ಕಲಬುರಗಿ ನ 22; ವಿದ್ಯಾರ್ಥಿಗಳು ಭಯವಿಲ್ಲದೆ, ಅನೀಮಿಯ ಚಿಕಿತ್ಸೆ ಪಡೆಯಲು ಸದೃಢ ದೇಹ ಮತ್ತು ಚುರುಕು ಬುದ್ದಿ ಹೊಂದಬೇಕದರೆ ಪೌಷ್ಟಿಕ ಆಹಾರ ಸೇವನೆ ಜೊತೆಗೆ ಅನೀಮಿಯ ರಕ್ತ ಪರೀಕ್ಷೆ ಬಹಳ ಪಾತ್ರ ವಹಿಸುತ್ತದೆ. ಮಕ್ಕಳಲ್ಲಿ ಸದಾ ಸುಸ್ತು ಆಯಾಸ ಉಸಿರಾಟದ ತೊಂದರೆ ಅನುಭವಿಸುತ್ತಿರುವರು ಹಾಗಾದರೆ ಅದು ಅನೀಮಿಯ ರಕ್ತ ಹೀನತೆ ಇರಬಹುದು ಇದಕ್ಕೆ ಯಾರು ಹೇದರದೆ, ಕೂಡಲೇ ರಕ್ತ ಪರೀಕ್ಷಿಸಿಕೋಳ್ಳಿ ಅನೀಮಿಯ ಇದ್ದಲ್ಲಿ ಉಚಿತ ಪರೀಕ್ಷೆ ಮಾಡಿಕೊಳ್ಳಲು ಜಿಲ್ಲಾಧಿಕಾರಿ ಬಿ. ಫೌಜೀಯಾ ತರನ್ನೂಮ್ ಅವರು ಸಲಹೆ ನೀಡಿದರು
ಕಲಬುರಗಿ ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಗಣದಲ್ಲಿ , ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಅರ್ ಸಿ ಹೆಚ್ ಓ ವಿಭಾಗ ಕಲಬುರಗಿ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಇವರ ಸಹಭಾಗಿತ್ವದಲ್ಲಿ ಅನೀಮಿಯ ಮುಕ್ತ ಮತ್ತು ಪೌಷ್ಟಿಕ ಕರ್ನಾಟಕ ಉದ್ಘಾಟನಾ ಸಮಾರಂಭಕ್ಕೆ ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡುತ್ತಾ ಹೆಣ್ಣು ಮಕ್ಕಳಲ್ಲಿ ರಕ್ತ ಹೀನತೆ ಹೆಚ್ಚಾಗಿ ಕಂಡುಬರುತ್ತದೆ ಹದಿ ಹರೆಯದ ಮುಟ್ಟಿನ ಸಮಯದಲ್ಲಿ ರಕ್ತ ಹೀನತೆ ಸಾದ್ಯತೆ ಹೆಚ್ಚು ಹಾಗೆ ಗಂಡು ಮಕ್ಕಳಲ್ಲಿ ಸದಾ ಸುಸ್ತು ಆಯಾಸ ಹೀಗೆ ಇರುವವರು ಅನೀಮಿಯ ರಕ್ತ ಪರೀಕ್ಷೆ ಮಾಡಿಸಿಕೊಳ್ಳಲು ಅವರಿಗೆ ಸಮಾಲೋಚನೆ ಮಾಡಿ ಜಾಗೃತಿ ಮೂಡಿಸುವ ಕೆಲಸ ಅಗಬೇಕು ಪ್ರತಿ ಶಾಲಾ ಕಾಲೇಜುಗಳಲ್ಲಿ, ನಡೆಯಬೇಕು, ಹಾಗೆ ಆರೋಗ್ಯ ಇಲಾಖೆಯ ವೈದ್ಯಕೀಯ ತಂಡ ಅನೀಮಿಯ ಕುರಿತು ತಪಾಸಣೆ ನಡೆಸಲು ಹಾಗೂ ಚಿಕಿತ್ಸೆ ನೀಡಲು ನಿಮ್ಮ ಶಾಲಾ / ಕಾಲೇಜುಗಳಲ್ಲಿ ಭೇಟಿ ನೀಡಿದ್ದಗ ಅವಕಾಶ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ನಂತರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಡಾ.