ಕನ್ನಡ ನಾಡು-ನುಡಿಗೆ ಕಾರಂತರ ಕೊಡುಗೆ ಅನನ್ಯ

0
33

ಶಹಾಬಾದ: ಕಾದಂಬರಿಕಾರ, ಪರಿಸರವಾದಿ, ಪ್ರಗತಿಶೀಲ ಚಿಂತಕ, ಯಕ್ಷಗಾನ ತಜ್ಞ, ಸ್ವಾತಂತ್ರ್ಯ ಹೋರಾಟಗಾರ, ಚಿತ್ರ ನಿರ್ದೇಶಕ ಹೀಗೆ ಹತ್ತು ಹಲವು ಕ್ಷೇತ್ರಗಳ ಮೂಲಕ ಜ್ಞಾನಪೀಠ ಪ್ರಶಸ್ತಿ ಪುರಷ್ಕøತ ಮೇರು ಸಾಹಿತಿ ಡಾ.ಕೆ.ಶಿವರಾಮ ಕಾರಂತ ಅವರು ಕನ್ನಡ ನಾಡು-ನುಡಿಗೆ ಅನನ್ಯವಾದಕೊಡುಗೆಯನ್ನು ನೀಡಿದ್ದಾರೆ ಎಂದು ಗುವಿವಿ ವಿಶ್ರಾಂತ ಪ್ರಾಧ್ಯಾಪಕ, ಸಾಹಿತಿ ಡಾ.ವಾಸುದೇವ ಸೇಡಂ ಎಚ್. ಹೇಳಿದರು.

ಅವರು ಸಮೀಪದ ನಂದೂರ(ಕೆ)ಯ ಸರ್ಕಾರಿ ಪ್ರೌಢಶಾಲೆಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗುತ್ತಿರುವ ಸುವರ್ಣ ಕರ್ನಾಟಕ ರಾಜ್ಯೋತ್ಸವ ಸರಣಿ ಕಾರ್ಯಕ್ರಮ-8 ರಲ್ಲಿ ಮಂಗಳವಾರ ಜರುಗಿದ ‘ಕನ್ನಡ ನಾಡು-ನುಡಿಗೆ ಡಾ.ಶಿವರಾಮ ಕಾರಂತರ ಕೊಡುಗೆ’ ಎಂಬ ಉಪನ್ಯಾಸವನ್ನು ಉದ್ಘಾಟಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಕಾರಂತರು ‘ಮೂಕಜ್ಜಿಯ ಕನಸುಗಳು’, ‘ಮರಳಿ ಮಣ್ಣಿಗೆ’ ಎಂಬ ಮೇರು ಕೃತಿಗಳು, 47 ಕಾದಂಬರಿಗಳು ಒಳಗೊಂಡಂತೆ ಒಟ್ಟು 417 ಗ್ರಂಥಗಳನ್ನು ರಚಿಸಿದ್ದಾರೆ. ತಮ್ಮ ಕಾದಂಬರಿಯಲ್ಲಿ ಸಮಾಜದ ಬಗ್ಗೆ ತಮ್ಮ ಕಳಕಳಿಯನ್ನು ಎತ್ತಿ ತೋರಿಸಿದ್ದಾರೆ. ಎಲ್ಲಾ ಜನರು ಓದುವ, ತಿಳಿಯುವ ಹಾಗೆ ಸರಳವಾದ ಭಾಷೆಯಲ್ಲಿ ಸಾಹಿತ್ಯ ರಚಿಸಿದ್ದು ಅವರ ವೈಶಿಷ್ಟ್ಯತೆಯಾಗಿದೆ ಎಂದರು.

ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡಿ, ಪ್ರಸಿದ್ದ ಇತಿಹಾಸಕಾರರಾದ ರಾಮಚಂದ್ರ ಗುಹಾ ಅವರು ಹೇಳಿರುವಂತೆ, “ಸ್ವಾತಂತ್ರೋತ್ತರ ಭಾರತದ ರವೀಂದ್ರನಾಥ ಟ್ಯಾಗೋರ” ಎಂದು ಶಿವರಾಮ ಕಾರಂತರನ್ನು ವರ್ಣಿಸಿದ್ದು, ಕಾರಂತರ ಮೇರು ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿದೆ. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕøತಿ ಜಗತ್ತಿನ ಶ್ರೀಮಂತಿಕೆಯಲ್ಲಿ ಒಂದಾಗಲು ಶಿವರಾಮ ಕಾರಂತರ ಕೊಡುಗೆ ಅನನ್ಯವಾಗಿದೆ.

ಕಾರಂತರಿಗೆ ‘ಕಡಲ ತೀರದ ಭಾರ್ಗವ’ ಎಂಬ ಬಿರುದಾಂಕಿತವಿತ್ತು. ಬಾಲ್ಯದಿಂದಲೇ ದೇಶ ಸೇವೆ ಮಾಡಬೇಕು, ಸಮಾಜದ ಬಗ್ಗೆ ಸದಾ ಕಳಕಳಿ ತುಡಿಯುತ್ತಿತ್ತು. ಗಾಂಧಿಜೀಯವರ ಪ್ರಭಾವಕ್ಕೆ ಒಳಗಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದರು. ದೇಶ ಸೇವೆಯ ಜೊತೆಯಲ್ಲಿ ಸಮಾಜಕ್ಕೆ ಬಹು ಉಪಯುಕ್ತವಾದ ಹಾಗೂ ಮೌಲಿಕವಾದ ಸಾಹಿತ್ಯ ಕೃಷಿ ಮಾಡಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಕಲಬುರಗಿ ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗಪ್ಪ ಬಿರಾದಾರ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಪತ್ರಿಕಾ ಕಾರ್ಯದರ್ಶಿ ದೇವೇಂದ್ರಪ್ಪ ಗಣಮುಖಿ, ಶಾಲೆಯ ಮುಖ್ಯ ಶಿಕ್ಷಕ ಹವಳಪ್ಪ ಬಿ.ಜಾನೆ, ಶಿಕ್ಷಕರಾದ ಬನಶಂಕರಿ ಎಂ.ಎಸ್., ಸಂತೋಷಕುಮಾರ ಕುಲಕರ್ಣಿ, ಪದ್ಮಾವತಿ, ಮಹಾನಂದ, ಪುಷ್ಪಾವತಿ, ಸಿ.ಎಸ್.ಬಬಣಸೂರ್, ಶೃಂಗಾರಲೀಣಿ, ನುಸ್ರತ್ ಜಹಾನ್, ಸುನೀಲಕುಮಾರ ಬಿ.ಬಿ, ಪೂರ್ಣಿಮಾ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here