ಶೂದ್ರ ವರ್ಗದಿಂದ ಭಾರತ ನಿರ್ಮಾಣ: ಮಾಜಿ ಸಿಎಂ. ಎಂ. ವೀರಪ್ಪ ಮೊಯಿಲಿ

0
205

ಕಲಬುರಗಿ: ಶೂದ್ರ ವರ್ಗದ ಮಹಾನಂದ, ಚಂದ್ರಗುಪ್ತ ಮೌರ್ಯ ಮುಂತಾದವರು ಈ ದೇಶಕ್ಕೆ ದಿಕ್ಕು, ದೆಸೆ ಹಾಗೂ ನಕಾಶೆ ಒದಗಿಸಿದ್ದಲ್ಲದೆ ಇಂಡಿಯಾ ಇಲ್ಲವೇ ಭಾರತ ಎಂಬ ಕಲ್ಪನೆಯನ್ನು ಕಟ್ಟಿಕೊಟ್ಟವರು ಎಂದು ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕøತ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ ಅಭಿಪ್ರಾಯಪಟ್ಟರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದ ಕನ್ನಡ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕನ್ನಡ ಜಾಗೃತಿ ಸಮಾವೇಶ ಹಾಗೂ ಪತ್ರಕರ್ತ ಡಾ. ಶಿವರಂಜನ ಸತ್ಯಂಪೇಟೆ ಸಂಪಾದಿಸಿದ ವಿಜಯ ವಿಶೇಷ (ವರ್ಷ ಎರಡು ಹರ್ಷ ನೂರು) ಕೃತಿ ಜನಾರ್ಪಣೆ ಮಾಡಿ ಮಾತನಾಡಿದ ಅವರು, ಕನ್ನಡಿಗರು ಸರ್ವೋದಯ, ಸಮನ್ವಯತೆ ಹಾಗೂ ವಿಶಾಲ ದೃಷ್ಟಿ ಬೆಳೆಸಿಕೊಳ್ಳಬೇಕು. ವೈಚಾರಿಕ, ವಿಶ್ವ ಪ್ರಜ್ಞೆ ಕನ್ನಡಿಗರದ್ದಾಗಬೇಕು ಎಂದು ಕರೆ ನೀಡಿದರು.

Contact Your\'s Advertisement; 9902492681
ಸಾಹಿತ್ಯದಿಂದ ಮನಸ್ಸು ಪರಿವರ್ತನೆಯಾಗಬೇಕು. ಜಾಗತಿಕ ಭಾಷೆಯ ಸಾಹಿತ್ಯ ಕನ್ನಡದಲ್ಲಿ ಸಂಗ್ರಹವಾಗಬೇಕು. ಕನ್ನಡಿಗರು ಹೊಸ ಅನ್ವೇಷಣೆಯಲ್ಲಿ ತೊಡಗುವ ಮೂಲಕ ಕನ್ನಡ ಭಾಷೆಗೆ ಭದ್ರ ಬುನಾದಿ ಒದಗಿಸಬೇಕು. -ಎಂ.ವೀರಪ್ಪ ಮೊಯಿಲಿ, ಮಾಜಿ ಸಿಎಂ

ದೇಶವನ್ನು ಕಾಡುತ್ತಿರುವ ಜಾತಿ, ಮತದ ಭಿನ್ನಾಭಿಪ್ರಾಯ ಸೇರಿದಂರೆ ಅನೇಕ ಕ್ಲೇಶಗಳನ್ನು ತೊಡೆದು ಹಾಕಿ, ವಿಶ್ವಮಾನವರಾಗಬೇಕು. ಕನ್ನಡಿಗರು ದ್ವೀಪವಾಗದೆ ಸಾಗರ ಆಗಬೇಕು. ಕನ್ನಡಿಗರು ವಿಶ್ವಭಾಷಾ ಪ್ರಜ್ಞೆ ಬೆಳೆಸಿಕೊಳ್ಳುವ ಮೂಲಕ ಕನ್ನಡ ಕಟ್ಟುವ ಕೆಲಸದಲ್ಲಿ ನಿರತರಾಗಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಉಪ ಕಾರ್ಯದರ್ಶಿ ಪ್ರಮೀಳಾ ಎಂ.ಕೆ. ಮಾತನಾಡಿ, ಕನ್ನಡ ಭಾಷೆಯ ಅಭಿಮಾನ ಕೇವಲ ವೇದಿಕೆಗೆ ಸೀಮಿತವಾಗದೆ ನಿರಂತರವಾಗಿ ಜನಮಾನಸದಲ್ಲಿ ಉಳಿಯುವಂತಾಗಬೇಕು. ಕನ್ನಡ ಕಟ್ಟುವ ಅವಕಾಶವನ್ನು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಅವರು ಬಹಳ ಉತ್ಸುಕತೆಯಿಂದ ಬಳಸಿಕೊಳ್ಳುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೃತಿ ಸಂಪಾದಕ ಡಾ. ಶಿವರಂಜನ ಸತ್ಯಂಪೇಟೆ ಮಾತನಾಡಿ, ಈ ಕಿರು ಹೊತ್ತಿಗೆಯಲ್ಲಿ ಕನ್ನಡ ಭಾಷೆ, ಗಡಿ, ಮಹಿಳೆ, ಮಕ್ಕಳು, ಪ್ರಜೆಗಳ ಹಕ್ಕು ಹಾಗೂ ಕರ್ತವ್ಯ, ಕೃಷಿ, ಮಾಧ್ಯಮ, ಕಲೆ, ಸಾಹಿತ್ಯ ಸಂಗೀತ ಹೀಗೆ ಬದುಕಿನ ಎಲ್ಲ ಕ್ಷೇತ್ರಗಳ ಬಗ್ಗೆ ಸ್ವಾಮೀಜಿಗಳು, ರಾಜಕಾರಣಿಗಳು, ಸಾಹಿತಿಗಳು ಹಾಗೂ ಜನಸಮಾನ್ಯರ ಅಭಿಮತವನ್ನು ಇಲ್ಲಿ ಸಂಗ್ರಹಿಸಿಕೊಡಲಾಗಿದೆ ಎಂದರು.

ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅಧ್ಯಕ್ಷತೆ ವಹಿಸಿದ್ದರು. ರವೀಂದ್ರಕುಮಾರ ಭಂಟನಳ್ಳಿ ನಿರೂಪಿಸಿದರು. ಯಶವಂತರಾಯ ಅಷ್ಟಗಿ ಸ್ವಾಗತಿಸಿದರು. ಮುಡಬಿ ಗುಂಡೇರಾವ ಪ್ರಾಸ್ತಾವಿಕ ಮಾತನಾಡಿದರು. ಕಲ್ಯಾಣಕುಮಾರ ಶೀಲವಂತ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here