ವಾಡಿ; ಕರ್ನಾಟಕ ಸರ್ಕಾರದ ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಐಟಿ ಬಿಟಿ ಸಚಿವರು, ಕಲಬುರ್ಗಿ ಜಿಲ್ಲೆಯ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಪ್ರಿಯಾಂಕ ಖರ್ಗೆ ಜಿ ಅವರು ಕಿರಿಯ ವಯಸ್ಸಿನಲ್ಲೇ ಶಾಸಕರಾಗಿ, ಸಚಿವರಾಗಿ ಅನೇಕ ಜನಪರ ಕೆಲಸಗಳನ್ನು ಮಾಡಿದ್ದಾರೆ. ಚಿತ್ತಾಪುರ ಮತಕ್ಷೇತ್ರವಲ್ಲದೆ ಇಡೀ ಕರ್ನಾಟಕವನ್ನು ಮಾದರಿಯ ರಾಜ್ಯವನ್ನಾಗಿ ಮಾಡುವ ಬೃಹತ್ ಕನಸು ಇಟ್ಟು ಕೊಂಡಿರುವ ಅತ್ಯಂತ ಪ್ರಭುದ್ಧ ರಾಜಕಾರಣಿ. ಏನೇ ಮಾತಾಡಿದರೂ ದಾಖಲೆ ಸಮೇತವಾಗಿ ಮಾತಾಡುವಂತ ಮನೋಭಾವ ಬೆಳೆಸಿಕೊಂಡು ಬಂದಿರುವ ಇವರು ಮುಂದೆ ಒಂದು ದಿನ ರಾಜ್ಯದ ಮುಖ್ಯಮಂತ್ರಿಯಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ ಎಂದು ವಾಡಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಬಾಬುಮಿಯ್ಯಾ ತಮ್ಮ ವಿಚಾರಗಳನ್ನು ಹಂಚಿಕೊಂಡರು.
ಡಾ. ಬಿ.ಆರ್ ಅಂಬೇಡ್ಕರ್ ಕಾಲೋನಿ ವಾರ್ಡ್ ನಂಬರ್ 07 ಮತ್ತು 08 ರ ಧಮ್ಮ ದೀಕ್ಷಾ ಭೂಮಿ ಆವರಣದಲ್ಲಿ ಮಾಜಿ ಪುರಸಭೆ ಸದಸ್ಯರಾದ ಸೂರ್ಯಕಾಂತ್ ರದ್ದೆವಾಡಗಿ ಅವರ ನೇತೃತ್ವದಲ್ಲಿ ಆಯೋಜಿಸಿರುವ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆಜೀ ಅವರ ಹುಟ್ಟು ಹಬ್ಬದ ಪ್ರಯುಕ್ತ ಕೇಕ್ ಕಟ್ ಮಾಡಿ ಮಾತನಾಡಿದರು.
ಮಹಿಳೆಯರಿಗೆ ಮನೆ ಮನೆಗೆ ಸೀರೆ ಹಂಚುವ ಕಾರ್ಯಕ್ರಮಕ್ಕೆ ವಾಡಿ ಹಿರಿಯ ಮುಖಂಡರಾದ ಟೋಪಣ್ಣ ಕೋಮಟೆ ಅವರು ಚಾಲನೆ ನೀಡಿ ಮಾತನಾಡಿದರು.
ತದನಂತರ ಸಿದ್ದಾರ್ಥ್ ತರುಣ ಸಂಘದ ತರುಣರು ಅಂಬೇಡ್ಕರ್ ಕಾಲೋನಿ, ಸಿದ್ದಾರ್ಥ ಕಾಲೋನಿ, ಚೌಡೇಶ್ವರ ಕಾಲೋನಿ, ಜಾಂಬವೀರ ಕಾಲೋನಿ ಕಾಕಾ ಚೌಕಗಳಲ್ಲಿರುವ ಪ್ರತಿ ಮನೆ ಮನೆಗೆ ತೆರಳಿ ಮಹಿಳೆಯರಿಗೆ ಸೀರೆ ವಿತರಣೆ ಮಾಡಿದರು.
ಕಾಂಗ್ರೆಸ್ ಯುವ ಮುಖಂಡರಾದ ಶರಣಬಸ್ಸು ಶೀರೂರಕರ್, ಹಿರಿಯರಾದ ಭೀಮಾ ನಾಟೆಕರ, ಮಾಜಿ ಪುರಸಭೆ ಸದಸ್ಯರಾದ ಮಹಮ್ಮದ್ ಗೌಸ್ ಮತ್ತು ನಾಗೇಂದ್ರ ಜೈಗಂಗಾ, ಕಸಾಪ ಮಾಜಿ ಅಧ್ಯಕ್ಷರಾದ ಖೇಮಲಿಂಗ ಬೆಳಮಗಿ, ಕಾಂಗ್ರೆಸ್ ಮುಖಂಡರಾದ ಖದಿರ್ ಪಾಶಾ, ಮಾಹಾನಾಯಕ ಸಂಘದ ಅಧ್ಯಕ್ಷರಾದ ಭೀಮಶಾ ಮೈನಾಳ, ಬಸವರಾಜ್ ಜೋಗುರ್, ದಿಲೀಪ್ ಮೈನಾಳ ವಿಶಾಲ್ ಬಡಿಗೇರ್ ಪ್ರಕಾಶ್ ಸಾವರೆ, ಶಶಿ ಐರೋಲಿ, ಪ್ರಕಾಶ್ ತೆಲ್ಲೂರ್ ಮಹೇಂದ್ರ ಕುಮಾರ್ ಮೈನಾಳ ಭೀಮ, ಸಂದೀಪ್ ಜೋಗುರ್ ಮತ್ತು ಬಡಾವಣೆಯ ಹಿರಿಯರು, ಯುವಕರು ಮತ್ತು ಮಹಿಳೆಯರು ಪಾಲ್ಗೊಂಡಿದ್ದರು.