ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸಲು ಎಬಿವಿಪಿ ಪ್ರತಿಭಟನೆ

0
20

ಸುರಪುರ:ರಾಜ್ಯದಲ್ಲಿರುವ ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಪ್ರತಿಭಟನೆ ನಡೆಸಿ ಒತ್ತಾಯಿಸಿದರು.ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಮುಂದೆ ಮೊದಲು ಜಮಾವಣೆಗೊಂಡ ಎಬಿವಿಪಿ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಸರಕಾರ ವಿರುದ್ಧ ಘೋಷಣೆಗಳನ್ನು ಕೂಗಿ ನಂತರ ತಹಸೀಲ್ದಾರ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ತಹಸೀಲ್ದಾರ್ ಕಚೇರಿ ಮುಂದೆ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಅನೇಕರು ಮಾತನಾಡಿ,ರಾಜ್ಯದಲ್ಲಿರುವ ಅತಿಥಿ ಉಪನ್ಯಾಸಕರು ತಮ್ಮನ್ನು ಖಾಯಂಗೊಳಿಸಬೇಕು ಎಂದು ಆಗ್ರಹಿಸಿ ತರಗತಿಯನ್ನು ಬಹಿಷ್ಕರಿಸಿ ಧರಣಿಯನ್ನು ನಡೆಸುತ್ತಿರುವುದರಿಂದ ಯಾವುದೇ ತರಗತಿಗಳು ನಡೆಯುತ್ತಿಲ್ಲ,ಇದರಿಂದ ವಿದ್ಯಾರ್ಥಿಗಳ ಓದಿಗೆ ತುಂಬಾ ತೊಂದರೆಯುಂಟಾಗಿದೆ,ಇನ್ನೇನು ಕೆಲವೇ ದಿನಗಳಲ್ಲಿ ಸೆಮಿಸ್ಟರ್ ಪರೀಕ್ಷೆಗಳು ಬರುತ್ತಿದ್ದು,ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳು ಪರೀಕ್ಷೆಯನ್ನು ಹೇಗೆ ಬರೆಯಲು ಸಾಧ್ಯವಿದೆ,ಇದರಿಂದ ವಿದ್ಯಾರ್ಥಿಗಳ ಭವಿಷ್ಯದ ಮೇಲು ಇದು ಪರಿಣಾಮ ಬೀರಲಿದೆ.ಆದ್ದರಿಂದ ಸರಕಾರ ಕೂಡಲೇ ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸಬೇಕು ಮತ್ತು ಕೂಡಲೇ ಎಲ್ಲಾ ಅತಿಥಿ ಉಪನ್ಯಾಸಕರು ತರಗತಿಗಳಿಗೆ ಮರಳಲು ಕ್ರಮವಹಿಸಬೇಕು ಇಲ್ಲವಾದಲ್ಲಿ ಎಬಿವಿಪಿ ಉಗ್ರ ಪ್ರತಿಭಟನೆ ನಡೆಸಬೇಕಾಗಲಿದೆ ಎಂದು ಎಚ್ಚರಿಸಿ,ನಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ತಹಸೀಲ್ದಾರ್ ಮೂಲಕ ಸಲ್ಲಿಸಿದರು.

Contact Your\'s Advertisement; 9902492681

ಪ್ರತಿಭಟನೆಯಲ್ಲಿ ಎಬಿವಿಪಿ ನಗರ ಘಟಕದ ಅಧ್ಯಕ್ಷ ಮಹಾಂತೇಶ ಸುಬೇದಾರ,ಪ್ರಧಾನ ಕಾರ್ಯದರ್ಶಿ ವಿನೋದಕುಮಾರ,ಕಾರ್ಯಕರ್ತರಾದ ದೇವರಾಜ ನಾಟೆಕಾರ,ಸುನೀಲ ರಾಠೋಡ,ತಿಮ್ಮಯ್ಯ ದೇಸಾಯಿ,ಅಭಿಷೇಕ,ರಾಜು ಕಟ್ಟಿಮನಿ,ಬಸವಪ್ರಭು,ರಾಜು ನಾಯಕ,ಬಾಲರಾಜ,ಪ್ರಕಾಶ,ಜ್ಯೋತಿ,ಸವಿತಾ ನಾಯಕ,ಮಹೇಶ,ತರುಣ ಹಾಗೂ ಅತಿಥಿ ಉಪನ್ಯಾಸಕರಾದ ಶಾಂತಕುಮಾರ,ಕೃಷ್ಣ ಹೊಸ್ಮನಿ,ಜಗದೀಶ ತಂಬಾಕೆ,ಹಣಮಂತ ಪಾಟೀಲ್,ಬಸವರಾಜ ಭಂಡಾರಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here