ಸಿ.ಎಮ್ ಲಿಂಗಪ್ಪ ಸಾವಿಗೆ ನ್ಯಾಯ ನೀಡಲು ಆಗ್ರಹಿಸಿ ಕಂದಾಯ ನೌಕರರ ಪ್ರತಿಭಟನೆ

0
14

ಸುರಪುರ: ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ತಾಲೂಕು ಕಚೇರಿಯಲ್ಲಿ ಚುನಾವಣಾ ಶಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದ ಸಿ.ಎಮ್.ಲಿಂಗಪ್ಪ ಅವರಿಗೆ ಮೇಲಧಿಕಾರಿಗಳು ನೀಡಿದ ಒತ್ತಡ ಹಾಗೂ ಅವಮಾನ ದಿಂದ ಆತ್ಮಹತ್ಯೆ ಮಾಡಿಕೊಂಡಿದ್ದು ಇದಕ್ಕೆ ಕಾರಣರಾದ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ನಗರದ ತಹಸಿಲ್ದಾರ್ ಕಚೇರಿ ಮುಂದೆ ಕರ್ನಾಟಕ ರಾಜ್ಯ ಸರಕಾರಿ ಕಂದಾಯ ಇಲಾಖಾ ನೌಕರರ ಸಂಘ ದಿಂದ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು,ಸಿ.ಎಮ್.ಲಿಂಗಪ್ಪ ಅವರಿಗೆ ಮೇಲಧಿಕಾರಿಗಳು ಅತಿಯಾದ ಒತ್ತಡ ಹಾಕಿದ್ದಾರೆ,ಅಲ್ಲದೆ ಅವರಿಗೆ ಅವಮಾನ ಮಾಡಿದ್ದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಕೂಡಲೇ ಇವರ ಸಾವಿಗೆ ನ್ಯಾಯ ದೊರೆಯಬೇಕಾದರೆ,ಕೆಲಸದ ಒತ್ತಡ ನೀಡಿದ ಅಧಿಕಾರಿಗಳನ್ನು ಅಮಾನತ್ತುಗೊಳಿಸಿ ಸರಿಯಾದ ತನಿಖೆ ಮಾಡಿಸಿ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಮತ್ತು ಮೃತನ ಕುಟುಂಬಕ್ಕೆ 50 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

Contact Your\'s Advertisement; 9902492681

ನಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ತಹಸೀಲ್ದಾರ್ ಕೆ.ವಿಜಯಕುಮಾರ ಅವರ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಂಘದ ತಾಲೂಕು ಅಧ್ಯಕ್ಷ ಚನ್ನಬಸವ ಚಲುವಾದಿ,ಶಂಕರಾನಂದ,ರಾಜೇಸಾಬ್,ಶ್ವೇತಾ,ಅಬುಬಕರ್,ಪ್ರವೀಣ ಚಲುವಾದಿ, ಜಗದೀಶ,ಪ್ರಕಾಶ ರಾಠೋಡ,ಪ್ರತಾಪ,ಬಸವರಾಜ ಶೆಟ್ಟಿ,ಮಹೇಶ ಸಜ್ಜನ್,ವಿಜಯಕುಮಾರ,ವರುಣ್,ಸಂತೋಷ ರಾಠೋಡ,ಪ್ರದೀಪ ಕುಮಾರ,ಮಲಕಾಜಪ್ಪ,ದುಶ್ಯಂತ ಕುಮಾರ್,ಬಿಂಗಿ ಹನುಮಂತ,ಸುಮಂತರಡ್ಡಿ,ಬಿ.ಪ್ರೇಮಾ,ತೇಜಸ್ವಿನಿ,ರವಿ ಹೆಚ್,ಸೀಮಾದೇವಿ,ಪ್ರವೀಣಕುಮಾರ ಸಜ್ಜನ್,ಸರಸ್ವತಿ,ಫಾತೀಮಾ ಬೇಗಂ,ರವೀಂದ್ರ,ಶಿವಕುಮಾರ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here