ಕಲಬುರಗಿ ಕಸಾಪ ದ ವೆಬ್‍ಸೈಟ್ ಲೋಕಾರ್ಪಣೆ

0
320

ಕಲಬುರಗಿ: ಸಂಘಟಕ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾಗಿ ಎರಡು ವರ್ಷಗಳು ಪೂರೈಸಿರುವ ಹಿನ್ನೆಲೆ ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ಪರಿಷತ್ತಿನ ಕಾರ್ಯಕ್ರಮಗಳು ಜಗತ್ತಿಗೆ ಪರಿಚಯ ಆಗಲೀ ಎಂಬ ಉದ್ದೇಶದಿಂದ ಜಿಲ್ಲಾ ಕಸಾಪ ದ ವೆಬ್‍ಸೈಟ್ ನ್ನು ಉದ್ಘಾಟಿಸಲಾಯಿತು.

ಕನ್ನಡ ಭವನದ ಆವರಣದಲ್ಲಿರುವ ಭೌತಿಕ ಕಟ್ಟಡಗಳ ಅಭಿವೃದ್ದಿಗೆ ನಮ್ಮ ಮಂಡಳಿಯಿಂದ ಸಾಧ್ಯವಾದಷ್ಟು ಮಟ್ಟಿಗೆ ಸಹಾಯ-ಸಹಕಾರ ನೀಡುತ್ತೇವೆ. ಜತೆಗೆ ಕಳೆದ ಎರಡ್ಮೂರು ವರ್ಷಗಳಿಂದ ಸ್ಥಗಿತಗೊಂಡಿರುವ ಈ ಭಾಗದ ಲೇಖಕರ ಪುಸ್ತಕಗಳ ಖರೀದಿಯ ಪ್ರಕ್ರಿಯೆಯನ್ನು ಸಂಬಂಧಿಸಿದ ಅಧಿಕಾರಿಗಳ ಜೊತೆ ಚರ್ಚಿಸಿ, ಮತ್ತೆ ಖರೀದಿಸುವ ಪ್ರಯತ್ನ ಮಾಡಲಾಗುತ್ತದೆ.– ಎಂ. ಸುಂದರೇಶ ಬಾಬು, ಕಾರ್ಯದರ್ಶಿ, ಕೆ.ಕೆ.ಆರ್.ಡಿ., ಕಲಬುರಗಿ.

ವೆಬ್‍ಸೈಟ್ ಉದ್ಘಾಟಿಸಿ ಮಾತನಾಡಿದ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ಎಂ.ಸುಂದರೇಶ ಬಾಬು ಅವರು, ಇಂಗ್ಲೀಷ್ ಮೋಹದಲ್ಲಿ ಕನ್ನಡದ ಅಸ್ಮಿತೆ ಕಳೆದು ಹೋಗಬಾರದು. ಬರೀ ಹೋರಾಟ, ಭಾಷಣದಿಂದ ನಮ್ಮ ಭಾಷೆ ಬೆಳೆಯುವುದಿಲ್ಲ. ಅದರ ಜತೆಗೆ ನಾವು ನಿತ್ಯ ಬಳಸುವ ಮೂಲಕ ಭಾಷೆ ಉಳಿಯುತ್ತದೆ. ನಮ್ಮ ಭಾಗದಲ್ಲಿ ಕನ್ನಡ ಶಾಲೆ ಗಟ್ಟಿಗೊಳಿಸುವುದರ ಜೆತೆಗೆ ಇಂಗ್ಲಿಷ್ ನ `ಮಮ್ಮಿ’ಯ ಅಬ್ಬರದಲ್ಲಿ ಕಳೆದು ಹೋಗುತ್ತಿರುವ ಕನ್ನಡದ `ಅವ್ವ’ ನನ್ನು ಉಳಿಸಿಕೊಳ್ಳಲು ಎಲ್ಲರೂ ಕೈಜೋಡಿಸೋಣ ಎಂದ ಅವರು, ಈ ನಿಟ್ಟಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹೊಸ ಆವಿಷ್ಕಾರದ ಕಾರ್ಯಕ್ರಮಗಳು ಆಯೋಜಿಸಿ, ಹೊಸ ಪೀಳಿಗೆಗೆ ಹೊಸ ವಿಚಾರಗಳನ್ನು ಮುಟ್ಟಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.

