ಕಲಬುರಗಿ: ಖಾಜಾ ಬಂದಾನವಾಜ ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರದ ವಿಭಾಗದಲ್ಲಿ ಲೈಫ್ ಸೈನ್ಸ್ ವಿಷಯದಲ್ಲಿರುವ ವೃತ್ತಿ ಮತ್ತು ಉದ್ಯೋಗದ ನಿರೀಕ್ಷೆಗಳ ಕುರಿತು ಪ್ರಾದೇಶಿಕ ವಿಚಾರ ಸಂಕಿರಣ ಕಾರ್ಯಕ್ರಮದ ಉದ್ಘಾಟನೆ ಜರುಗಿತು.
ಲೈಫ್ ಸೈನ್ಸ್ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಎಸಬಿಎಲ್ಎಂ ಸಿ ಸದಸ್ಯ ಪ್ರೊ ಶಂಕೆರಪ್ಪ ಹಟ್ಟಿ, ಝೆಡ್ ಏಆರ್ಎಸನ ಜೈವಿಕ ತಂತ್ರಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಶರಣಬಸಪ್ಪ ಏರಿ, ಬೀದರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ರಾಜಾ ಸಮರ್ಸಿನ್ ಮೋದಿ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಜಾವೆದ್ ಅಖತರ್ ಉಪನ್ಯಾಸ ನೀಡಲಿದ್ದಾರೆ.
ಉರ್ದು ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಶಹಾಬಾಜ್ ಆರ್ಷದ್ ಪ್ರಾರ್ಥಿಸಿದರೆ, ಜವೆರಿಯಾ ಸ್ವಾಗತಿಸಿದರು. ಸಸ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಫೇಹಮಿದಾ ಅತಿಥಿ ಪರಿಚಯಿಸಿದರೆ ಡಾ. ಹೀನಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಯ್ಯದಾ ಹಾಜರಾ ವಂದಿಸಿದರು. ಫೈಜಾ ನಾಜ್ ನಿರೂಪಿದರು.