ವಸತಿ ನಿಲಯ ವಾರ್ಡನ್ ವಿದ್ಯಾರ್ಥಿಗಳೊಂದಿಗೆ ಅನುಚಿತ ವರ್ತನೆ: ಸೂಕ್ತ ಕ್ರಮಕ್ಕೆ ಕೆ.ವಿ.ಎಸ್ ಅಗ್ರಹ

0
141

ಕಲಬುರಗಿ: ನಗರದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೆಟ್ರಿಕ್ ನಂತರ ವೃತ್ತಿಪರ ಬಾಲಕರ ವಸತಿ ನಿಲಯದ ಹಾಸ್ಟಲ್ ವಾರ್ಡನ್ ವಿದ್ಯಾರ್ಥಿಗಳೊಂದಿಗೆ ಅನುಚಿತ ವರ್ತನೆ ವಿರೋಧಿಸಿ ಕರ್ನಾಟಕ ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಕಲ್ಯಾಣ ನಗರದ ವಸತಿ ನಿಲಯದ ಹಾಸ್ಟಲ್ ವಾರ್ಡನ್ ವಿದ್ಯಾರ್ಥಿಗಳಿಗೆ ಮನಸೋ ಇಚ್ಛೆ ಬಂದಂತೆ ಕೆಟ್ಟ ಪದಗಳಿಂದ ನಿಂದಿಸಿ ಕಾಲೇಜಿನಿಂದ ತಡವಾಗಿ ಬಂದವರಿಗೆ ಊಟ ಕೊಡದಂತೆ ಅಡುಗೆ ಸಿಬ್ಬಂದಿ ಅವರಿಗೆ ಆದೇಶಿಸಿದ್ದಾರೆ. ಇವರ ಆದೇಶದಂತೆ ತಡವಾಗಿ ಬಂದ 15  ವಿದ್ಯಾರ್ಥಿಗಳಿಗೆ ಊಟ ಕೊಡದಿದ್ದಕ್ಕೆ ತಾಲೂಕ ವಿಸ್ತೀರ್ಣ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಿದ ನಂತರ ಊಟದ ವ್ಯವಸ್ಥೆ ಕಲ್ಪಿಸಲಾಯಿತು.

Contact Your\'s Advertisement; 9902492681

ಎಲ್ಲಾ ಅಧಿಕಾರಿಗಳು ನನಗೆ ಗೊತ್ತು ಯಾರು ಏನು ಮಾಡಲಾಗುವುದಿಲ್ಲ ನೀವು ಏನಾದರೂ ಮಾಡಿದರೆ ನನಗೆ ಪರಿಚಯ ಇರುವ ಪೊಲೀಸರಿಂದ ನಿಮ್ಮ ಮೇಲೆ ಕೇಸು ದಾಖಲೆ ಮಾಡಿ ನಿಮ್ಮ ಭವಿಷ್ಯವನ್ನು ಹಾಳು ಮಾಡುತ್ತೇನೆ ಎಂದು ಬೆದರಿಕೆ ಒಡ್ಡಿ ವಿದ್ಯಾರ್ಥಿಗಳನ್ನು ಬೆದರಿಸುತ್ತಾರೆ ಇದನ್ನೆಲ್ಲಾ ಕೇಳಿದ ಕೆಲವು ವಿದ್ಯಾರ್ಥಿಗಳು ವಸತಿ ನಿಲಯವನ್ನು ಬಿಟ್ಟು ಹೊರಗಡೆ ರೂಮ್ ಬಾಡಿಗೆ ಹಿಡಿದುಕೊಂಡಿದು, ಇಂಥ ದುರ್ನಡತೆ ಹೊಂದಿರುವ ವಾರ್ಡನ್ ಅವರನ್ನು ಕೂಡಲೇ ವರ್ಗಾವಣೆ ಮಾಡಿ  ನಮ್ಮ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.

ಪ್ರತಿಭಟನಾಸ್ಥಳಕ್ಕೆಬೇಕೆಂದಿದ್ದ_ಅಧಿಕಾರಿಗೆ ವಿದ್ಯಾರ್ಥಿಗಳ ಪ್ರತಿಭಟನೆ ಸುದ್ದಿ ತಿಳಿಯುತ್ತಿದ್ದಂತೆ ತಾಲೂಕ ವಿಸ್ತರಣ ಅಧಿಕಾರಿಗಳು ಹಾಗೂ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮ್ಯಾನೇಜರ್ ಕೂಡಲೇ ಸ್ಥಳಕ್ಕೆ ಆಗಮಿಸಿ ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸಿ ವಿದ್ಯಾರ್ಥಿಗಳ ಜೊತೆ ಅಸಭ್ಯವಾಗಿ ಮಾತನಾಡಿದ ವಾರ್ಡನ್ ಅವರನ್ನು ಕೂಡಲೇ ಅಲ್ಲಿಂದ ಬೇರೆ ಕಡೆ ವರ್ಗಾವಣೆ ಮಾಡಿ ಆದೇಶಿಸಿದರು.

ಆ ಸ್ಥಳಕ್ಕೆ ಆನಂದ ಅವರನ್ನು ಚಾರ್ಜ್ ವಹಿಸಿಕೊಂಡರು ನಂತರ  ಸಂಘಟನೆಯ ಮುಖಂಡರ ಹಾಗೂ ತಾಲ್ಲೂಕು ವಿಸ್ತರಣಾಧಿಕಾರಿಗಳು ಸೇರಿ ವಸತಿ ನಿಲಯದ ವಿದ್ಯಾರ್ಥಿಗಳ ಜೊತೆ ಸೇರಿ ಊಟ ಮಾಡಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಜಿಲ್ಲಾ ಸಂಚಾಲಕ ರಾಜೇಂದ್ರ ರಾಜವಾಳ ಜಿಲ್ಲಾ ಮುಖಂಡರಾದ ಶರಣು ಕೋಲಿ, ಮಂಜುನಾಥ್ ಸೇರಿದಂತೆ ವಸತಿ ನಿಲಯದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here