3 ದಿನ ಅಂತರಾಷ್ಟ್ರೀಯ ಸಮ್ಮೇಳನ: ಆತ್ಮ ಅರಿವಿನಿಂದ ಮಾಡಿದ ಕಾಯಕ, ದಾಸೋಹಕ್ಕೆ ಪೂರಕ: ಡಾ ಅಪ್ಪಾಜಿ

0
74

ಕಲಬುರಗಿ: ಆತ್ಮ ಅರಿವಿನಿಂದ ಮಾಡಿದ ಕಾಯಕ ದಾಸೋಹಕ್ಕೆ ಪೂರಕವಾಗುತ್ತದೆ. ಯಾರ ಕಾಯಕವೂ ಆತ್ಮಕ್ಕೆ ಪೂರಕವಾಗಿರುತ್ತದೆಯೋ ಅವರೇ ಮಹಾತ್ಮರಾಗುತ್ತಾರೆ ಎಂದು ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿಯಾದ ಪರಮ ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಎಂದು ತಿಳಿಸಿದರು.

ಶರಣಬಸವ ಶತಮಾನೋತ್ಸವ ಸಭಾಂಗಣದಲ್ಲಿ ಶುಕ್ರವಾರ ನಡೆದ ’ವಿಜ್ಞಾನ, ಎಂಜಿನೀಯರಿಂಗ್, ಮಾನವೀಯ ಮತ್ತು ಸಾಮಾಜಿಕ ವಿಜ್ಞಾನದಲ್ಲಿನ ಇತ್ತೀಚಿನ ಪ್ರವೃತ್ತಿಗಳು’ ಎಂಬ ವಿಷಯಗಳ ಬಗ್ಗೆ ಮೂರು ದಿನಗಳ ಬಹು ಶಿಸ್ತಿನ ಅಂತರಾಷ್ಟ್ರೀಯ ಸಮ್ಮೇಳನದ ಕಾರ್ಯಕ್ರಮದ ಉದ್ಘಾಟಕರಾಗಿ ಮಾತನಾಡಿದ ಅವರು, ಸಾಮಾಜಿಕ ಮತ್ತು ವೈಜ್ಞಾನಿಕ ಕ್ಷೇತ್ರದಲ್ಲಿಯ ಸಂಪನ್ಮೂಲ ವ್ಯಕ್ತಿಗಳ ಹಾಗೂ ವಿದ್ವಾಂಸರ ವಿಚಾರಗಳು ವಿದ್ಯಾರ್ಥಿಗಳಿಗೆ ಮತ್ತು ಸಂಶೋಧಕರಿಗೆ ಅರ್ಥೈಸಿಕೊಳ್ಳಲು ಈ ಸಮ್ಮೇಳನವು ಸಹಕಾರಿಯಾಗಿದೆ. ಈ ಸಮ್ಮೇಳನದ ಮೂಲಕ ಹಲವಾರು ಕ್ಷೇತ್ರದ ವಿಷಯಗಳ ಬಗ್ಗೆ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದು ಎಂದರು.

Contact Your\'s Advertisement; 9902492681

ಮುಖ್ಯ ಭಾಷಣಕಾರರಾಗಿ ಆಗಮಿಸಿದ ಅಮೇರಿಕಾದ ಬಸವ ಡಿವೈನ್ ಕೇಂದ್ರದ ರೂಪಕಾ ಅಕ್ಕಾ ಮಾತನಾಡಿ, ೧೨ನೇ ಶತಮಾನದ ಸಾಮಾಜಿಕ ಸುಧಾರಕರಾದ ಮಹಾತ್ಮ ಬಸವೇಶ್ವರರು ಅನುಸರಿಸಿದ ಕಾಯಕ ಮತ್ತು ದಾಸೊಹದ ಪರಿಕಲ್ಪನೆಯ ಅಂಶಗಳನ್ನು, ೧೯ನೇ ಶತಮಾನದಲ್ಲಿ ಶರಣಬಸವೇಶ್ವರರು ಅದನ್ನು ಚೈತನ್ಯಪೂರ್ವಕವಾಗಿ ಬೋಧಿಸಿದ್ದಾರೆ ಮತ್ತು ಅನುಸರಿಸಿದ್ದಾರೆ. ಆ ಸಿದ್ಧಾಂತವನ್ನೇ ಇಂದು ನಾವು ಪರಮ ಪೂಜ್ಯ ಅಪ್ಪಾಜಿಯವರ ಬದುಕಿನ ಮೂಲಕ ತಿಳಿದುಕೊಳ್ಳಬಹುದಾಗಿದೆ. ಬಸವೇಶ್ವರರ ಹಾಗೂ ಶರಣಬಸವೇಶ್ವರರ ತತ್ವಗಳನ್ನು ಅನುಸರಿಸುವರನ್ನು ನಾವೂ ವಿದೇಶದಲ್ಲಿಯೂ ಕಾಣುತ್ತೇವೆ ಎಂದರು.

