ರಂಗಂಪೇಟೆ ಬಸವ ನಿಲಯ ಆವರಣದಲ್ಲಿ ಬಸವ ತತ್ವ ಸಮಾವೇಶ

0
22

ಸುರಪುರ:ಇಂದು ಲಿಂ:ಬಸವಲಿಂಗಮ್ಮ ಶಿವಲಿಂಗಪ್ಪ ಗುಂಡಾನೂರ ಅವರ ಸ್ಮರಣೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ಬಸವ ತತ್ವ ಸಮಾವೇಶ ಅಂದಿನ ಅನುಭವ ಮಂಟಪದಂತಿದೆ ಎಂದು ಗುರುಮಠಕಲ್ ಖಾಸಾ ಮಠದ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮೀಜಿ ಮಾತನಾಡಿದರು.

ನಗರದ ರಂಗಂಪೇಟೆಯ ನೀಲಕಂಠೇಶ್ವರ ದೇವಸ್ಥಾನದ ಬಳಿಯ ಬಸವ ನಿಲಯ ಆವರಣದಲ್ಲಿ ಕೊಡೇಕಲ್ ಮಹಲಿನ ಮಠ,ದಾಸೋಹ ಮಹಾಮನೆಯ ಪೂಜ್ಯರಾದ ವೃಷಬೇಂದ್ರ ಅಪ್ಪನವರ ಸಮ್ಮುಖದಲ್ಲಿ ನಡೆಸಲಾದ ಬಸವ ತತ್ವ ಸಮಾವೇಶದ ಸಾನಿಧ್ಯವಹಿಸಿ ಮಾತನಾಡಿ,ಗುಂಡಾನೂರ ಪರಿವಾರ ದೇವರನ್ನು ಎಲ್ಲಿಯೂ ಹುಡುಕುವುದು ಬೇಡ ತಂದೆ ತಾಯಿಯಲ್ಲಿ ಇದ್ದಾರೆ ಎಂದು ಭಾವಿಸಿ ಪ್ರತಿವರ್ಷ ಬಸವ ತತ್ವ ಸಮಾವೇಶ ನಡೆಸುವ ಮೂಲಕ ಬಸವಾದಿ ಶರಣರ ಸ್ಮರಣೆ ಜೊತೆಗೆ ರೈತ ಕಾರ್ಮಿಕ ಸೇರಿದಂತೆ ಶ್ರಮಿಕ ವರ್ಗಗಳ ಸಮಸ್ಯೆ ಮತ್ತು ಸವಾಲುಗಳು,ವಚನ ಸಾಹಿತ್ಯದ ಚಿಂತನ ಮಂಥನ ನಡೆಸುವ ಮೂಲಕ ಮಾದರಿ ಕಾರ್ಯಕ್ರಮವನ್ನು ನಡೆಸುತ್ತಿದ್ದಾರೆ ಎಂದರು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿದ್ದ ಕೊಡೇಕಲ್‍ನ ಪ್ರವಚನಕಾರರಾದ ಬಸವರಾಜ ಭದ್ರಗೋಳ ಅವರು ಮಾತನಾಡಿ,12ನೇ ಶತಮಾನದ ಬಸವಾದಿ ಶರಣರು ತಮ್ಮ ವಚನಗಳ ಮೂಲಕ ನೀಡಿದ ಸಂದೇಶವನ್ನು ಕೊಡೇಕಲ್ ಬಸವಣ್ಣನವರು ಮುಂದುವರೆಸಿಕೊಂಡು ಬಂದಿದ್ದಾರೆ.ಶರಣು ಕಾಯಕ ದಾಸೋಹ ಸೂತ್ರಗಳ ಮೂಲಕ ಎಲ್ಲರಿಗೂ ಸಮಾನತೆಯನ್ನು ಮತ್ತು ಸೌಹಾರ್ದತೆಯನ್ನು ಬೋಧಿಸಿದ್ದಾರೆ,ಇಂತಹ ಶರಣರ ಸ್ಮರಣೆಯನ್ನು ಇಂದು ಬಸವ ತತ್ವ ಸಮಾವೇಶದ ಮೂಲಕ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಸಾಹಿತಿ ಶಿವಣ್ಣ ಇಜೇರಿ ಮಾತನಾಡಿ,ಇಂದಿನ ದಿನಮಾನಗಳಲ್ಲಿ ವಿದ್ಯಾವಂತರಲ್ಲಿಯೇ ಹೆಚ್ಚು ಮೂಢನಂಬಿಕೆಯನ್ನು ಕಾಣುತ್ತೇವೆ,ಮನುಷ್ಯ ವಿಚಾರವಂತಿಕೆಗಿಂತ ಮೂಢನಂಬಿಕೆಯ ಹಿಂದೆ ಹೊರಟಿರುವುದು ದುರದೃಷ್ಟಕರ ಸಂಗತಿ,ಶರಣರ ವಚನಗಳನ್ನು ಅರಿತು ನಡೆದರೆ ಬದುಕು ಹಸನಾಗುವ ಜೊತೆಗೆ ಸಮಾಜದಲ್ಲಿನ ಅಂಕು ಡೊಂಕುಗಳನ್ನು ದೂರಗೊಳಿಸಲು ಸಾಧ್ಯವಿದೆ ಎಂದರು.

