ಆಳಂದ; ಸಾಧನೆ ಎನ್ನುವುದು ಸೋಮಾರಿಗಳ ಸ್ವತ್ತಲ್ಲ ನಿರಂತರ ಪರಿಶ್ರಮ ವಾದಿಗಳ ಸೊತ್ತಾಗಿದೆ ಎಂದು ಕಡಗಂಚಿ ಸಿಆರ್‌ಪಿ ವೀರೇಶ ಬೋಳಶೆಟ್ಟಿ ಹೇಳಿದರು.
ಆಳಂದ ತಾಲೂಕಿನ ಕಡಗಂಚಿ ಗ್ರಾಮದ ಸರ್ಕಾರಿ ಪ್ರಾಥಾಮಿಕ ಶಾಲೆಯ ಆವರಣದಲ್ಲಿ ಮಕ್ಕಳಿಗೆ ಬಹುಮಾನ ವಿತರಿಸಿ ಮಾತನಾಡುತ್ತಾ ಗಣಿತ ಅನ್ನೋದು ಬಹಳ ಸರಳವಾದ ವಿಷಯ ಏಕೆಂದರೆ ಮನಸಿಟ್ಟು ಓದಿ ಪರೀಕ್ಷೆಯಲ್ಲಿ ಸರಿಯಾದ ಉತ್ತರ ಬರೆದರೆ ನೂರಕ್ಕೆ ನೂರು ಪ್ರತಿಶತ ಅಂಕ ಪಡೆಯಬಹುದು. ಅದಕ್ಕಾಗಿ ಈ ವಿಷಯದಲ್ಲಿ ಸರ್ಕಾರವು ಬಹುಮಾನ ವಿತರಣೆ ಮೂಲಕ ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತಿದೆ. ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಿಕೊಳ್ಳಬೇಕೆಂದು ಮಾರ್ಮಿಕವಾಗಿ ನುಡಿದರು.
ಮಕ್ಕಳಿಗೆ ಗಣಿತ ಸ್ಪರ್ಧೆಯನ್ನು ನಡೆಸಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಶಾಲೆಗಳ ಮಕ್ಕಳು ಪರೀಕ್ಷೆಗೆ ಹಾಜರಿದ್ದು ಸ್ಪರ್ಧಾತ್ಮಕ 4ನೇ 5ನೇ 6ನೇ ತರಗತಿಯ ಮಕ್ಕಳಿಗೆ ಪರೀಕ್ಷೆಯಲ್ಲಿ ಪ್ರಥಮ ಬಹುಮಾನ ಬಂದ ಮಕ್ಕಳಿಗೆ 1000 ರೂಪಾಯಿ ದ್ವಿತೀಯ ಬಹುಮಾನ 600 ತೃತೀಯ ಬಹುಮಾನ 400 ರೂಪಾಯಿ ಇದ್ದಿರುತ್ತದೆ. ಕಡಗಂಚಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಇಂದುಮತಿ ಮಾದಗೊಂಡ ರವರು ಮಕ್ಕಳಿಗೆ ಬಹುಮಾನ ವಿತರಿಸಿದರು.
ಗ್ರಾಮ ಪಂಚಾಯತಿ ಸದಸ್ಯರು, ಮುಖ್ಯ ಗುರುಗಳಾದ ಶರಣಮ್ಮ ಪಾಟೀಲ, ಸಹ ಶಿಕ್ಷಕರು, ವಿದ್ಯಾರ್ಥಿಗಳು ಸೇರಿದಂತೆ ಅನೇಕ ಜನ ಭಾಗವಹಿಸಿದ್ದರು.