ರಾಜಶೇಖರ ಮಾಲಿ ಅವರು ಹೆಣ್ಣು ಮಕ್ಕಳಲ್ಲಿ ಹೆಚ್ಚು ರಕ್ತ ಹೀನತೆ ಕಂಡುಬರುತ್ತದೆ ಮುಟ್ಟಿನ ಸಮಯ ಅವರು ಜಾಗೃತರಾಗಿರಬೇಕು. ಯಾವುದೇ ಕಾರಣಕ್ಕೆ ಹೇದರುವ ಪ್ರಮೇಯ ಇಲ್ಲ ಧೈರ್ಯವಾಗಿ ಇರುಬೇಕು .ಹಾಗೆ ಉತ್ತಮವಾದ ಪೌಷ್ಟಿಕ ಅಹಾರ ಸೇವನೆ ಮಾಡುಬೇಕು. ಈ ಅನೀಮಿಯ ರಕ್ತ ಪರೀಕ್ಷೆ ಮಾಡಿಕೊಳ್ಳಬೇಕು ತಪ್ಪದೆ ಚಿಕಿತ್ಸೆ ಪಡೆಯಬೇಕು ನಮ್ಮ ಕಲಬುರಗಿ ಜಿಲ್ಲೆಯ ಒಂದು ತಿಂಗಳ ಕಾಲ ನಿರಂತರ ಅನೀಮಿಯ ರಕ್ತ ಪರೀಕ್ಷೆ ಪೌಷ್ಟಿಕ ಉಚಿತ ಚಿಕಿತ್ಸೆ ನೀಡುತ್ತರೆ . ಸದುಪಯೋಗ ಪಡೆದುಕೊಳ್ಳಬೇಕು ಹಾಗೆ ನಮ್ಮ ಜಿಲ್ಲೆ ಅನೀಮಿಯ ಮುಕ್ತ ಪೌಷ್ಟಿಕ ಕರ್ನಾಟಕ ಮಾಡಲು ಮುಂದಗಬೇಕೆಂದು ಹೇಳಿದರು.
ಇದಕ್ಕೂ ಮೊದಲು ಜಿಲ್ಲಾ ಆರ್ ಸಿ ಹೆಚ್ ಅಧಿಕಾರಿಗಳು ಡಾ. ಶರಣಬಸಪ್ಪ ಕ್ಯಾತನಾಳ ಅವರು ಪ್ರಸಕ್ತವಾಗಿ ಕಾರ್ಯಕ್ರಮದ ಬಗ್ಗೆ ಸ್ವಾ ವಿಸ್ತಾರವಾಗಿ ಮಾತನಾಡಿದು. ನಮ್ಮ ಆರೋಗ್ಯ ಇಲಾಖೆ ವೈದ್ಯಕೀಯ ತಂಡ ರಚನೆ ಮಾಡಲಾಗಿದೆ ಅದರಂತೆ ಪ್ರತಿ ಜಿಲ್ಲಾ ಹಾಗೂ ತಾಲ್ಲೂಕುವಾರುನಲ್ಲಿ ನಮ್ಮ ಸಿಬ್ಬಂದಿ ಬಂದು ಅನೀಮಿಯ ರಕ್ತ ಪೌಷ್ಟಿಕ ಉಚಿತ ಪರೀಕ್ಷೆ ಒಳಪಡುಬೇಕು ಮಕ್ಕಳು ನಮ್ಮ ತಂಡ ನೂಡಲ್ ಅಧಿಕಾರಿಗಳು ಕ್ಷೇತ್ರ ಭೇಟಿ ಸಮಯದಲ್ಲಿ ಮಾಹಿತಿ ಸಂಗ್ರಹಣೆ ಮಾಡಿ , ಆರ್ ಬಿ ಎಸ್ ಕೆ , ಸ್ವಾಸ್ಥ್ಯ ಕಿರಣ ಪೋರ್ಟಲ್ ನಲ್ಲಿ ತಂತ್ರಾಂಶದಲ್ಲಿ ಅಳವಡಿಸಲಾಗುತ್ತದೆ. ಹೆಚ್ಚು ಹೆಚ್ಚಾಗಿ ಅನೀಮಿಯ ರಕ್ತ ಪರೀಕ್ಷೆ ಮಾಡಿಸಿಕೊಂಡು , ರಕ್ತ ಹೀನತೆ ಮುಕ್ತವಹಿಸಿ ಹಿಮೋಗ್ಲೋಬಿನ್ ಪರೀಕ್ಷೆ ಮಾಡಿಕೊಂಡು ಸೂಕ್ತವಾದ ಚಿಕಿತ್ಸೆ ಪಡೆದು ಅನೀಮಿಯ ಮುಕ್ತ ಕರ್ನಾಟಕಕ್ಕೆ ಕೈ ಜೋಡಿಸಲು ಹೇಳಿದರು.
