ಕಲಬುರಗಿ: ಶ್ರೀ ವಿಜಯದಾಸರು ಹರಿದಾಸ ಸಾಹಿತ್ಯದಲ್ಲಿ ಅವಿಸ್ಮರಣೀಯರು, ಶ್ರೀ ವಿಜಯದಾಸರು ದಾಸಸಾಹಿತ್ಯವನ್ನು ಪುನರುತ್ಥಾನಗೊಳಿಸಿದವರು ತಮ್ಮ ನಂತರದಲ್ಲಿ ಹರಿದಾಸ ಪರಂಪರೆ ಹರಿಯುವುದಕ್ಕೆ ಭದ್ರಬುನಾದಿ ಹಾಕಿಕೊಟ್ಟಿದ್ದಾರೆ ಎಂದು ಪಾರಾಯಣ ಸಂಘದ ಸಂಚಾಲಕ ರವಿ ಲತೂರಕರ್ ಮಾತನಾಡಿದರು.
ಜಯತೀರ್ಥ ನಗರದ ಶ್ರೀ ಲಕ್ಷ್ಮೀನಾರಾಯಣ ಮಂದಿರದಲ್ಲಿ, ಹಂಸನಾಮಕ ಮತ್ತು ಶ್ರೀ ಲಕ್ಷ್ಮಿ ನಾರಾಯಣ ಪಾರಾಯಣ ಸಂಘದಿಂದ ಆಯೋಜಿಸಿದ್ದ ಶ್ರೀವಿಜಯದಾಸರ ಆರಾಧನೆಯ ಪ್ರಯುಕ್ತ ಮಾತನಾಡಿ ಶ್ರೀ ವಿಜಯದಾಸರು ‘ವಿಜಯವಿಠಲ’ ಎಂಬ ಅಂಕಿತದಿಂದ 25,000 ಸುಳಾದಿ, ಕೀರ್ತನೆಗಳು ಊಗಾಭೋಗಗಳು ರಚಿಸಿ ಪುರಂದರದಾಸರ 4,75,000 ರಚನೆಗಳನ್ನು, 5 ಲಕ್ಷ ಪೂರ್ಣ ಮಾಡಿದ್ದಾರೆ ಎಂಬ ಪ್ರತೀತಿ ಎಂದರು.
ಪಾರಾಯಣ ಸಂಘದ ಕಾರ್ಯದರ್ಶಿ ಶ್ರೀ ವಿನುತ ಜೋಶಿ ಮಾತನಾಡಿ ಶ್ರೀ ವಿಜಯದಾಸರ ಮಹಿಮಾ ಪೂರಕವಾದ ಅವರ ಜೀವನ ಜ್ಞಾನಭಕ್ತಿ ವೈರಾಗ್ಯದ ವಿವಿಧ ಮಜಲುಗಳನ್ನು ತೆರೆದಿಡುವ ಚಲನಚಿತ್ರದಲ್ಲಿ ಕಲಬುರಗಿಯ ಶ್ರೀ ರವಿ ಲಾತೂರಕರ್ ಅವರು ಕಾಶಿರಾಜನ ಪ್ರಮುಖ ಪಾತ್ರವಾದ ನಿರ್ವಹಿಸಿದ್ದು ದೊಡ್ಡ ಪರದೆಯ ಮೇಲೆ ಶ್ರೀ ವಿಜಯದಾಸರನ್ನು ನೋಡಲು ನಾವೆಲ್ಲರೂ ಕಾತುರರಾಗಿದ್ದೇವೆ.
ಶ್ರೀ ರವಿ ಜೋಶಿ ಅವರು ಶ್ರೀ ವಿಜಯದಾಸರ ಕುರಿತು ಸುಶ್ರಾವ್ಯವಾಗಿ ಹಾಡುಗಳನ್ನು ಪ್ರಸ್ತುತಪಡಿಸಿದರು, ಬೆಳಿಗ್ಗೆ ಪಾರಾಯಣ ಸಂಘದ ಸದಸ್ಯರೆಲ್ಲರೂ 108 ಬಾರಿ ಶ್ರೀ ವಿಜಯದಾಸರ ಕವಚವನ್ನು ಪಠಣ ಮಾಡಿದರು.
ಹಿರಿಯರಾದ ಶ್ರೀ ಅಪ್ಪಾರಾವ್ ಟಕ್ಕಳಕಿ, ಪದ್ಮನಾಭಾಚಾರ್ಯ ಜೋಶಿ,ಕೆ ಬಿ ಕುಲಕರ್ಣಿ, ಅನಿಲ್ ಕುಲಕರ್ಣಿ ಸುರೇಶ್ ಕುಲಕರ್ಣಿ, ವಿನುತ ಜೋಶಿ, ಪ್ರಾಣೇಶ್ವರಾವ್ ಮುಜುಂದರ್, ಗೋವಿಂದ್ ರಾವ್ ದೇಶಪಾಂಡೆ, ಗುಂಡೇರಾವ್, ಅಶ್ವಥ್ ನಾರಾಯಣ, ವೆಂಕಟರಾವ್ ಕುಲಕರ್ಣಿ, ಲಕ್ಷ್ಮಿಕಾಂತ್ ಕುಲಕರ್ಣಿ, ಪ್ರವೀಣ ಓಂಕಾರ್, ಅಕ್ಷಯ್ ಕೊರತಿ, ಜ್ಯೋತಿ ಲಾತೂರಕರ್, ಚಂದ್ರಕಲಾ ಮೊಹರಿರ, ರೇಖಾ, ಶಾಮಲಾ ಟಕ್ಕಳಕಿ, ಸುರೆಖಾ ಮುಜುಂದರ್,ಕವಿತಾ ದಿಕ್ಷಿತ,ವನಿತಾ ಮಾಲಗತ್ತಿ, ಸೇರಿದಂತೆ ಶ್ರೀ ಲಕ್ಷ್ಮಿ ನಾರಾಯಣ ಭಜನಾ ಮಂಡಳಿಯ ಮಾತೆರು ಸಹೋದರಿಯರಿಗೂ ಉಪಸ್ಥಿತರಿದ್ದರು.