ಶಹಾಬಾದ: ಶಿಕ್ಷಕರು ಮಕ್ಕಳ ಉಜ್ವಲ ಭವಿಷ್ಯ ರೂಪಿಸುವ ಶಿಲ್ಪಿಗಳು ಎಂದು ಕರೆಯುತ್ತಾರೆ.ಅದನ್ನು ಪ್ರಾಮಾಣಿಕವಾಗಿ ಕೆಲಸ ಮಾಡಿ ತೋರಿಸುವ ಮನೋಭಾವನೆ ಶಿಕ್ಷಕರಲ್ಲಿ ಬರಬೇಕಾಗಿದೆ ಎಂದು ಯಾದಗಿರಿ ಕಲ್ಯಾಣ ಕರ್ನಾಟಕ ಶಿಕ್ಷಕರ ಹಾಗೂ ಪದವೀಧರ ಕಲ್ಯಾಣಭಿವೃದ್ಧಿ ಸಂಘದ ಅಧ್ಯಕ್ಷ ಹಾಗೂ ಕಲಬುರಗಿ-ಯಾದಗಿರಿ ಡಿಸಿಸಿ ಬ್ಯಾಂಕ್‍ನ ಉಪಾಧ್ಯಕ್ಷರಾದ ಸುರೇಶ.ಆರ್.ಸಜ್ಜನ್ ಹೇಳಿದರು.
ಅವರು ರವಿವಾರನಗರದ ಸಹರಾ ಸಭಾಂಗಣದಲ್ಲಿ ಸಮಗ್ರ ಕರ್ನಾಟಕ ಉಪಾಧ್ಯಾಯರ ಪ್ರಗತಿಪರ ಸಂಘದ ವತಿಯಿಂದ ಮಕ್ಕಳ ದಿನಾಚರಣೆ ಅಂಗವಾಗಿ ಆಯೋಜಿಸಲಾದ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ಪ್ರಧಾನ ಸಮಾರಭವನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳಿಗೆ ಶಿಕ್ಷಕರು ಏನು ಹೇಳಿದರೂ ಅದು ವೇದವಾಕ್ಯ. ಅಪ್ಪ- ಅಮ್ಮನಿಗಿಂತ ಹೆಚ್ಚು ನಂಬಿಕೆ, ವಿಶ್ವಾಸ ಶಿಕ್ಷಕರ ಮೇಲೆ ಇರುತ್ತೆ. ಜೊತೆಗೆ ಮಕ್ಕಳು ಶಿಕ್ಷಕರನ್ನು ಎಷ್ಟರ ಮಟ್ಟಿಗೆ ಅನುಸರಿಸುತ್ತಾರೆ ಎಂದರೆ ಶಿಕ್ಷಕರ ಗುಣ, ಹಾವ- ಭಾವ, ಉಡುಗೆ-ತೊಡುಗೆ, ವೃತ್ತಿ ನಿμÉ್ಠ, ಸಮಯ ಪಾಲನೆ ಎಲ್ಲವನ್ನು ತಮಗರಿವಿಲ್ಲದೆ ತಮ್ಮದಾಗಿಸಿಕೊಳ್ಳುತ್ತಾರೆ. ಹಾಗಾಗಿ ಶಿಕ್ಷಕರು ಪ್ರತೀ ವಿಷಯದಲ್ಲಿಯೂ ಬಹಳ ಜಾಗರೂಕರಾಗಿರಬೇಕು. ಮಕ್ಕಳಿಗೆ ಋಣಾತ್ಮಕ ಸಂದೇಶ ರವಾನೆಯಾಗದಂತೆ ನೋಡಿಕೊಳ್ಳಬೇಕು ಎಂದರು.
