ಸುರಪುರ: ಕಳೆದ ನಾಲ್ಕು ದಿನಗಳ ಹಿಂದೆ ಜಮ್ಮು-ಕಾಶ್ಮೀರದಲ್ಲಿ ಉಗ್ರರೊಂದಿಗಿನ ಕಾಳಗದಲ್ಲಿ ಹುತಾತ್ಮರಾದ ಬೆಂಗಳೂರಿನ ಎಮ್.ವಿ ಪ್ರಾಂಜಲ್ ಸೇರಿ ಐದು ಜನ ಯೋಧರಿಗೆ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಶ್ರದ್ಧಾಂಜಲಿ ಸಭೆ ನಡೆಸಲಾಯಿತು.
ನರೇಶ ಕುಮಾರ ಸೇವಾ ಸಂಸ್ಥೆ ಸಹಭಾಗಿತ್ವದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಹುತಾತ್ಮ ಯೋಧರ ಭಾವಚಿತ್ರಗಳಿಗೆ ಮೇಣದ ಬತ್ತಿ ಬೆಳಗಿ,ಪುಷ್ಪಾರ್ಚನೆ ಮಾಡಿ ನಂತರ ಎರಡು ನಿಮಿಷಗಳ ಮೌಣಾಚರಣೆ ಮಾಡಿ ಆತ್ಮಕ್ಕೆ ಶಾಂತಿ ಕೋರಿ ಶ್ರದ್ಧಾಂಜಲಿ ಅರ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು,ಜಮ್ಮು ಕಾಶ್ಮೀರದಲ್ಲಿ ಉಗ್ರರು ಸದಾಕಾಲ ಸಂಚು ನಡೆಸುತ್ತಿದ್ದಾರೆ.ಕೇಂದ್ರ ಸರಕಾರ ನರೇಂದ್ರ ಮೋದಿಯವರು ಉಗ್ರರ ಸೆದೆಬಡಿಯಲು ವಿಶೇಷ ಕಾನೂನುಗಳನ್ನು ರೂಪಿಸಿ ಉಗ್ರರ ಸಂಹಾರ ಮಾಡಬೇಕು ಎಂದು ಆಗ್ರಹಿಸಿದರು.ನಂತರ ಹುತಾತ್ಮ ಯೋಧರ ಪರವಾಗಿ ಘೋಷಣೆಗಳನ್ನು ಕೂಗಿದರು.
ಈ ಸಂದರ್ಭದಲ್ಲಿ ಮುಖಂಡರಾದ ಸಂಸ್ಥೆಯ ಕಾರ್ಯದರ್ಶಿ ಸಚಿನಕುಮಾರ ನಾಯಕ,ಮಲ್ಲು ವಿಷ್ಣು ಸೇನಾ,ಚಂದ್ರು ಪ್ರಧಾನಿ,ಮೌನೇಶ ರಾಖಿ,ವಿನೋದ,ಸಚಿನ ಕುಮಾರ,ಹಣಮಂತ,ರಾಘವೇಂದ್ರ ಭಕ್ರಿ,ನಿಂಗೂ,ಮಂಜುನಾಥ,ಮನೋಜ,ಸಾಯಿರಾಜ,ಪ್ರವೀಣ,ರೋಹನ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.