ವೇದಿಕೆ . ಉಪ ನಿರ್ದೇಶಕರು, ಪ. ಪೂ. ಶಿಕ್ಷಣ ಇಲಾಖೆ, ಶಿವಶರಣಪ್ಪ ಮೂಳೇಗಾವ್. ಸರ್ಕಾರಿ ಬಾಲಕಿಯರ ಪ.ಪೂ ಕಾಲೇಜು ಪ್ರಾಂಶುಪಾಲರು ದೇವನಗೌಡ ಪಾಟೀಲ್, ಜಿಲ್ಲಾ ಸಿಸಿಟಿ ಅಧಿಕಾರಿಗಳು ವಿವೇಕಾನಂದ ರೆಡ್ಡಿ, ಡಿಎಲ್ಓ ಡಾ.ರಾಜಕುಮಾರ ಕುಲಕರ್ಣಿ, ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿಗಳು ಡಾ. ಬಸವರಾಜ ಗುಳಗಿ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳು ಡಾ. ಶಿವಶರಣಪ್ಪ ಭೂಸನೂರ್ , ತಾಲ್ಲೂಕು ಆರೊಗ್ಯಾಧಿಕಾರಿಗಳು ಕಲಬುರಗಿ ಡಾ. ಮಾರುತಿ ಕಾಂಬಳೆ. IಅಆS ಆಡಳಿತ ವೈದ್ಯಾಧಿಕಾರಿ ಡಾ. ವೀಣಾ ಕಾಳಪುರ ,ಜಿಲ್ಲಾ ಅರ್ ಸಿ ಹೆಚ್ ಓ, ವಿಭಾಗದ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ವೀರೇಶ ಜಾವಳಗೇರಿ ,ಜಿಲ್ಲಾ ಕಾರ್ಯಕ್ರಮ ಸಂಯೋಜಕ ರವೀಂದ್ರ ಠಾಕೂರ್, ಜಿಲ್ಲಾ ಮೌಲ್ಯಮಾಪನ ವ್ಯವಸ್ಥಾಪಕ ವಿಶ್ವನಾಥ ಸಣ್ಣೂರ, ನಗರ ಯೋಜನಾ ವ್ಯವಸ್ಥಾಪಕರು ಶ್ರೀಕಾಂತ ಸ್ವಾಮಿ, ಅರ್ ಕೆ ಎಸ್ ಕೆ, ಜಿಲ್ಲಾ ಸಂಯೋಜಕ ಶಿವಕುಮಾರ ಕಾಂಬಳೆ, ವೀಣಾ ದೇಸಾಯಿ, ರಾಜೇಶ್ವರಿ ಗುಡ್ಡಾ, ರೇಖಾ ಚೌಧಾರಿ, ಬಸಮ್ಮ, ಗಾಯತ್ರಿ ಸಜ್ಜನಶೆಟ್ಟಿ, ದತ್ತಾತ್ರೇಯ ಕುಲಕರ್ಣಿ, ವಿಠಲ್, ಸಿದ್ದರಾಮ, ಸಮಾಲೋಚಕ ಅಲ್ಲಮ್ಮಪ್ರಭು ನಿಂಬರಗಿ ನಿರೂಪಿಸಿ / ವಂದಿಸಿದರು , ಜಿಲ್ಲಾ ಡಿ ಆರ್ ಟಿಬಿ ಸಮಾಲೋಚಕ ಮಂಜುನಾಥ ಕಂಬಾಳಿಮಠ, ಹಾಗೆ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಇತರೆ ಆರೋಗ್ಯ ಸಿಬ್ಬಂದಿ ವರ್ಗದವರು ಹಾಗೂ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.