ಚಿತ್ತಾಪೂರ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ಧವೀರಯ್ಯ ರುದ್ನೂರ್ ಮಾತನಾಡಿ,ಶಿಕ್ಷಕರು ವಿದ್ಯಾರ್ಥಿಗಳಿಗೆ ಉತ್ತಮ ಬೋಧನೆ ಮತ್ತು ಶಿಸ್ತಿನ ಜೊತೆ ಜೊತೆಗೆ ಆರೋಗ್ಯಕರ ಸಮಾಜದ ಸೃಷ್ಟಿಗಾಗಿ ಸಾಮಾಜಿಕ ಜವಾಬ್ದಾರಿ ಮತ್ತು ಮಾನವೀಯ ಮೌಲ್ಯಗಳನ್ನು ಬಿತ್ತಬೇಕು.ಕಾರಣ ವಿದ್ಯಾರ್ಥಿಗಳಿದ್ದರೇ ಮಾತ್ರ ಶಾಲೆ.ಶಾಲೆ ಇದ್ದರೇ ಮಾತ್ರ ನಾವು ಎಂಬುದು ಮನಗಾಣಬೇಕು. ಆದ್ದರಿಂದ ವಿದ್ಯಾರ್ಥಿಗಳ ಉಜ್ವಲ ಭವಿಷವನ್ನು ರೂಪಿಸುವಲ್ಲಿ ಶಿಕ್ಷಕರು ಮನಸಾಪೂರ್ವಕವಾಗಿ ಕಾರ್ಯನಿರ್ವಹಿಸಬೇಕು.ಮಕ್ಕಳ ದಿನಾಚರಣೆ ಅಂಗವಾಗಿ ಇಂತಹ ಅದ್ದೂರಿ ಕಾರ್ಯಕ್ರಮ ಮಾಡಿರುವ ಅತೀವ ಸಂತೋಷವಾಗಿದೆ ಎಂದು ಪ್ರಶಂಶಿಸಿದರು.
ಸ್ಕೂಪ್ಸ್ ತಾಲೂಕಾಧ್ಯಕ್ಷೆ ವಿಜಯಲಕ್ಷ್ಮಿ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.ಕಲಬುರಗಿ ಸ್ಕೂಪ್ಸ್ ಜಿಲ್ಲಾಧ್ಯಕ್ಷ ಸಾವಿತ್ರಿ.ಎಸ್.ಪಾಟೀಲ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ರಾಜಶೇಖರ ಗೋನಾಯಕ, ಕ.ರಾ.ಸ,ನೌ.ಸಂಘದ ತಾಲೂಕಾಧ್ಯಕ್ಷ ಈರಣ್ಣ ಕೆಂಭಾವಿ, ಕ.ರಾ.ಪ್ರೌ. ಶಾ.ಗ್ರೇಡ್-1ದೈ.ಶಿ.ಶಿ.ಸಂ ಉಪಾಧ್ಯಕ್ಷ ಸತ್ತಯ್ಯ ಗುತ್ತೆದಾರ,ಅನುದಾನಿತ ಶಾ.ಶಿ.ಶಿ ಸಂಘದ ಅಧ್ಯಕ್ಷ ಪ್ರವೀಣ ಹೇರೂರ್, ಕ.ಸಾ.ಫು.ಶಿ ಸಂಘದ ತಾಲೂಕಾಧ್ಯಕ್ಷೆ ಕಲಾವತಿ.ಎನ್.ನೆಲೋಗಿ ಸೇರಿದಂತೆ ಅನೇಕರು ವೇದಿಕೆಯ ಮೇಲಿದ್ದರು.
ಇದೇ ಸಂದರ್ಭದಲ್ಲಿ ಪ್ರಾಥಮಿಕ,ಪ್ರೌಢಶಾಲೆ, ಪದವಿ ಪೂರ್ವ, ಪದವಿ ವಿಭಾಗದಲ್ಲಿ ಆದರ್ಶ ಉಪಾಧ್ಯರಿಗೆ ಮತ್ತು ಕಳೆದ ವರ್ಷ ಎಸ್.ಎಸ್.ಎಲ್.ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಉತ್ತಮ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಅಂಬಿಕಾ ಹಂಗರಗಿ ಹಾಗೂ ಸುಮಂಗಲಾ ನಿರೂಪಿಸಿದರು, ಜಯಶ್ರೀ ಸ್ವಾಗತಿಸಿದರು, ಸುಮಂಗಲಾ ವಂದಿಸಿದರು.