ಕಾಯಕ ಮತ್ತು ದಾಸೋಹದ ಬಗ್ಗೆ ಡಾ. ಅಪ್ಪಾಜಿಯವರು ದಾಸೋಹ ಸೂತ್ರದಲ್ಲಿ ಚೈತನ್ಯಪೂರ್ವಕವಾಗಿ ವಿವರಿಸಿದ್ದಾರೆ. ದಾಸೋಹ ಮತ್ತು ಕಾಯಕಾ ತತ್ವಗಳನ್ನು ಅವರ ನೈಜ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ. ಮಹಾತ್ಮ ಬಸವೇಶ್ವರರು ಕಾಯಕ ಮತ್ತು ದಾಸೋಹ ತತ್ವಗಳನ್ನು ಅತಿ ಶ್ರೇಷ್ಠಮಟ್ಟದಲ್ಲಿ ಪ್ರಸ್ತಾಪಿಸಿದ್ದನ್ನು, ಅಪ್ಪಾ ಅವರ ಸೂತ್ರದ ಅಂತರಂಗದಲ್ಲಿಯೂ ಕಾಣುತ್ತೇವೆ. ಕಾಯಕ ದಾಸೊಹ ಪರಿಕಲ್ಪನೆ ಮತ್ತು ಸಂದೇಶವು ಅದ್ಭುತವಾಗಿದೆ ಎಂದರು.

ಮಹಾತ್ಮ ಬಸವೇಶ್ವರರು ಬೋಧಿಸಿದ ದಾಸೋಹ ತತ್ವಶಾಸ್ತ್ರವನ್ನು ಇಂದಿನ ಧಾರ್ಮಿಕ ತಜ್ಞರು ತಪ್ಪಾಗಿ ಅರ್ಥೈಸಿಕೊಳ್ಳುತ್ತಿದ್ದಾರೆ. ಕೇವಲ ಆಹಾರ ನೀಡುವುದೇ ದಾಸೋಹವಲ್ಲ. ಕಾಯಕ ಮತ್ತು ದಾಸೋಹದ ಅರ್ಥ ವಿಭಿನ್ನವಾಗಿದೆ. ಶ್ರದ್ಧೇ, ನಿಷ್ಠೆ, ಪರಿಶುದ್ಧ ಭಾವದಿಂದ ಮಾಡಿಕ ಕೆಲಸವೆಲ್ಲವು ಕಾಯಕವಾಗುತ್ತದೆ ಎಂಬ ಅಂಶವನ್ನು ಪೂಜ್ಯ ಅಪ್ಪಾರವರು ತಮ್ಮ ದಾಸೋಹ ಸೂತ್ರದಲ್ಲಿ ಮಹತ್ವದಾಗಿ ಬಿಂಬಿಸಿದ್ದಾರೆ. ಬಾಳಿನ ಕತ್ತಲೆಯಲ್ಲಿದ್ದವರಿಗೆ ದಾಸೋಹವು ಬೆಳಕು ಚೆಲ್ಲುತ್ತದೆ. ಗುರುವಿನಿಂದ ಕರುಣೆ, ಕಾರುಣ್ಯದಿಂದ ಲಿಂಗ, ಲಿಂಗದಿಂದ ಜಂಗಮ ಮತ್ತು ಅಂತೀಮವಾಗಿ ಪ್ರಸಾದವನ್ನು ಪಡೆಯಲು ಸಹಕಾರಿಯಾಗುವದೇ ದಾಸೋಹ ಧರ್ಮ ಎಂದು ತಿಳಿಸಿದರು.
ಪ್ರತಿಯೊಬ್ಬರು ದಾಸೋಹ ಮತ್ತು ಕಾಯಕದ ಪರಿಕಲ್ಪನೆಯನ್ನು ಅಳವಡಿಸಿಕೊಂಡಾಗ ಮಾತ್ರ ಅವರವರ ವೃತ್ತಿಜೀವನದಲ್ಲಿ ಆತ್ಮ ವಿಶ್ವಾಸ ಬಲಗೊಳ್ಳುವದು. ಕಾಯಕದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ. ೧೨ನೇ ಶತಮಾನದ ಶರಣರು ಬರೆದಿರುವ ವಚನಗಳ ಸಂದೇಶವನ್ನು ಪ್ರಸ್ತುತ ಶತಮಾನದ ಘಟನೆಗಳ ಜೊತೆ ಹೆಣೆದಿದ್ದಾರೆ ಎಂದು ತಿಳಿಸಿದರು.

