ಕಲಬುರಗಿ: ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ಅವರ ಜನ್ಮದಿನ ನಿಮಿತ್ತ ವಿದ್ಯಾರ್ಥಿಗಳಿಗೆ ನೋಟ್ ಬುಕ್ ಮತ್ತು ಪೆನ್ನುಗಳು, ಬಡವರಿಗೆ ಹಾಗೂ ನಿರಾಶ್ರಿತರಿಗೆ ಬ್ಲಾಂಕೆಟ್ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಲಿಂಗರಾಜ ತಾರಫೈಲ್ ರವರ ನೇತೃತ್ವದಲ್ಲಿ ನಗರದ ರೈಲು ನಿಲ್ದಾಣ ಹತ್ತಿರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಅಭಿಷೇಕ್ ಪಾಟೀಲ್, ಸಂದೇಶ್ ಕಮಕನೂರ, ಮಹಾನಗರ ಪಾಲಿಕೆ ಸದಸ್ಯರಾದ ಲತಾ ರಾಠೋಡ, ನಿಂಗಮ್ಮ ಕಟ್ಟಿಮನಿ, ಪಕ್ಷದ ಮುಖಂಡರಾದ ವೆಂಕಟರೆಡ್ಡಿ ಧರ್ಮರಾಜ ಹೇರೂರ, ದಿಗಂಬರ್ ತ್ರಿಮೂರ್ತಿ, ಅಮಿದ್ ಸೇಠ್, ಶಿವರಾಜ್ ಬೆಳಗುಂದಿ, ಕಿರಣ್ ಪಂಡಿತ್, ಈರಣ್ಣ ಗೌಡ ಸಾವಳಗಿ, ಮಾರುತಿ ಮುಗುಟಿ, ಕೆಂಚಣ್ಣ, ಎಸ್ ಎಂ ಸುಧೀರ್, ತಿಮ್ಮಣ್ಣ ತೆಲಗೂರ್ ಇದ್ದರು.