ಆಳಂದ; ಪಟ್ಟಣದಲ್ಲಿನ ಪೂಜ್ಯ ರಾಜಶೇಖರ ಮಹಾ ಸ್ವಾಮೀಜಿ ಬಿ.ಎಡ್ ಕಾಲೇಜ್ 2022- 23ನೇ ಸಾಲಿನ ನಾಲ್ಕನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಪೌರತ್ವ ತರಬೇತಿ ಶಿಬಿರ (ನವೆಂಬರ್ 24 ) ಬೆಳಿಗ್ಗೆ 11 ಘಂಟೆಗೆ ತಾಲ್ಲೂಕಿನ ಬಸವನ ಸಂಗೋಳಗಿ ಗ್ರಾಮದ ಬಸವಣ್ಣ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬಿ.ಎಡ್ .ಕಾಲೇಜಿನ ಪ್ರಾಂಶುಪಾಲ ಡಾ.ಅಶೋಕ ರೆಡ್ಡಿ ತಿಳಿಸಿದ್ದಾರೆ.
ಗುರುವಾರ ಪಟ್ಟಣದಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು,ಅಧ್ಯಕ್ಷತೆ ಮಾಜಿ ಸುಭಾಷ್ ಗುತ್ತೇದಾರ್, ಉದ್ಘಾಟನೆ ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶಕ ವಿಜಯಕುಮಾರ ಜಿ.ಎಂ.ಮುಖ್ಯ ಅಥಿತಿಗಳಾಗಿ,ಜೀವನ ಜ್ಯೋತಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ. ರಾಘವೇಂದ್ರ ಚಿಂಚನಸೂರ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲಿನಾಥ ಖಜೂರಿ,ಬಸವಣ್ಣ ದೇವಾಲಯ ಸಮಿತಿ ಕಾರ್ಯದರ್ಶಿ ಬಸವರಾಜ್ ಬಿರಾದಾರ ,ಪ್ರಾಂಶುಪಾಲ ವಿಜಯಕುಮಾರ್ ಗೊತಗಿ,ಡಾ.ಅಪ್ಪಾಸಾಬ ಬಿರಾದಾರ,ಪತ್ರಕರ್ತರ ಶೀವಲಿಂಗ್ ತೇಲ್ಕರ್ ಭಾಗವಹಿಸಲಿದ್ದಾರೆ.
ಈ ಪೌರತ್ವ ಶಿಬಿರ 3 ದಿನಗಳ ಕಾಲ ನಡೆಯಲಿದೆ. ಇಲ್ಲಿ ಧ್ಯಾನ, ಯೋಗ,ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ಇತರೆ ಚಟುವಟಿಕೆಗಳು ಜರುಗಲಿವೆ ಎಂದರು.