ಮಹಾರಾಷ್ಟ್ರದ ಔರಂಗಾಬಾದನಲ್ಲಿ ಕರ್ನಾಟಕ ರಾಜ್ಯೋತ್ಸವ

0
81

ಕಲಬುರಗಿ: ಕರ್ನಾಟಕ ಸಂಘದ ವತಿಯಿಂದ ಛತ್ರಪತಿ ಸಂಭಾಜಿನಗರ ಔರಂಗಾಬಾದದ ಗೋವಿಂದಭಾಯಿ ಸರಾಫ್ ಲಲಿತ ಕಲಾ ಅಕಾಡಾಮಿ ನಾಟ್ಯಗ್ರಹದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಮಹಾರಾಷ್ಟ್ರ ರಾಜ್ಯದ ಗ್ರಹ ನಿರ್ಮಾಣ ಸಚಿವರಾದ ಅತುಲ ಸಾವೆ ಕಾರ್ಯಕ್ರಮ ಉದ್ಘಾಟಿಸಿದರು.

ಅವರು ಮಾತನಾಡುತ್ತ ಕನ್ನಡಿಗರ ಹೃದಯ ಬಹಳ ಶ್ರೀಮಂತಿಕೆಯಿಂದ ಕೂಡಿದೆ, ಏಕೆಂದರೆ ಎಲ್ಲರೂ ನಮ್ಮವರು ಎಂಬ ಸಹೋದರತೆಯ ಸಾರ ಜಗತ್ತಿನ ತುಂಬಾ ಹರಡಿ ಉತ್ತಮವಾದ ಸಮಾಜ ನಿರ್ಮಿಸುತ್ತಿದ್ದಾರೆ ಎಂದು ಮಾರ್ಮಿಕ ವಾಗಿ ನುಡಿದರು. ವೇದಿಕೆಯ ಮೇಲೆ ಸಂಘದ ಅಧ್ಯಕ್ಷರಾದ ಎಸ್. ಎಲ್. ರಾಮಲಿಂಗಪ್ಪ, ಉಪಾಧ್ಯಕ್ಷರಾದ ಸುಭಾಷ ಜಿ. ಅಮಾಣೆ, ಕಾರ್ಯದರ್ಶಿ ಕೆ. ಎಂ ಸಿದ್ಧಾವೀರಯ್ಯ, ಸಹ ಕಾರ್ಯದರ್ಶಿ ವಿಮಲಾ ಹಬ್ಬು ಮತ್ತು ಅರುಣ ಗುದಗೆ ಇದ್ದರು.

Contact Your\'s Advertisement; 9902492681

ಜಮ್ಮುವಿನ ರಜೊರಿಯಲ್ಲಿ ಭಯೋತ್ಪಾದಕರ ಗುಂಪನ್ನು ಸದೆ ಬಡಿಯುವಾಗ ಹುತಾತ್ಮರಾದ ವೀರ ಸೇನಾನಿ, ಹೆಮ್ಮೆಯ ಕನ್ನಡಿಗ ಕ್ಯಾಪ್ಟನ್ ಎಂ. ವಿ. ಪ್ರಾಂಜಲ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಕಾರ್ಯಕ್ರಮದಲ್ಲಿ ಕು.ಖುಷಿ ಸಂದೀಪ್, ಕು.ಪೂರ್ವಿ, ಶ್ರೀಮತಿ ಬನಶಂಕರಿ ಹಿರೇಮಠ ಭರತನಾಟ್ಯ ಮಾಡಿದರು. ಸಂಧ್ಯಾ ಅಡಸುಲೆ, ಸುನೀತಾ ಬುಕ್ಕಾ, ಸಂಗೀತಾ ಪಾಟೀಲ, ಅಮೃತಾ ಸ್ವಾಮಿ ಮತ್ತು ಸವಿತಾ ಸ್ವಾಮಿ ಸಮೂಹ ನೃತ್ಯ ಮತ್ತು ಗಾಯನ ಮಾಡಿದರು. ಇದೇ ಸಂದರ್ಭದಲ್ಲಿ ಕರ್ನಾಟಕದ ಖ್ಯಾತ ಹಾಸ್ಯ ಕಲಾವಿದರಾದ ರವಿ ಭಜಂತ್ರಿ, ಹಾಗೂ ಅಜಯ ಸಾರಾಪುರೆ ಇವರಿಂದ ಹಾಸ್ಯ ರಸಮಂಜರಿ ಕಾರ್ಯಕ್ರಮದ ಮೂಲಕ ನೆರೆದವರನ್ನು ರಂಜಿಸಿದರು. ಕಲಾವಿದರಿಗೆ ಕನ್ನಡ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಘದ ಸದಸ್ಯರಾದ ಪ್ರಹ್ಲಾದ ಕುಲಕರ್ಣಿ, ಶಶಿಕಾಂತ ಮರ್ಪಲ್ಲಿಕರ, ರತನಕರ ನಗರ್ಕರ್ ಮತ್ತು ಶಿವಾ ಉಗಲತ ಕನ್ನಡ ಹಾಡಿನ ಮೂಲಕ ಮನ ಸೆಳೆದರು.

ಕಾರ್ಯಕ್ರಮಕ್ಕೆ ಬನಶಂಕರಿ ಹಿರೇಮಠ, ಸೋಮಶೇಖರ ಪಾಟೀಲ, ಸಂಗೀತಾ ಪಾಟೀಲ್, ಅಮೃತಾ ಸ್ವಾಮಿ, ಸಾಯಿರಾಂ ಮಂಗಲಗಿ, ಸುನೀತಾ ಬುಕ್ಕಾ, ಸವಿತಾ ಸ್ವಾಮಿ ಸೇರಿದಂತೆ ಕರ್ನಾಟಕದ ಅನೇಕ ಜನ ಭಾಗವಹಿಸಿದ್ದರು. ತನುಜಾ ಆಡಗಾವಕರ್ ನಿರುಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here