ಸುರಪುರ: ಮನೆಗೊಂದು ಶೌಚಾಲಯ ಕಡ್ಡಾಯ, ಸ್ವಚ್ಛತೆ ಎಲ್ಲಿದೆಯೋ ಅಲ್ಲಿದೆ ಆರೋಗ್ಯ, ಸ್ವಚ್ಛ ಭಾರತ ಸ್ವಸ್ಥ ಭಾರತ ಸಮಾಜಕ್ಕೆ ಹಿತ ಎಂಬ ಘೋಷ ವಾಕ್ಯೆ ಮತ್ತು ಭಿತ್ತಿ ಪತ್ರಗಳೊಂದಿಗೆ ವಿದ್ಯಾರ್ಥಿಗಳು ನಗರದ ಪ್ರಮುಖ ರಸ್ತೆಗಳಲ್ಲಿ ಸ್ವಚ್ಛತಾ ಅಭಿಯಾನದ ಜಾಗೃತಿ ಜಾತ ನಡೆಸಿದರು.
ಸಮಗ್ರ ಶಿಕ್ಷಣ ಅಭಿಯಾನ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಅಗಸ್ತ್ಯ ಫೌಂಡೇಶನ ಸಹಯೋಗದಲ್ಲಿ ನಗರದ ದರಬಾರ ಕನ್ಯಾ ಮಾದರಿ ಹಿರಿಯ ಪ್ರಾತಮಿಕ ಶಾಲೆಯ ವಿದ್ಯಾರ್ಥಿಗಳು ಜಾಗೃತಿ ಜಾಥ ಮುಖಾಂತರ ಮನೆ, ರಸ್ತೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಅರಿವು ಮೂಡಿಸಿದರು. ಜಾಗೃತಿ ಜಾಥಕ್ಕೆ ಶಾಲೆಯ ಮುಖ್ಯಗುರುಗಳಾದ ಸೋಮರೆಡ್ಡಿ ಮಂಗಿಹಾಳ ಚಾಲನೆ ನೀಡಿದರು ಈ ಸಂದರ್ಭದಲ್ಲಿ ಮಾತನಾಡಿದ ಅವರು ಸ್ವಚ್ಛತೆ ಕುರಿತು ಪ್ರತಿಯೊಬ್ಬರು ಕಾಳಜಿ ವಹಿಸಬೇಕು ನಮ್ಮ ಸುತ್ತಮುತ್ತಲಿನ ಸ್ಥಳ ನಮ್ಮ ಮನೆಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದರಿಂದ ನಮ್ಮ ಆರೋಗ್ಯವು ಚನ್ನಾಗಿರುತ್ತದೆ ಮತ್ತು ಮಕ್ಕಳು ಈ ಸ್ವಚ್ಛತಾ ಅಭಿಯಾನದ ಕುರಿತು ತಮ್ಮ ಮನೆಯಲ್ಲಿ ತಿಳಿಸಿ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಜಾಗೃತಿ ಜಾಥ ನಂತರ ಮಕ್ಕಳಿಗೆ ಸ್ವಚ್ಛತಾ ವಿಷಯದ ಕುರಿತು ಚಿತ್ರಕಲಾ ಸ್ಪರ್ದೆ, ಪ್ರಬಂಧ ಸ್ಪರ್ದೆ, ಘೋಷಣೆ ವಾಕ್ಯಗಳನ್ನು ರಚಿಸುವ ಸ್ಪರ್ದೆಗಳನ್ನು ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮದಲ್ಲಿ ಫೌಂಡೇಶನ ಮುಖ್ಯಸ್ಥ ಮಲ್ಲಿಕಾರ್ಜುನ ಕಲಾಕರ, ಶಿಕ್ಷಕರಾದ ಚನ್ನಪ್ಪ ಹೂಗಾರ, ಮಹಿಬೂಬು ಸುಬಾನಿ, ಜೋಗಪ್ಪ, ಭಾಗ್ಯಶ್ರೀ, ಅನಿತಾ, ಪವಿತ್ರಾ, ಶರಣಯ್ಯ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.