Contact Your\'s Advertisement; 9902492681

ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಸರಕಾರವು ನಮ್ಮ ಭಾಗದ ಸರಕಾರಿ ಕನ್ನಡ ಮಾಧ್ಯಮ ಶಾಲೆಗಳ ಗುಣಮಟ್ಟ ಹೆಚ್ಚಿಸುವಲ್ಲಿ ವಿಶೇಷ ಆಸಕ್ತಿ ವಹಿಸಬೇಕು. ಅತೀಯಾದ ಕೆಲಸದ ಒತ್ತಡದ ಜೀವನಕ್ಕೆ ಶಿಕ್ಷಕರ ಪ್ರತಿಭೆ ವ್ಯರ್ಥವಾಗುತ್ತಿದೆ. ಮತ್ತು ನಮ್ಮ ಬದುಕಿನ ಭಾಷೆಯಾಗಿರುವ ಕನ್ನಡವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಶ್ರಮ ವಹಿಸಬೇಕಾಗಿದೆ. ಕಳೆದ ಅನೇಕ ವರ್ಷಗಳಿಂದ ಸಮ್ಮೇಳನ ನಡೆಸಲಿಕ್ಕೆ ಮಾತ್ರ ಸೀಮಿತವಾಗಿದ್ದ ಪರಿಷತ್ತು, ನಾನು ಪರಿಷತ್ತಿನ ಜಿಲ್ಲಾಧ್ಯಕ್ಷರಾಗಿ ಎರಡು ವರ್ಷಗಳಲ್ಲಿ ನಮ್ಮ ಪದಾಧಿಕಾರಿಗಳ ಸಹಕಾರದೊಂದಿಗೆ ಜಿಲ್ಲೆಯಲ್ಲಿ ನಿತ್ಯ ನಿರಂತರವಾಗಿ ಹೊಸ ಆಲೋಚನೆ ಮತ್ತು ವಿಭಿನ್ನ ಪ್ರಯೋಗಗಳೊಂದಿಗೆ ಸಾಂದರ್ಭಿಕ ಸಂದರ್ಭಗಳನ್ನು ಬಳಸಿಕೊಂಡು ಕನ್ನಡದ ಕಾರ್ಯಕ್ರಮಗಳನ್ನು ಆಯೋಜಿಸಿ ಪರಿಷತ್ತನ್ನು ಸದಾ ಹಸಿರನ್ನಾಗಿಸುವ ಕೆಲಸ ಮಾಡುತ್ತಿದ್ದೇವೆ. ಜಿಲ್ಲೆಯ ಸರ್ವ ಕ್ಷೇತ್ರದ ಜನರನ್ನು ಕನ್ನಡ ಭವನದ ಕಡೆಗೆ ಮುಖ ಮಾಡುವ ಹಾಗೇ ಕಾರ್ಯ ಮಾಡುತ್ತಿದ್ದೇವೆ ಎಂದರು.

ನೀರಾವರಿ ಇಲಾಖೆಯ ಅಧೀಕ್ಷಕ ಅಭಿಯಂತರರಾದ ಅಮೀನ್ ಮುಕ್ತರ್ ಅಹ್ಮದ್, ಹಿರಿಯ ಲೇಖಕಿ ಡಾ. ವಿಜಯಲಕ್ಷ್ಮೀ ಕೋಸಗಿ ಮಾತನಾಡಿದರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಗಳಾದ ಶಿವರಾಜ ಎಸ್ ಅಂಡಗಿ, ಯಶ್ವಂತರಾಯ ಅಷ್ಠಗಿ, ಕೋಶಾಧ್ಯಕ್ಷ ಶರಣರಾಜ್ ಛಪ್ಪರಬಂದಿ ವೇದಿಕೆ ಮೇಲಿದ್ದರು.

ಪ್ರಮುಖರಾದ ವಿನೋದಕುಮಾರ ಜೇನವೇರಿ,ರಾಜೇಂದ್ರ ಮಾಡಬೂಳ, ಆನಂದ ನರೋಣಾ, ಸೋಮಶೇಖರ ನಂದಿಧ್ವಜ, ಶಿವಾನಂದ ಮಠಪತಿ, ಮಲ್ಲಯ್ಯಾ ಝಳಕಿಮಠ, ಶ್ರೀಕಾಂತ ಪಾಟೀಲ ತಿಳಗೂಳ, ಶಕುಂತಲಾ ಪಾಟೀಲ ಜಾವಳಿ, ಪದ್ಮಾವತಿ ನಾಯಕ್, ಪ್ರಭವ ಪಟ್ಟಣಕರ್, ನಾಗನ್ನಾಥ ಯಳಸಂಗಿ, ಸಂತೋಷ ಕುಡಳ್ಳಿ, ಮಂಜುನಾಥ ಕಂಬಾಳಿಮಠ, ಶಿವಶರಣ ಹಡಪದ, ರೇವಣಸಿದ್ದಪ್ಪ ಜೀವಣಗಿ, ಬಸ್ವಂತರಾಯ ಕೋಳಕೂರ, ಹೆಚ್ ಎಸ್ ಬರಗಾಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here