ಸಂಸದ ಡಾ. ಉಮೇಶ ಜಾಧವ ಮಾತನಾಡಿ, ವಿಶ್ವದ ಶ್ರೇಷ್ಠ ಮಟ್ಟದ ೧೦೦ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ, ಶರಣಬಸವ ವಿಶ್ವವಿದ್ಯಾಲಯ ತನ್ನ ಸ್ಥಾನವನ್ನು ಪಡೆದುಕೊಳ್ಳುತ್ತದೆ. ಈ ಸಂಸ್ಥೆ ಶೈಕ್ಷಣಿಕವಾಗಿ ಆರೋಗ್ಯವಂತ ಸದೃಢವಾದ ಸಂಸ್ಥೆಯಾಗಿದೆ. ಶರಣಬಸವ ವಿಶ್ವವಿದ್ಯಾಲಯ ವೈದ್ಯಕೀಯ ಶಿಕ್ಷಣ ಆರಂಭಿಸಿದರೆ, ಎಲ್ಲ ರೀತಿಯ ಸಹಕಾರ ನೀಡವುದಾಗಿ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿವಿ ಕುಲಪತಿ ಡಾ. ನಿರಂಜನ ನಿಷ್ಠಿ ಮಾತನಾಡಿ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮಾಡಿದ ಪ್ರಗತಿಗೆ ಸರಿಹೊಂದುವಂತೆ ಶೈಕ್ಷಣಿಕ ಕೌಶಲ್ಯಗಳನ್ನು ನವೀಕರಿಸುವ ಅವಶ್ಯವಿದೆ. ಕಾಯಕ ಮತ್ತು ದಾಸೋಹ ತತ್ವ ಚಿಂತನೆಗಳು ಭಾರತದೇಶದಲ್ಲಿ ಅಲ್ಲದೇ ವಿದೇಶಗಳಲ್ಲಿಯೂ ಶಿಕ್ಷಣ ತಜ್ಞರ ಗಮನಸೆಳೆದಿವೆ. ಈ ಎರಡು ಅಂಶಗಳ ಆಧಾರದ ಮೇಲೆ ವಿದೇಶ ಶಿಕ್ಷಣ ತಜ್ಞರು ಹೆಚ್ಚಿನ ಅಧ್ಯಯನ ಕೈಗೊಳ್ಳಲು ವಿದೇಶದಿಂದ ಭಾರತಕ್ಕೆ ಗುಂಪೂಗಾರಿಕೆಯಲ್ಲಿ ಬಂದು ಅಧ್ಯಯನ ಮಾಡುವದನ್ನು ಇನ್ನೂ ಸ್ವಲ್ಪ ದಿನದಲ್ಲಿಯೇ ಕಾಣೂತ್ತೇವೆ ಎಂದರು.

ವಿವಿ ಮೌಲ್ಯಮಾಪನ ಕುಲಸಚಿವ ಡಾ. ಲಿಂಗರಾಜ ಶಾಸ್ತ್ರಿ ನಿರೂಪಿಸಿದರು. ವಿವಿ ಕುಲಸಚಿವ ಡಾ. ಅನೀಲ ಕುಮಾರ ಬಿಡವೆ ಸ್ವಾಗತಿಸಿ ಪ್ರಸ್ತಾವಿಕ ಭಾಷಣ ಮಾಡಿದರು. ಡಾ. ನಾಗಬಸವಣ್ಣ ವಂದಿಸಿದರು.
ಶರಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ವಿವಿ ಸಮ ಕುಲಪತಿ ಡಾ. ವಿ.ಡಿ. ಮೈತ್ರಿ ಮತ್ತು ಎನ್.ಎಸ್.ದೇವರಕಲ್, ಕ್ಯಾಲಿರ್ಫೊನಿಯದ ಸೊನಮ್ ರಾಜ್ಯ ವಿಶ್ವವಿದ್ಯಾಲಯದ ಎಲೆಟ್ರಿಕಲ್ ಸೈನ್ಸ್‌ಸದ ಅಧ್ಯಕ್ಷ ಡಾ. ಫರಿದ್ ಫಾರಹ್ಮದ್, ಐರಲ್ಯಾಂಡ್ ರಾಷ್ಟ್ರೀಯ ವಿಶ್ವವಿದ್ಯಾಲಯದ ಡಾ. ಮಾರಟೀನ್ ಸೆರಾನೊ, ಆಯುರ್ವೇದ ತಜ್ಞರು ಹಾಗೂ ಕನ್ನಡ ಪುಸ್ತಕ ಪ್ರಾಧೀಕಾರದ ಅಧ್ಯಕ್ಷರಾದ ಡಾ.ವಸುಂದರಾ ಭೂಪತಿ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here