ರೈತರ ಬೇಡಿಕೆಗಳಿಗಾಗಿ ಸರಕಾರಗಳ ವಿರುದ್ಧ ಮಹಾ ಧರಣಿ; ಮಲ್ಲಿಕಾರ್ಜುನ ಸತ್ಯಂಪೇಟೆ

0
28

ಸುರಪುರ: ರಾಜ್ಯದಲ್ಲಿನ ರೈತರ ಅನೇಕ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಸಂಯುಕ್ತ ಹೋರಾಟ ಸಮಿತಿ ಕರ್ನಾಟಕ ವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‍ಲ್ಲಿ ಇದೇ ನವೆಂಬರ್ 26 ರಿಂದ 28ನೇ ತಾರಿಖಿನವರೆಗೆ ಮಹಾ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ,ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆಗಾಗಿ ಸ್ವಾಮಿನಾಥನ್ ವರದಿ ಜಾರಿಗೊಳಿಸಬೇಕು,ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕ್‍ಗಳಲ್ಲಿನ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು,ರಾಜ್ಯದಲ್ಲಿ ಬರಗಾಲವಿರುವ ಕಾರಣ ಬೆಳೆ ಪರಿಹಾರ ಮತ್ತು ಬರ ಪರಿಹಾರವನ್ನು ಸೂಕ್ತ ರೀತಿಯಲ್ಲಿ ಒದಗಿಸಬೇಕು.ಕೇಂದ್ರ ಸರಕಾರ ಜಾರಿಗೊಳಿಸಿರುವ ಮೂರು ಕೃಷಿ ವಿರೋಧಿ ಕಾಯಿದೆಗಳನ್ನು ವಾಪಸ್ಸು ಪಡೆಯಬೇಕು,ಸದ್ಯ ಬೆಳೆದಿರುವ ಭತ್ತ,ಹತ್ತಿ,ಸಜ್ಜೆ ಸೇರಿದಂತೆ ಎಲ್ಲಾ ಬೆಳೆಗಳಿಗೆ ಬೆಂಬಲ ಬೆಲೆ ಒದಗಿಸಿ ಸರಕಾರವೇ ನೇರವಾಗಿ ಖರೀದಿಸಬೇಕು.

Contact Your\'s Advertisement; 9902492681

ಕೃಷಿಗಾಗಿ ಹಗಲಿನಲ್ಲಿ 10 ತಾಸು ಗುಣಮಟ್ಟದ ವಿದ್ಯುತ್ ನೀಡಬೇಕು.ರಾಷ್ಟ್ರ ಹಾಗೂ ರಾಜ್ಯ ಹೆದ್ದಾರಿಗಾಗಿ ಭೂಮಿ ಕಳೆದುಕೊಂಡಿರುವ ರೈತರಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸುವುದಲ್ಲದೆ ಗುತ್ತಿಗೆದಾರರು ಹೆಚ್ಚಿಗೆ ಭೂಮಿಯನ್ನು ಲಪಟಾಯಿಸುತ್ತಿರುವುದು ನಿಲ್ಲಿಸಬೇಕು.ಕೃಷ್ಣಾ ಕಾಲುವೆಗಳಿಗೆ ಜನೆವರಿ ಅಂತ್ಯದ ವರೆಗೆ ನೀರು ಹರಿಸಬೇಕು.ಬಗರ ಹುಕುಂ ಸಾಗುವಳಿದಾರರಿಗೆ ಭೂಮಿ ಪಟ್ಟಾ ನೀಡಿ ನ್ಯಾಯ ಒದಗಿಸಬೇಕು.ಕಬ್ಬು ಬೆಳೆಗಾರರಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಿ ಸರಿಯಾದ ಸಮಯದೊಳಗೆ ಹಣ ಒದಗಿಸಬೇಕು.ಭತ್ತ ಹತ್ತಿ ಖರೀದಿ ಮಾಡುವ ನಕಲಿ ಖರೀದಿದಾರರ ಹಾವಳಿ ತಪ್ಪಿಸಬೇಕು.

ಬರಗಾಲವಿರುವ ಕಾರಣ ತೋಟಗಾರಿಕೆ ಬೆಳೆಗಳಾದ ಮೆಣಸಿನಕಾಯಿ,ದಾಳಿಂಬೆ,ಪಪ್ಪಾಯಿ,ದ್ರಾಕ್ಷಿ,ಡ್ರ್ಯಾಗನ್ ಫ್ರೂಟ್ ಈ ಎಲ್ಲಾ ಬೆಳೆಗಳಿಗೆ ಸೂಕ್ತ ಪರಿಹಾರ ನೀಡಬೇಕು.ವಿದ್ಯುತ್ ಕಂಬ ಹಾಗೂ ತಂತಿಗಳು ಹಳೆಯದಾಗಿದ್ದರಿಂದ ಅನೇಕ ಕಡೆಗಳಲ್ಲಿ ತಂತಿ ಹರಿದು ಬಿದ್ದು ಅನಾಹುತಗಳು ಸಂಭವಿಸುತ್ತಿದ್ದು ಹೊಸ ಲೈನ್‍ಗಳನ್ನು ಹಾಗೂ ಕಂಬಗಳನ್ನು ಹಾಕಬೇಕು.ನೀರಿರದ ಜಮೀನುಗಳಿಗೆ ಗಂಗಾ ಕಲ್ಯಾಣ ಯೋಜನೆಯಡಿ ರೈತರಿಗೆ ನೀರಿನ ಅನುಕೂಲ ಮಾಡಿಕೊಡಬೇಕು.ಬರಗಾಲವಿದ್ದ ಕಾರಣ ದನ ಕರುಗಳಿಗೆ ಮೇವು ಹಾಗೂ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಲಾಗುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಶರಣು ಮಂದರವಾಡ,ತಾಲೂಕು ಅಧ್ಯಕ್ಷ ಸಿದ್ದಪ್ಪ ಗುದ್ದಕಾಯಿ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುದ್ದಣ್ಣ ಅಮ್ಮಾಪುರ,ಜಿಲ್ಲಾ ಉಪಾಧ್ಯಕ್ಷ ಮಲ್ಲಣ್ಣ ಹುಬ್ಬಳ್ಳಿ,ಶಹಾಪುರ ತಾಲೂಕ ಅಧ್ಯಕ್ಷ ಮಲ್ಕಣ್ಣ ಚಿಂತಿ,ಮುಖಂಡರಾದ ಚೆನ್ನಮಲ್ಲಿಕಾರ್ಜುನ ಗುಂಡಾನೂರ,ಭೀಮರಾಯ ಕುಂಬಾರ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here