ಸುರಪುರ: ನಗರದ ಉಪ ಕಾರಾಗೃಹದಲ್ಲಿ ಎಸ್.ಟಿ.ಐ,ಹೆಚ್.ಐ.ವಿ, ಟಿ.ಬಿ,ಐ.ಎಸ್.ಹೆಚ್.ಟಿ.ಹೆಚ್ ಅಭಿಯಾನ ಕಾರ್ಯಕ್ರಮ ನಡೆಸಲಾಗಿದೆ.
ಕಾರ್ಯಕ್ರಮ ಉದ್ಘಾಟಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ:ಆರ್.ವಿ ನಾಯಕ ಮಾತನಾಡಿ, ಭಾರತ ಸರಕಾರವು ರಾಷ್ಟ್ರೀಯ ಏಡ್ಸ್ ನಿಯಂತ್ರಣ ಕಾರ್ಯಕ್ರಮವನ್ನು ರಾಜ್ಯ ಸರಕಾರದ ಸಹಯೋಗದೊಂದಿಗೆ ಜನ ಸಾಮಾನ್ಯರಿಗೆ ಹೆಚ್.ಐ.ವಿ,ಏಡ್ಸ್ ತಡೆಗಟ್ಟುವಿಕೆ, ಪತ್ತೆಹಚ್ಚುವಿಕೆ,ಚಿಕಿತ್ಸೆ ನೀಡುವಿಕೆಯ ಮುಖಾಂತರ ಪ್ರಪಂಚದಾದ್ಯಂತ ನಡೆಸುತ್ತಿರುವ ಅತಿದೊಡ್ಡ ಕಾರ್ಯಕ್ರಮಗಳಲ್ಲಿ ಇದು ಒಂದಾಗಿದೆ ಎಂದರು.
ಈ ಕಾರ್ಯಕ್ರಮವು ಕರ್ನಾಟಕ ರಾಜ್ಯ ಏಡ್ಸ್ ಪ್ರವೆನ್‍ಷನ್ ಸೊಸೈಟಿಯು ನ್ಯಾಕೋ ಸಂಸ್ಥೆಯ ಮಾರ್ಗದರ್ಶನದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ,ಕಾರಾಗೃಹ ಸುಧಾರಣೆ ಸೇವೆಗಳ ಇಲಾಖೆ,ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಗಳ ಸಹಯೋಗ ದೊಂದಿಗೆ ಉಪ ಕಾರಾಗೃಹದಲ್ಲಿ ಎಸ್.ಟಿ.ಐ,ಹೆಚ್.ಐ.ವಿ,ಟಿ.ಬಿ,ಐ. ಎಸ್.ಹೆಚ್.ಟಿ.ಹೆಚ್ ಅಭಿಯಾನ ಕಾರ್ಯಕ್ರಮ ನಡೆಸಲಾಗುತ್ತಿದೆ,ಈ ರೋಗಗಳ ಬಗ್ಗೆ ಅರಿತುಕೊಳ್ಳುವು,ತಡೆಗಟ್ಟುವುದು ಹಾಗೂ ಚಿಕಿತ್ಸೆಯನ್ನು ಪಡೆಯುವುದು ಮುಖ್ಯವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾರಾಗೃಹದ ಅಧಿಕ್ಷಕ ಸಿದ್ರಾಮಪ್ಪ ವಡ್ಡರ,ಎಸ್.ಟಿ.ಎಸ್ ಹಣಮಂತ ಅನವಾರ,ರಾಘವೇಂದ್ರ,ಪ್ರದೀಪ ಕೌನ್ಸಿಲರ್,ಪ್ರಯೋಗಶಾಲಾ ತಜ್ಞ ಶ್ರೀಕಾಂತಯ್ಯ ಹಾಗು ಆರೋಗ್ಯ ಇಲಾಖೆ ಸಿಬ್ಬಂದಿಗಳು,ಸಮಯೋಜಕರು,ಕಾರಾಗೃಹದ ಸಿಬ್ಬಂದಿಗಳು ಹಾಗೂ ಕೈದಿಗಳು ಭಾಗವಹಿಸಿದ್ದರು.