ಕಲಬುರಗಿ: ತಾಂತ್ರಿಕೇತರ ವೃಂದದ ಸಮಾಜ ಕಲ್ಯಾಣ ಇಲಾಖೆಯಲ್ಲಿನ ವಿದ್ಯಾಥಿ ನಿಲಯದ ವಾರ್ಡ್‍ನಗಳ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಈ ಕುರಿತು ಸರಕಾರ ಕೂಡಲೇ ತನಿಖೆ ಕೈಗೊಂಡು ನೇಮಕಾತಿ ಪಟ್ಟಿಯನ್ನು ತಡೆಹಿಡಿಯಬೇಕೆಂದು ಕಾ. ಮಾರುತಿ ಮಾನಪಡೆಯವರ ಅಬಿಮಾನಿಗಳ ಸೇವಾ ಸಂಘ ಹಾಗೂ ಕರ್ನಾಟಕ ರಾಜ್ಯ ರೈತ-ಕಾರ್ಮಿಕ ಯುವಜನ ಸೇವಾ ಸಂಘದ ಸುನೀಲ ಮಾನಪಡೆಯವರು ಆಗ್ರಹಿಸಿದರು.
ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಕರ್ನಾಟಕ ಲೋಕಸೇವಾ ಆಯೋಗ ಬೆಂಗಳೂರು ಅದಿಸೂಚನೆ ಪಿಎಸ್‍ಸಿ 14 ಆರ್.ಟಿ.(4)ಬಿ-1-2020ಯಂತೆ 140 ವಾರ್ಡನ್‍ಗಳ ನೇಮಕಾತಿಗೆ ಉಳಿಕೆ ಮೂಲವೃಂದದ 80 ಮತ್ತು ಹೈದ್ರಾಬಾದ ಕರ್ನಾಟಕ ವೃಂದದ 60 ಒಟ್ಟು 140 ಹುದ್ದಗಳಿಗೆ ಅದಿಸೂಚನೆ ಹೊರಡಿಸಿತು. ಅಂತೆಯೇ 2020ರಲ್ಲಿ ಪರೀಕ್ಷೆ ನಡೆದು 2023ರ ಆ. 11ರಂದು ಅಂತಿಮಪಟ್ಟಿ ಬಿಡುಗಡೆ ಮಾಡಿದೆ, ಆದರೆ ಈ ನೇಮಕಾತಿ ಪಟ್ಟಿಯಲ್ಲಿ ಪಿಎಸ್‍ಐ ನೇಮಕಾತಿಯಂತೆ ಅಭ್ಯರ್ಥಿಗಳ ನೊಂದಣಿ ಸಂಖ್ಯೆ ಗಮನಿಸಿದಾಗ ಒಂದೇ ತಾಲೂಕಿನ 17ಕ್ಕೂ ಹೆಚ್ಚು ಅಭ್ಯರ್ಥಿಗಳು ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ನೋಡಿದರೆ ಜೊತೆಗೆ ಇವರೆಲ್ಲರ ನೊಂದಣಿ ಸಂಖ್ಯೆಯಲ್ಲೂ ಸಹ ಅಕ್ಕಪಕ್ಕದಲ್ಲಿಯೇ ಇರುವುದು ಗಮನಿಸಿದರೆ ಇದರಲ್ಲಿ ಅಕ್ರಮದ ವಾಸನೇ ನೇರವಾಗಿ ಕಂಡು ಬರುತ್ತಿದೆ ಎಂದು ಆರೋಪಿಸಿದ್ದಾರೆ.
ಉಳಿಕೆ ಮೂಲ ವೃಂದದ ಹುದ್ದೆಗಳಿಗೆ ಸಾಮಾನ್ಯವಾಗಿ ಅದೇ ಭಾಗದ ಅಭ್ಯರ್ಥಿಗಳು ಆಯ್ಕೆಯಾಗುವುದು ಸಹಜ. ಆದರೆ ಪ್ರಸ್ತುತ ವಾರ್ಡ್‍ನ್ ಆಯ್ಕೆಪಟ್ಟಿ ಅವಲೋಕಿಸಿದಾಗ ಉಳಿಕೆ ಮೂಲ ವೃಂದ್ರ 80 ಹುದ್ದೆಗಳ ಪಟ್ಟಿಯಲ್ಲಿ ಶೇ. 50ರಷ್ಟು ಹೈದ್ರಾಬಾದ ಕರ್ನಾಟಕದ್ದು ಅದರಲ್ಲೂ ಹೆಚ್ಚಿನವರು ಅ¥sುಜಲಪೂರ ತಾಲೂಕಿನವರಾಗಿದ್ದು, ಈ ಅಭ್ಯರ್ಥಿಗಳ ನೊಂದಣಿ ಸಂಖ್ಯೆ ಗಮನಿಸಿದರೆ ಇವರೆಲ್ಲರೂ ಒಂದೇ ಪರೀಕ್ಷಾ ಕೆಂದ್ರದಲ್ಲಿ ಪರೀಕ್ಷೆ ಬರೆದಿರುವುದು ಗೊತ್ತಾಗುತ್ತದೆ ಎಂದು ದೂರಿದ್ದಾರೆ.
ಕೂಡಲೇ ಈ ಕುರಿತು ಸಮಗ್ರ ತನಿಖೆಯಾಗಬೇಕು ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಶಾಂತಪ್ಪ ಸಣ್ಣೂರ, ಸೋಮಶೇಖರ ಸಿಂಗೆ, ಸಿದ್ದಲಿಂಗ ಪಾಳಾ, ಅಶೋಕ ಪಾಟೀಲ ಇದ್ದರು.