ಸರಕಾರಿ ಕಚೇರಿಗಳು ವಿಶೇಷಚೇತನ ಸ್ನೇಹಿಯಾಗಿರಲಿ

0
17

ಕಲಬುರಗಿ: ವಿಶ್ವ ಸಂಸ್ಥೆಯ ನಿರ್ಣಯದಂತೆ ಪ್ರತಿ ವರ್ಷ ಡಿಸೆಂಬರ್ 3ರಂದು ವಿಶ್ವ ವಿಶೇಷಚೇತನ‌ ದಿನಾಚರಣೆ ಆಚರಿಸಲಾಗುತ್ತದೆ. ವಿಶೇಷಚೇತನರ ಹಕ್ಕುಗಳ ಸಂರಕ್ಷಣೆಗಾಗಿ ರಾಜ್ಯದಲ್ಲಿ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ-2016 ಜಾರಿಗೊಳಿಸಲಾಗಿದೆ. ಈ ಕೇಂದ್ರ ಕಾಯಿದೆಗೆ ರಾಜ್ಯ ಸರ್ಕಾರವು ರಾಜ್ಯ ನಿಯಮಗಳು- 2019ನ್ನು ರಚಿಸಿದೆ. ಈ ಅವಧಿನಿಯಮಗಳು ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಬೇಕು.

ವಿಶೇಷಚೇತನರ ಸಮಸ್ಯೆಗಳನ್ನು ಅರಿಯುವುದು ಹಾಗೂ ಆತ್ಮ ಗೌರವವನ್ನು ಹೆಚ್ಚಿಸುವ ಜೊತೆಗೆ ಆತ್ಮವಿಶ್ವಾಸ ಬೆಳೆಸುವ ಕಾರ್ಯ ಆಗಬೇಕು. ವಿಶೇಷಚೇತನರ ಜನಗಣತಿ ಆಗಬೇಕಾಗಿದೆ. ವಿವಿಧ ಬಗೆಯ ವಿಶೇಷಚೇತನರಿಗೆ ತಮ್ಮದೇ ಆದ ತೊಂದರೆಗಳು ಇರುವುದರಿಂದ ಕೆಲಸ ಕಾರ್ಯಗಳಿಗಾಗಿ ಸರ್ಕಾರಿ ಕಛೇರಿಗಳಿಗೆ ಅಲೆದಾಡಬೇಕಾಗುತ್ತದೆ.

Contact Your\'s Advertisement; 9902492681

ಜಿಲ್ಲೆಯಲ್ಲಿರುವ ಎಲ್ಲಾ ಇಲಾಖೆಗಳ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕಛೇರಿಗಳು ವಿಶೇಷಚೇತನ ಸ್ನೇಹಿಯಾಗಿರಬೇಕು ಎಂದು ಡಿಸೇಬಲ್ಡ್ ಹೆಲ್ಪಲೈನ್ ಫೌಂಡೆಶನನ ರಾಜ್ಯ ಸಂಯೋಜಕ ಬಸವರಾಜ ಹೆಳವರ ಯಾಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here