸಂಸ್ಕಾರವೆಂಬ ಬಹುದೊಡ್ಡ ಮರ ಬೆಳೆಸುತ್ತಿರುವುದು ಬಬಲಾದ ಮಠ ಎಂದು ಆಳಂದ ಸತ್ಯಸಾಯಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಯಾದ ಮಲಕಾರಿ ಪೂಜಾರಿ ಹೇಳಿದರು.

ನಗರದ ಭವಾನಿ ನಗರದಲ್ಲಿನ ಬಬಲಾದ ಮಠದಲ್ಲಿ 185ನೇ ಶಿವಾನುಭವಗೋಷ್ಠಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ ಶರಣರು, ಸಂತರು ನಡೆ-ನುಡಿ ಒಂದಾಗಿಸಿ ಅಮರವಾಗಿದ್ದಾರೆ. ಸದ್ದಿಲ್ಲದೇ ಶರಣರ ವಿಚಾರಗಳು ಪ್ರಚಾರ ಮಾಡುತ್ತಿರುವ ಬಬಲಾದ ಪೂಜ್ಯರ ಕಾರ್ಯ ಶ್ಲಾಘನೀಯ. ವ್ಯಕ್ತಿಗೂ ವ್ಯಕ್ತಿತ್ವಕ್ಕೂ ಒಂದೇ ಅಕ್ಷರ ವ್ಯತ್ಯಾಸ.

Contact Your\'s Advertisement; 9902492681

ವ್ಯಕ್ತಿ ಹೋದರೂ ವ್ಯಕ್ತಿತ್ವ ಬದುಕಿರುತ್ತದೆ ಆದರೆ ವ್ಯಕ್ತಿತ್ವ ಹೋದರೆ ವ್ಯಕ್ತಿ ಬದುಕಿದ್ದು ಸತ್ತಂತೆ. ಇಂದಿನ ಸಂದರ್ಭದಲ್ಲಿ ಮನೆಗಳು ದೊಡ್ಡದಾಗಿ ಅಂದ ಚಂದವಾಗಿವೆ ಆದರೆ ಮನೆಯಲ್ಲಿರುವ ಮನಸ್ಸುಗಳು ಚಿಕ್ಕದಾಗಿ ಮಲಿನತೆಯಿಂದ ಕೂಡಿ ಸಂಕುಚಿತ ಮನೋಭಾವದಿಂದ ಅತೃಪ್ತಿಯಿಂದ ಜೀವನ ಸಾಗಿಸುತ್ತಿದ್ದಾರೆ. ಬಬಲಾದ ಮಠವು ಶಿವಾನುಭವಗೋಷ್ಠಿ ಎಂಬ ಹೆಸರಿನಲ್ಲಿ ಜಾತಿ, ಮತ, ಪಂಥ ಎನ್ನದೆ ಪ್ರತಿ ಸೋಮವಾರ ಉತ್ತಮವಾದ ಕಾರ್ಯಕ್ರಮ ಆಯೋಜಿಸಿ ಮನಸ್ಸನ್ನು ಶುದ್ಧಗೊಳಿಸಿ ಹೃದಯ ಸಂಬಂಧ ಗಟ್ಟಿಗೊಳಿಸುತ್ತಿದೆ ಎಂದು ನುಡಿದರು.

ಯೋಗ ಶಿಕ್ಷಕರಾದ ಶರಣಬಸಪ್ಪ ಎಸ್ ಪೂಜಾರಿ ಮಾತನಾಡುತ್ತಾ ಮನುಷ್ಯ ಒತ್ತಡದ ಬದುಕಿನಲ್ಲಿ ಜೀವನ ಸಾಗಿಸುತ್ತಿದ್ದಾನೆ. ಒಳ್ಳೆಯ ಆಹಾರ, ದಿನನಿತ್ಯ ಯೋಗ ಅಭ್ಯಾಸದಿಂದ ರೋಗ ಮುಕ್ತ ಸಮಾಜ ನಿರ್ಮಿಸಬಹುದೆಂದು ಹೇಳಿದರು. ಕಾರ್ಯಕ್ರಮದಲ್ಲಿ ನ್ಯಾಯವಾದಿ ಹಣಮಂತರಾಯ ಅಟ್ಟೂರ, ಸಂಗಮನಾಥ ಹೂಗಾರ, ಗುರುರಾಜ ಹಸರಗುಂಡಗಿ, ಸಿದ್ದಣ್ಣ ವಾಡಿ, ಮಾಣಿಕ ಗುತ್ತೇದಾರ, ರೇಣುಕಾ ಘನಾತೆ, ಈರಣ್ಣ ಡೊಂಗರಗಾಂವ, ಶರಣು ಪೊಲೀಸ ಪಾಟೀಲ, ರೇವಣಸಿದ್ದಯ್ಯ ಶಾಸ್ತ್ರಿ, ಶಿವಶರಣಪ್ಪ ಮಾಲಿ ಪಾಟೀಲ, ಶಿವಕುಮಾರ ಸಾವಳಗಿ, ಶ್ರೀದೇವಿ ಬಿರಾದಾರ, ಮೀನಾಕ್ಷಿ ಮೋಟೆ ಬೆಳಮಗಿ, ಲಕ್ಷ್ಮಿಬಾಯಿ ಪೂಜಾರಿ, ಸೇರಿದಂತೆ ಅನೇಕ ಜನ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶಿಕ್ಷಣದಲ್ಲಿ ಸೇವೆ ಸಲ್ಲಿಸುತ್ತಿರುವ ಮಲಕಾರಿ ಪೂಜಾರಿ ಹಾಗೂ ಯೋಗ ಶಿಕ್ಷಕರಾದ ಶರಣಬಸಪ್ಪ ಪೂಜಾರಿ ಅವರಿಗೆ ಶ್ರೀಮಠದ ಪರವಾಗಿ ಸನ್ಮಾನಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here