ಕಲಬುರಗಿ; ತೆಲಂಗಾಣಾ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಭರ್ಜರಿ ಗೆಲುವು ಸಾಧಿಸಿರುವುದಕ್ಕೆ ಕಲಬುರಗಿ ದಕ್ಷಿಣ ಕಾಂಗ್ರೆಸ್ ಶಾಸಕರಾದ ಅಲ್ಲಂಪ್ರಭು ಪಾಟೀಲ್ ಹರುಷ ವ್ಯಕ್ತಪಡಿಸಿದ್ದಾರೆ.
ತೆಲಂಗಾಣದ ಬಿಎಸ್ ಆರ್ ಸರ್ಕಾರ ನಡೆಸಿರುವ ಭ್ರಷ್ಟಾಚಾರದ ವಿರುದ್ದ ಅಲ್ಲಿನ ಜನರ ಆಕ್ರೋಶ ಈ ಫಲಿತಾಂಶದಲ್ಲಿ ವ್ಯಕ್ತವಾಗಿದೆ. ಅಲ್ಲಿ ಬಿಎಸ್‌ಆರ್ ಪಕ್ಷದ ವಿರೋಧದಲ್ಲಿ ಭಾರಿ ಅಲೆ ಇತ್ತು ಎಂಬುದು ಅಲ್ಲಿನ ಚುನಾವಣಾ ಪ್ರಚಾರದಲ್ಲಿ ತಾವು ಹೋದಾಗೆಲ್ಲಾ ಅನುಭಕ್ಕೆ ಬಂದಿತ್ತು. ಅದೀಗ ವಿಜಯಲಕ್ಷ್ಮೀಯಾಗಿ ಕಾಂಗ್ರೆಸ್‌ಗೆ ಒಲಿದಿದೆ ಎಂದು ಅಲ್ಲಂಪ್ರಭು ಪಾಟೀಲ್ ಹೇಳಿದ್ದಾರೆ.
ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ, ರಾಜ್ಯದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸಚಿವರೊಂದಿಗೆ ತೆಲಂಗಾಣದಲ್ಲಿ ಅಲ್ಲಂಪ್ರಭು ಪಾಚೀಲರು ಎಐಸಿಸಿ ಆದೇಶದಂತೆ ಪಕ್ಷದ ಸಭೆ- ಸಮಾರಂಭಗಳಲ್ಲಿ ನಿರಂತರವಾಗಿ ಪಲ್ಗೊಂಡಿದ್ದಲ್ಲದೆ ಅಲ್ಲಿನ ಅನೇಕ ಅಸಂಬ್ಲಿ ಕ್ಷೇತ್ರಗಳಲ್ಲಿ ಸುತ್ತಾಡಿ ಅಭ್ಯರ್ಥಿಗಳ ಪರವಾಗಿ ಬಿರುಸಿನ ಪ್ರಚಾರದಲ್ಲಿಯೂ ತೊಡಗಿಸಿಕೊಂಡಿದ್ದರು.
ಬಿಎಸ್‌ಆರ್ ಪಕ್ಷ ತನ್ನ ಅಧಿಕಾರ ಅವಧಿಯಲ್ಲಿ ಅನೇಕ ಹಗರಣಗಳನ್ನು ಮಾಡಿ ಜನರ ಕೆಂಗಣ್ಣಿಗೆ ಗುರಿಯಾಗಿತ್ತು. ಅಲ್ಲಿನ ಜನ ತೆಲಂಗಾಣ ಸುರಕ್ಷಿತವಾಗಿರಬೇಕಾದರೆ ಕಾಂಗ್ರೆಸ್ ಗೆಲ್ಲಿಸಬೇಕು ಎಂದು ಸಂಕಲ್ಪಿಸಿದ್ದರು, ಅದರ ಫಳವಾಗಿಯೇ ಇಂದು ತೆಲಂಗಾಣದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಮಂದಿನ ದಿನಗಳಲ್ಲಿ ತೆಲಂಗಾಣದಲ್ಲಿ ಪಕ್ಷದ ಆಡಳಿತ ಎಲ್ಲಾ ರಂಗದಲ್ಲಿಯೂ ಸುಭಿಕ್ಷೆ ತರಲಿದೆ ಎಂದು ಅಲ್ಲಂಪ್ರಭು ಪಾಟೀಲ್ ಹೇಳಿದ್ದಾರೆ.