ಸುರಪುರ:ನಗರದ ಅಂಚೆ ಉಪ ವಿಭಾಗದ ಕಚೇರಿ ಮುಂದೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಗ್ರಾಮೀಣ ಅಂಚೆ ನೌಕರರ ಸಂಘ ನಡೆಸುತ್ತಿರುವ ಧರಣಿ ನಾಲ್ಕನೇ ದಿನವೂ ಮುಂದುವರೆದಿದ್ದು ನೂರಾರು ಗ್ರಾಮೀಣ ಅಂಚೆ ನೌಕರರು ಧರಣಿಯಲ್ಲಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ನೌಕರ ನಾಗರಾಜ ಕುಂಬಾರ ಸೇರಿದಂತೆ ಅನೇಕರು ಮಾತನಾಡಿ,ನಮ್ಮ ನ್ಯಾಯಯುತ ಬೇಡಿಕೆಯನ್ನು ಈಡೇರಿಸಲು ಅನೇಕ ವರ್ಷಗಳಿಂದ ಸರಕಾರಕ್ಕೆ ಮನವಿ ಮಾಡುತ್ತಿದ್ದೇವೆ,ನ್ಯಾಯಲಯದ ಆದೇಶವನ್ನು ಸರಕಾರ ಪಾಲಿಸುತ್ತಿಲ್ಲ,ಆದ್ದರಿಂದ ನಮ್ಮ ಬೇಡಿಕೆಯಾದ ಶೈಲೇಶ್ಚಂದ್ರ ವರದಿ ಜಾರಿಗೊಳಿಸುವವರೆಗೆ ಹೋರಾಟವನ್ನು ನಿರಂತರವಾಗಿ ನಡೆಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ದೇವಿಂದ್ರಪ್ಪ ಹುಣಸಿಹೊಳೆ,ಖಜಾಂಚಿ ಮಹೆಬೂಬ್ ಮುಲ್ಲಾ,ನೀಲಕಂಠ,ಚಂದ್ರಕಲಾ ಬಿಪಿಎಮ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.