ಪರಿಸರ ಜಾಗೃತಿಗೆ ಹಿರಿಯ ಸಿವಿಲ್ ನ್ಯಾಯಾಧೀಶರ ಕರೆ

0
39

ಬೀದರ್: ಪರಿಸರ ಜಾಗೃತಿಗಾಗಿ ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಸಿದ್ರಾಮ್ ಟಿ.ಪಿ. ಅವರು ಇಲ್ಲಿ ಕರೆ ನೀಡಿದರು.

ಗುರುನಾನಕ್ ದೇವಜಿ ಅವರ ೫೫೦ನೇ ಜಯಂತ್ಯುತ್ಸವ ನಿಮಿತ್ಯ ಗುರುನಾನಕ್ ಸಂಸ್ಥೆಗಳ ಅಡಿಯಲ್ಲಿ ನಮ್ಮ ನಡಿಗೆ ಹಸಿರಿನೆಡೆಗೆ ಎಂಬ ಘೋಷವಾಕ್ಯದಲ್ಲಿ ಶನಿವಾರ ಜರುಗಿದ ಶಾಲಾ ವಿದ್ಯಾರ್ಥಿಗಳ ರ‍್ಯಾಲಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಯಾಂತ್ರಿಕ ಜೀವನ ಕ್ರಮದಿಂದಾಗಿ ವಹಾನಗಳ ಹೊಗೆದಟ್ಟಿನಿಂದ ಉಸಿರುವ ಗಟ್ಟುವಂತಹ ಪರಿಸರ ನಿರ್ಮಾಣವಾಗಿದೆ. ಮನುಷ್ಯ ತನ್ನ ಸ್ವರ್ಥಕ್ಕಾಗಿ ಗಿಡಮರಗಳನ್ನು ತುಂಡರಿಸಿ ಇಂತಹ ಅನಾಹುತಕ್ಕೆ ಎಡೆಮಾಡಿಕೊಟ್ಟಿದ್ದಾನೆ. ಮುಂದಿನ ಪಿಳಿಗೆ ಸ್ವಚ್ಛ ಪರಿಸರಕ್ಕಾಗಿ ಪರದಾಡಬೇಕಾದ ಪರಿಸ್ಥಿತಿ ಒದಗಿಬರಬಹುದು. ಇದಕ್ಕೆ ಏಕೈಕ ಉಪಾಯವೆಂದರೆ ಪರಿಸರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ತಲೆಗೊಂದು ಮರ, ಊರಿಗೊಂದು ವನ ಎಂಬ ನೀರಿ ಅನುರಿಸರಿ ಅದರಂತೆ ನಡೆದರೆ ಮಾತ್ರ ಭಾವಿ ಪೀಳಿಗೆಗೆ ಉಡಿಗಾಲವಿದೆ ಎಂದು ಅಭಿಪ್ರಾಯಪಟ್ಟರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಹಸಿರು ನಿಶಾನೆ ತೋರಿಸುವ ರ‍್ಯಾಲಿಗೆ ಚಾಲನೆ ನೀಡಿದ ಗುರುನಾನಕ್ ಸಂಸ್ಥೆ ಆಡಳಿತ ಮಂಡಳಿಯ ಉಪಾಧ್ಯೆಕ್ಷೆ ಶ್ರೀಮತಿ ರೇಷ್ಮಾ ಕೌರ್ ಅವರು ಮಾತನಾಡಿ, ನಿಮ್ಮ ಈ ಕ್ರಮ ಜನರಿಗೆ ಜಾಗೃತಿ ಮೂಡಿಸಿ ಹಸಿರು ಕ್ರಾಂತಿಗೆ ಒಂದು ಅಳಿಲು ಸೇವೆಯಂದು ಭಾವಿಸಿ ಇದು ಕೇವಲ ತೋರಿಕೆಯ ಕ್ರಮವಾಗದೆ ನಾವೆಲ್ಲರು ಹಸಿರನ್ನು ಉಳಿಸಿ ಬೆಳೆಸಿಕೊಂಡು ಹೋಗುವಂತಾಗಬೇಕು ಎಂದು ಕರೆ ನೀಡಿದರು.

ರ‍್ಯಾಲಿಯು ಗುರುನಾನಕ್ ಶಾಲೆಯಿಂದ ಹೊರಟು ರೋಟರಿ ಕ್ಲಬ್, ಗುದಗೆ ಆಸ್ಪತ್ರೆ, ಮೋಹನ್ ಮಾರ್ಕೆಟ್, ಅಂಬೇಡ್ಕರ್ ಸರ್ಕಲ್ ಮುಖಾಂತರ ಜನವಾಡಾ ರಸ್ತೆ ಮಾರ್ಗವಾಗಿ ಚಿಕ್‌ಪೆಟ್ ಹತ್ತಿರ ವರ್ತುಲ ರಸ್ತೆ ಪಕ್ಕ ನಿರ್ಮಿಸಿದ ಬೃಹತ ಸಮಾವೇಶದಲ್ಲಿ ಕೊನೆಗೊಂಡಿತು.

ಕಾರ್ಯಕ್ರಮದಲ್ಲಿ ಶ್ರೀ ನಾನಕ್ ಝಿರಾ ಸಾಹೇಬ್ ಫೌಂಡೆಷನ್‌ನ ಅಧ್ಯಕ್ಷ ಡಾ. ಸರದಾರ್ ಬಲಬೀರಸಿಂಗ್, ಗುರುನಾನಕ್ ಇಂಜಿನಿಯರಿಂಗ್ ಕಾಲೇಜಿನ ಆಡಳಿತ ಮಂಡಳಿಯ ನಿರ್ದೇಶಕರು, ಸಂಸ್ಥೆಯ ಉಪಾಧ್ಯಕ್ಷರು ಮತ್ತು ಗುರುನಾನಕ್ ಸಂಸ್ಥೆಯ ಪ್ರಿನ್ಸಿಪಾಲರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here