ಕನ್ನಡದ ಸಾಂಸ್ಕೃತಿಕ ಮನಸ್ಸು ನಿರ್ಮಾಣದ ಕೆಲಸ ಅಗತ್ಯತೆ ಪ್ರತಿಪಾದಿಸಿದ ಹೊನ್ಕಲ್
ಕಲಬುರಗಿ: ಕನ್ನಡದ ಚಟುವಟಿಕೆ ಸಾಂಸ್ಕೃತಿಕ ಮನಸ್ಸು ನಿರ್ಮಾಣ ಮಾಡುವುದು ಅಗತ್ಯ. ಕವಿ- ಲೇಖಕರು ನಮ್ಮ ಕಾಲಮಾನದ ಸಾಕ್ಷಿ ಪ್ರ ಜ್ಞೆ ಆಗಿದ್ದಾರೆ ಎಂದು ಲೇಖಕ ಸಿದ್ಧರಾಮ ಹೊನ್ಕಲ್ ಅಭಿಪ್ರಾಯಪಟ್ಟರು.
ಕನ್ನಡ ನುಡಿ ಮುತ್ತು ವೇದಿಕೆ ಕರ್ನಾಟಕ ವತಿಯಿಂದ ನಗರದ ಕನ್ನಡ ಭವನದಲ್ಲಿ ಶುಕ್ರವಾರ ಜರುಗಿದ ಪ್ರಥಮ ಸಾಹಿತ್ಯ ಸಮ್ಮೇಳನ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಭ್ರಮ-2023 ರ ಸಮ್ಮೇಳನಾಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕನ್ನಡದ ಬಗ್ಗೆ ಅಭಿಮಾನ ಇರುವುದರ ಜೊತೆಗೆ ಕನ್ನಡದ ಕೈಂಕರ್ಯಕ್ಕೆ ಕೈ ಜೋಡಿಸಬೇಕು ಎಂದರು.
ಜಿಲ್ಲಾಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಸುರೇಶ ಬಡಿಗೇರ, ಮಹೇಶ ಹುಬಳಿ ಮಾತನಾಡಿದರು. ಮೈಂದರ್ಗಿಯ ಮೃತ್ಯುಂಜಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಡಾ. ಶೈಲಜಾ ಬಾಗೇವಾಡಿ ಶರಣರ ಕುರಿತು ಪ್ರಾಸ್ತಾವಿಕ ಮಾತನಾಡಿದರು. ನಂದಿನಿ ಸನಬಾಳ, ಸಂಸ್ಥಾಪಕ ಜಗದೀಶ ಎಸ್. ಕಾಬನೆ ವೇದಿಕೆಯಲ್ಲಿದ್ದರು.
ನಂತರ ನಡೆದ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಕಲಬುರಗಿ ರಂಗಾಯಣ ಮಾಜಿ ನಿರ್ದೇಶಕ ಪ್ರಭಾಕರ ಜೋಶಿ ಆಶಯ ನುಡಿಗಳನ್ನಾಡಿದರು. ಪತ್ರಕರ್ತ ಪ್ರಭುಲಿಂಗ ನಿಲೂರೆ ಅಧ್ಯಕ್ಷತೆ ವಹಿಸಿದ್ದರು. ಪಾರ್ವತಿ ದೇಸಾಯಿ, ಬಸವರಾಜ ಶಿನ್ನೂರ್ ಮುಖ್ಯ ಅತಿಥಿಯಾಗಿದ್ದರು.
101 ಕವಿಗಳ ವಿಶ್ವ ದಾಖಲೆಯ ಕವನ ರಚನೆ ಕಾರ್ಯಕ್ರಮ, ಪ್ರಶಸ್ತಿ ಪ್ರದಾನ ಸಮಾರಂಭ, ಸ್ಥಳೀಯ ಖ್ಯಾತ ಕಲಾವಿದರು, ಕನ್ನಡ ಚಿತ್ರರಂಗದ ಕಲಾವಿದರು ಹಾಗೂ ಝೀ ಕನ್ನಡ ವಾಹಿನಿಯ ಕಲಾವಿದರಿಂದ ರಸಮಂಜರಿ ಮತ್ತು ಸಂಗೀತ ಕಾರ್ಯಕ್ರಮ ಜರುಗಿತು.
ಬಸವಾದಿ ಶರಣರು 12ನೇ ಶತಮಾನದಲ್ಲಿ ಮಾಡಿದ ಕೆಲಸ ಸಣ್ಣದಲ್ಲ. ದೇಹವೇ ದೇಗುಲ ಎಂದು ಹೇಳಿ ಧರ್ಮವನ್ನು ಸಾಮಾಜಿಕರಣ ಮಾಡಿ ಇಷ್ಟಲಿಂಗವನ್ನು ದೇವರನ್ನಾಗಿ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. -ಸಿದ್ಧರಾಮ ಹೊನ್ಕಲ್, ಲೇಖಕರು, ಶಹಾಪುರ.