ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳಕ್ಕೆ ಶಿಕ್ಷಣ ಇಲಾಖೆ ಪ್ರಯತ್ನ

0
29

ಶಹಾಬಾದ: ವಿದ್ಯಾರ್ಥಿಗಳಿಗೆ ಗಣಿತ ಕಬ್ಬಿಣದ ಕಡಲೆ ಅಲ್ಲ. ಇಂಗ್ಲಿಷ್ ವಿಷಯ ಕಠಿಣ ಎಂದು ಹಿಂಜರಿಯಬೇಕಿಲ್ಲ ನಿಗದಿತ ಓದು ಮತ್ತು ಪ್ರಯತ್ನ ಯಶಸ್ಸಿಗೆ ದಾರಿ ಎನ್ನುವ ದೃಷ್ಟಿಕೋನದಡಿ ತಾಲೂಕು ಶಿಕ್ಷಣ ಇಲಾಖೆ ಎಸ್.ಎಸ್.ಎಲ್.ಸಿ ಉತ್ತಮ ಫಲಿತಾಂಶ ತರಲು ಸಕಲ ಕ್ರಮ ಕೈಗೊಳ್ಳಲು ಮುಂದಾಗಿದೆ.

ಇಂಥದೊಂದು ಪ್ರಯೋಗವನ್ನು ತಾಲೂಕು ಶಿಕ್ಷಣ ಇಲಾಖೆ ಈಗಾಗಲೇ ಈ ಹಿಂದೆ ಚಿತ್ತಾಪುರ, ವಾಡಿ, ಕಾಳಗಿಯಲ್ಲಿ ನಡೆಸಿದೆ.ಈ ಬಾರಿಯೂ ನಗರದ ಗಂಗಮ್ಮ ಶಾಲೆ ಆವರಣದಲ್ಲಿ ಹತ್ತರ ಭಯ ಹತ್ತಿರ ಬೇಡ ಎಂಬ ಕಾರ್ಯಗಾರ ಆಯೋಜಿಸುವ ಮೂಲಕ ಮಕ್ಕಳು, ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕರಿಂದ ಉತ್ತಮ ಪ್ರತಿಕ್ರಿಯೆಗೆ ಬುಧವಾರ ಸಾಕ್ಷಿಯಾಯಿತು.

Contact Your\'s Advertisement; 9902492681

ತಾಲೂಕಿನ ಸುತ್ತಮುತ್ತಲಿನ ಗ್ರಾಮದ ಸರಕಾರಿ, ಅನುದಾನಿತ ಹಾಗೂ ಅನುದಾನರಹಿತ ಪ್ರೌಢಶಾಲೆಗಳ ಹತ್ತನೇ ತರಗತಿಯ ಸುಮಾರು 1700ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಈ ಕಾರ್ಯಾಗಾರದ ಲಾಭ ಪಡೆದುಕೊಂಡರು. ಮಕ್ಕಳಿಗೆ ಗಣಿತ ಮತ್ತು ಇಂಗ್ಲಿμï ವಿಷಯಗಳ ಕುರಿತು ವಿಶೇಷ ವಿಷಯ ತಜ್ಞರಿಂದ ಓದುವುದು ಹೇಗೆ ? ಪರೀಕ್ಷೆಗಳಲ್ಲಿ ಎಂಥ ಪ್ರಶ್ನೆಗಳು ಕೇಳಬಹುದು? ಬಿಡಿಸುವುದು ಹೇಗೆ ? ಪರೀಕ್ಷೆ ತಯಾರಿ ಹೇಗೆ ? ಯಾವ ಪಾಠಗಳ ಕಡೆಗೆ ಹೆಚ್ಚಿನ ಗಮನಹರಿಸುವುದು, ಸರಳವಾಗಿ ಬಿಡಿಸುವುದು ಹೇಗೆ ? ಸೇರಿದಂತೆ ಪ್ರೇರಣಾದಾಯಕವಾದ ಮಾತುಗಳನ್ನು ಹೇಳಿಕೊಟ್ಟಿದ್ದರಿಂದ ಮಕ್ಕಳು ಉಲ್ಲಾಸದಿಂದ ಕೇಳುತ್ತಾ ವಿಷಯ ತಜ್ಞರ ಸಲಹೆಗಳಿಗೆ ತಲೆಬಾಗುತ್ತಿರುವುದು ಕಂಡುಬಂದಿತು.