ಕರ್ನಾಟಕ ರಾಜ್ಯ ರೈತ ಸಂಘದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ನಾಗತ್ನ ವಿ.ಪಾಟೀಲ್ ಮಾತನಾಡಿ,ಇಂದು ಕೃಷಿ ವಲಯ ದೇಶದಲ್ಲಿ ತುಂಬಾ ಸಂಕಷ್ಟದಲ್ಲಿದೆ,ಸರಕಾರಗಳು ರೈತರ ಯಾವುದೇ ಸಮಸ್ಯೆಗೆ ಸ್ಪಂಧಿಸದೆ ಇರುವುದರಿಂದ ಇನ್ನಷ್ಟು ಸಮಸ್ಯೆ ಹೆಚ್ಚಾಗಿದೆ,ರೈತರ ಸಮಸ್ಯೆ ದೂರವಾಗಲು ಹೋರಾಟ ಅಸ್ತ್ರವಾಗಿದ್ದು,ಕೇವಲ ರೈತರು ಮಾತ್ರ ಹೋರಾಟ ಮಾಡಿದರೆ ಸಾಲದು ತಾವೆಲ್ಲರು ಹೋರಾಟದಲ್ಲಿ ಭಾಗವಹಿಸಬೇಕು ಎಂದರು.ಅಲ್ಲದೆ ಬಸವ ತತ್ವ ಸಮಾವೇಶದ ಮೂಲಕ ಕೃಷಿಯ ಸಮಸ್ಯೆ ಸವಾಲುಗಳ ಕುರಿತು ಚಿಂತನೆ ಮಾಡುತ್ತಿರುವುದು ಸಂತೋಷದಾಯಕವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಚಿಂತಕ ಎಸ್.ಎಸ್. ಮಾರನಾಳ ಮಾತನಾಡಿ ಹಾಗೂ ಸಮಾಜಸೇವಕ ಕುಮಾರಸ್ವಾಮಿ ಗುಡ್ಡಡಗಿ,ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ರಂಗಂಪೇಟೆಯ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಸೂಗುರೇಶ ವಾರದ್,ದೇಹದಾನಿ ಯಾದಗಿರಿಯ ನಿವೃತ್ತ ಶಿಕ್ಷಕ ಯಂಕಪ್ಪ ಅಲೆಮನಿ,ನೇಕಾರ ಸಂಘದ ನೂತನ ಜಿಲ್ಲಾಧ್ಯಕ್ಷ ವಿರಸಂಗಪ್ಪ ಹಾವೇರಿ,ಸಂಗೀತ ಕಲಾವಿದ ಶರಣಪ್ಪ ಕಮ್ಮಾರ,ಜೀವ ವಿಮಾ ನಿಗಮದ ಶಿವಣ್ಣ ಶಹಾಪುರ,ಭೀಮರಾಯ ಶಹಾಪುರ ಹಾಗೂ ಮಲ್ಲಿಕಾರ್ಜುನ ಶಹಾಪುರ ಇವರುಗಳಿಗೆ ಶರಣ ಸನ್ಮಾನ ನಡೆಸಲಾಯಿತು.ಇದೇ ಸಂದರ್ಭದಲ್ಲಿ 2024ನೇ ಸಾಲಿನ ಬಸವ ದಿನಚರಿ ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದ ಆರಂಭದಲ್ಲಿ ವಿಶ್ವಗುರು ಬಸವಣ್ಣನವರ ಹಾಗೂ ಲಿಂ:ಬಸವಲಿಂಗಮ್ಮ ಶಿವಲಿಂಗಪ್ಪ ಗುಂಡಾನೂರ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ಜ್ಯೋತಿ ಪ್ರಜ್ವಲನೆ ಮೂಲಕ ಚಾಲನೆ ನೀಡಲಾಯಿತು.ಹಿರಿಯ ಗಾಯಕ ಶ್ರೀಹರಿರಾವ್ ಆದವಾನಿ,ಪದ್ಮಾ ನಾಲವಾರ,ಸುವರ್ಣ ಹಿರೇಮಠ ಸತ್ಯಂಪೇಟೆ ವಚನ ಗಾಯನ ನಡೆಸಿಕೊಟ್ಟರು.ವೇದಿಕೆಯಲ್ಲಿ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಗುಂಡಣ್ಣ ಕಲಬುರ್ಗಿ,ದೇಹದಾನಿ ಯಂಕಪ್ಪ ಅಲೆಮನೆ,ಚನ್ನಮಲ್ಲಿಕಾರ್ಜುನ ಗುಂಡಾನೂರ ಉಪಸ್ಥಿತರಿದ್ದರು.

ವಿರಸಂಗಪ್ಪ ಹಾವೇರಿ ಅಧ್ಯಕ್ಷತೆ ವಹಿಸಿದ್ದರು.ರಾಜು ಕುಂಬಾರ ನಿರೂಪಿಸಿದರು,ಚನ್ನಬಸವ ಬಾಗೋಡಿ ಸ್ವಾಗತಿಸಿದರು,ಶಿವರುದ್ರ ಉಳ್ಳಿ ವಂದಿಸಿದರು.ಕಾರ್ಯಕ್ರಮದಲ್ಲಿ ಹೋರಾಟಗಾರ ಮಲ್ಲಿಕಾರ್ಜುನ ಸತ್ಯಂಪೇಟೆ,ಸಂಗಮೇಶ ಗೋಗಿ,ಡಾ:ಎನ್.ಡಿ.ಪುರತಗೇರಿ,ಜಗದೀಶ ಬೇಲಿ ಗುರುಮಠಕಲ್,ಶಿವಾನಂದ ಕಾದಳ್ಳಿ,ಮಲ್ಲಣ್ಣ ಗುಳಗಿ,ಮಕ್ತುಂ ಸಾಬ್ ಅಮ್ಮಾಪುರ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here