ತೆಲಂಗಾಣದಲ್ಲಿ ಸವಿತಾ ಶ್ರೀಗಳಿಂದ ಜನಾಂಗ ಜಾಗೃತಿ’; ಲಕ್ಷ್ಮೀ ನರಸಿಂಹ ದೇವಸ್ಥಾನ ಜೀರ್ಣೋದ್ಧಾರಕ್ಕೆ ಸಭೆ:

0
204

ವಾಡಿ: ಪಟ್ಟಣ ಸಮೀಪದ ಕೊಂಚೂರು ಮಹರ್ಷಿ ಸವಿತಾ ಪೀಠದ ಪೀಠಾಧಿಪತಿ ಪೂಜ್ಯ ಶ್ರೀ ಸವಿತಾನಂದನಾಥ ಸ್ವಾಮೀಜಿ ಅವರು ತೆಲಂಗಾಣ, ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿ ಸಂಚರಿಸಿ ಸವಿತಾ ಸಮಾಜದ ಜಾಗೃತಿಗೆ ಮುಂದಾಗಿದ್ದಾರೆ. ಸವಿತಾ ಸಮಾಜದ ಜನರನ್ನು ಒಗ್ಗೂಡಿಸಿ ಸಂಘಟನೆ ಮಾಡುವಲ್ಲಿ ಶ್ರಮಿಸುತ್ತಿದ್ದಾರೆ.

ಶುಕ್ರವಾರ ತೆಲಂಗಾಣ ರಾಜ್ಯದ ಓಜೂರ್ ನಗರದ ಬುರುಗಡ್ಡ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ 1300 ವರ್ಷಗಳಷ್ಟು ಪುರಾತನವಾದ ಶ್ರೀಆದಿವರಾಹ ಲಕ್ಷ್ಮೀನರಸಿಂಹ ವೇಣುಗೋಪಾಲ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಸಮಾರಂಭದಲ್ಲಿ ಪೂರ್ಣಾಹುತಿ ಪೂಜೆ ನೆರವೇರಿಸುವ ಮೂಲಕ ಧಾರ್ಮಿಕ ಚಿಂತನೆ ಬೋಧಿಸಿದರು. ಸವಿತಾ ಸಮಾಜದ ಜನರು ಅಸಂಘಟಿತರಾಗಿ ವೃತ್ತಿ ಜೀವನ ನಡೆಸುತ್ತಿದ್ದಾರೆ. ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿ ಸಂಚರಿಸಿ ಸಮುದಾಯದ ಚಟುವಟಿಕೆಗಳಿಗೆ ಚಾಲನೆ ನೀಡಿದ್ದೇವೆ. ಈಗ ತೆಲಂಗಾಣದಲ್ಲಿ ಸಮುದಾಯ ಜಾಗೃತಿ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದರು.

Contact Your\'s Advertisement; 9902492681

ತೆಲಂಗಾಣದಲ್ಲಿ ಈಡಿಗ ಮತ್ತು ಸವಿತಾ (ನಾಯಿಂದ) ಸಮುದಾಯಗಳ ಜನರು ಒಟ್ಟಿಗೆ ಪೂಜಿಸಿಕೊಂಡು ಬರಲಾಗುತ್ತಿರುವ ಪುರಾತನ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಮುಂದಾಗಿದ್ದಾರೆ. ದೇವಸ್ಥಾನ ಅಭಿವೃದ್ಧಿಗೆ ಪೂರ್ಣಾಹುತಿ ಪೂಜೆ ಕೂಡ ಏರ್ಪಡಿಸಿದ್ದಾರೆ. ನಮ್ಮಲ್ಲಿ ಆತ್ಮಚೈತನ್ಯ ನೀಡಬಲ್ಲ ಶಕ್ತಿಹೊಂದಿರುವ ದೇವಸ್ಥಾನಗಳ ನವೀಕರಣ ಬಹಳ ಮುಖ್ಯವಾಗಿದೆ. ಪೂಜೆ, ಹೋಮ, ಭಕ್ತಿಯ ಹರಕೆ, ಧಾರ್ಮಿಕ ಸಂಪ್ರದಾಯಗಳು ಉಳಿಯುವುದು ಇಂದಿನ ಅಗತ್ಯವಾಗಿದೆ.

ತೆಲಂಗಾಣದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಸಂಘಟಿಸುವ ಜತೆಗೆ ಸವಿತಾ ಸಮಾಜದ ಸಂಘಟನೆಗೂ ಹೆಚ್ಚಿನ ಒತ್ತುನೀಡಲಾಗುತ್ತಿದೆ. ದೇಶದ ಯಾವೂದೇ ರಾಜ್ಯದಲ್ಲಿ ಜೀವನ ನಡೆಸುತ್ತಿರುವ ಸವಿತಾ ಸಮಾಜದ ಜನರು ಸಂಘಟಿತರಾಗಬೇಕು ಎಂಬುದು ನಮ್ಮ ಆಶಯವಾಗಿದೆ ಎಂದು ಸವಿತಾನಂದನಾಥ ಸ್ವಾಮೀಜಿ ಮಾಧ್ಯಮಗಳಿಗೆ ಪ್ರತಿಕ್ರೀಯಿಸಿದ್ದಾರೆ. ಚಿತ್ರದುರ್ಗ ಬಂಜಾರಾ ಗುರುಪೀಠದ ಶ್ರೀಸರ್ದಾರ್ ಸೇವಾಲಾಲ ಸ್ವಾಮೀಜಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here