ಸಂಪನ್ಮೂಲ ವ್ಯಕ್ತಿ ಅಶೋಕ್ ಕಾಬಾ ಗಣಿತವನ್ನು ಸರಳವಾಗಿ ಬಿಡಿಸುವ ಕಲೆಯನ್ನು ಹೇಳಿಕೊಟ್ಟಿದ್ದನ್ನು ನೋಡಿ ಮಕ್ಕಳು ಆನಂದ ಪಟ್ಟರಲ್ಲದೇ, ಈ ಲೆಕ್ಕ ಎಷ್ಟು ಸರಳವಾಗಿ ಬಿಡಿಸಬಹುದಲ್ಲಾ ಎಂದು ಅಚ್ಚರಿ ಪಟ್ಟರು. ಅಲ್ಲದೆ ಇದನ್ನು ನಾನು ಬಿಡಿಸಬಲ್ಲೆ ಎಂದು ಧೈರ್ಯದಿಂದ ಪಕ್ಕದ ಗೆಳೆಯರಿಗೆ ಹೇಳಿಕೊಳ್ಳುವ ಸನ್ನಿವೇಶಗಳು ಕಂಡು ಬಂದವು. ಅಲ್ಲದೆ ಇಂಗ್ಲಿμï ವಿಷಯಕ್ಕೆ ಸಂಬಂಧಿಸಿದಂತೆ ವ್ಯಾಕರಣವನ್ನು ಮನಮುಟ್ಟುವಂತೆ ಹೇಳಿದ್ದನ್ನು ನೋಡಿ ಮಕ್ಕಳು ಖುಷಿಪಟ್ಟರು.

ಕಲ್ಬುರ್ಗಿ ಜಿಲ್ಲೆಯ ಸರ್ವಜ್ಞ ಸಂಸ್ಥೆ ಸಂಸ್ಥಾಪಕ ಚನ್ನಾರೆಡ್ಡಿ ಪಾಟೀಲ್ ಅವರಿಂದ ಪ್ರೇರಣದಾಯಕ ಮಾತುಗಳನ್ನು ಹೇಳಿಸಿ ಮಕ್ಕಳ ಮನಸ್ಸಿನಲ್ಲಿ ಧೈರ್ಯ, ಉತ್ಸಾಹ ಮತ್ತು ಆತ್ಮಮಾಲ ತುಂಬುವ ಕೆಲಸವನ್ನು ಶಿಕ್ಷಣ ಇಲಾಖೆ ಮಾಡಿತು. ಅದಲ್ಲದೇ ಬೆಂಗಳೂರಿನ ಖ್ಯಾತ ಮನೋವಿಜ್ಞಾನಿ ಡಾ.ಎ.ಎಸ್. ರಾಮಚಂದ್ರರಾವ ಅವರು ಮಕ್ಕಳಿಗೆ ಪ್ರಶ್ನೆ ಕೇಳಿ ಉತ್ತರ ಪಡೆಯುವ ಮೂಲಕ ಅವರಲ್ಲಿರುವ ಗೊಂದಲಗಳನ್ನು ಕಂಡುಕೊಂಡರು.ಪರೀಕ್ಷಾ ಭಯವನ್ನು ಹೋಗಲಾಡಿಸಲು ಅದಕ್ಕೆ ಬೇಕಾದ ಪರಿಹಾರಗಳನ್ನು ಮಕ್ಕಳಿಗೆ ಎಳೆಎಳೆಯಾಗಿ ಬಿಡಿಸಿ ಕೊಟ್ಟರು. ಒಟ್ಟಾರೆಯಾಗಿ ಮಕ್ಕಳಲ್ಲಿರುವ ಗೊಂದಲ ಅನುಮಾನಗಳನ್ನು ಪರಿಹರಿಸಲಾಯಿತು.

ಈ ಕಾರ್ಯಾಗಾರವನ್ನು ಜಸ್ಟಿಸ್ ಶಿವರಾಜ ಪಾಟೀಲ್ ಫೌಂಡೇಶನ್ ಸಹಕಾರದಿಂದ ನಡೆಸಲಾಯಿತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿದ್ದರಿಂದ ಮುಂದಿನ ಶೈಕ್ಷಣಿಕ ವರ್ಷದಲ್ಲೂ ಇನ್ನು ಉತ್ತಮ ರೀತಿಯಲ್ಲಿ ಕಾರ್ಯಗಾರವನ್ನು ಹಮ್ಮಿಕೊಂಡು ಶಿಕ್ಷಣದ ಗುಣಮಟ್ಟ ಜತೆಗೆ ಎಸ್.ಎಸ್.ಎಲ್.ಸಿ ಫಲಿತಾಂಶ ಹೆಚ್ಚಿಸಲಾಗುವುದು ಎಂದು ಚಿತ್ತಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದವೀರಯ್ಯ ರುದ್ನೂರ್ ತಿಳಿಸಿದರು.

ಈ ಸಂದರ್ಭದಲ್ಲಿ ಬಿಆರ್‍ಸಿ ಮಲ್ಲಿಕಾರ್ಜುನ ಸೇಡಂ,ಗಂಗಮ್ಮ ಶಾಲೆಯ ಕಾರ್ಯದರ್ಶಿ ಭೀಮಾಶಂಕರ ಮುಟ್ಟತ್ತಿ, ಪ್ರೌ.ಶಾ.ಶಿ.ಸಂ ತಾಲೂಕಾಧ್ಯಕ್ಷ ಚಿದಾನಂದ ಕುಡ್ಡನ್ ಹಾಗೂ ಗುರುಶಾಂತ ನಾಟೇಕಾರ, ಎಸ್.ಎಸ್.ಎಲ್.ಸಿ ನೋಡಲ್ ಅಧಿಕಾರಿ ವೆಂಕಟರೆಡ್ಡಿ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here